Dog Viral Video : ವಿಭಿನ್ನ ಹವ್ಯಾಸದಿಂದ ಬಹು ಜನಪ್ರಿಯವಾದ ಲಾಯ್ಡ್ ನಾಯಿ ಮರಿ

ಮುದ್ದಿನಿಂದ ಸಾಕಿದ, ಸಾಕುಪ್ರಾಣಿಗಳು ಎಷ್ಟು ಉಪಕಾರಿಗಳೊ ಅಷ್ಟೇ ಪೇಚಿಗೆ ತಂದೊಡ್ಡುತ್ತವೆ. ಅದರಲ್ಲೂ ವಿಶೇಷವಾಗಿ ನಾಯಿ ಮರಿಗಳು ಮಾಡುವ ಆಟಗಳು ಬಹಳಷ್ಟು ಬಾರಿ ತಲೆನೋವಾಗಿ ಪರಿಣಮಿಸುತ್ತದೆ.  ಲಾಯ್ಡ್ ಹೆಸರಿನ ಈ  ಕಪ್ಪು ಬಿಳುಪು ನಾಯಿ ಮರಿ ಮಾಡುವ ತುಂಟಾಟದ ವಿಡಿಯೋ (Dog Viral Video) ಒಂದು ಇದೀಗ ಸಿಕ್ಕಾಪಟ್ಟೆ ಜನರಪ್ರೀತಿ ಗಳಿಸಿದೆ.

ಸುಮಾರು 20 ಗಂಟೆಗಳ ಮೊದಲು ರೇಡಿಟ್ ಎಂಬ ಮೀಮ್ಸ್ ಆ್ಯಪ್‌ನಲ್ಲಿ ಪೋಸ್ಟ್ ಆದ ಎರಡೂವರೆ ನಿಮಿಷದ ಈ ವಿಡಿಯೋ  ಈಗಾಗಲೇ ಆರು ಸಾವಿರದಷ್ಟು ವೋಟ್ ಗಳನ್ನು ಪಡೆದಿದೆ. ಅಷ್ಟೇ ಅಲ್ಲದೆ, ಪ್ರಪಂಚದ ಅನೇಕ ಶ್ವಾನ ಪ್ರಿಯರು ಈ ವೀಡಿಯೋಗೆ ವಿವಿಧ ರೀತಿಯಲ್ಲಿ ರಿಯಾಕ್ಟ್ ಮಾಡಿದ್ದಾರೆ.

ಹಾಗಾದ್ರೆ ವಿಡಿಯೋ ದಲ್ಲಿ ಏನಿದೆ?
ಕೇವಲ 20 ಗಂಟೆಗಳಲ್ಲಿ ಇಷ್ಟೊಂದು ವೈರಲ್ ಆದ ಈ ಎರಡು ನಿಮಿಷಗಳ ವಿಡಿಯೋ ಎಲ್ಲ ವರ್ಗದ ಜನರಿಗೂ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಯಾವುದೇ ಕಾರಣಗಳಿಲ್ಲದೆ, ಒಂದೊಂದೇ ಸಾಮಗ್ರಿಗಳನ್ನು ಬಾಯಲ್ಲಿರಿಸಿ ಅತ್ತಿಂದಿತ್ತ ಸಾಗಿಸುವ ಈ ಓರಿಯೋ ಬಿಸ್ಕಿಟ್ ನಂತೆ ಕಾಣುವ ನಾಯಿ ಮರಿ ಕಿತಾಪತಿ ಅಂತೂ ನೋಡಿದಷ್ಟು ಸಾಲದು.

ಏನೆಲ್ಲಾ ಕಸರತ್ತು ಮಾಡುತ್ತೆ ಈ ನಾಯಿಮರಿ?
ಸಾಧಾರಣವಾಗಿ ನಾಯಿಗಳು ತಮ್ಮ ಯಜಮಾನನಿಗೆ ಹಾಲು, ಪೇಪರ್, ದಿನಸಿ ಸಾಮಗ್ರಿ ಹೀಗೆ ತಂದು ಕೊಡುವುದನ್ನು ಕೇಳಿದ್ದೇವೆ, ಕೆಲವು ಕಡೆ ನೋಡಿದ್ದೇವೆ. ಆದರೆ ಈ ಲಾಯ್ಡ್ ಮರಿ ಮಾತ್ರ ಎಲ್ಲಕ್ಕಿಂತ ವಿಭಿನ್ನ. ಮನೆ ಒಳಗೆ ರಿಬ್ಬನ್, ಟೊಪ್ಪಿ,ಚೀಲ, ಶೂ ಹೀಗೆ ಒಂದೊದನ್ನೇ ಸಾಗಿಸಿ ಮನೆಯನ್ನೆಲ್ಲ ಗೋಜಲಾಗಿ ಮಾಡಿದೆ. ಸಣ್ಣ ಪುಟ್ಟ ವಸ್ತುಗಳನ್ನಷ್ಟೇ ಅಲ್ಲ, ತನ್ನಕ್ಕಿಂತ ದುಪ್ಪಟ್ಟು ದೊಡ್ಡದಾದ ಶೂ ಹಾಗೂ ಬ್ಯಾಗ್ ಕಚ್ಚಿ ಸಾಗುವುದನ್ನು ನೋಡಿದ್ರೆ, ನಗು ಬರದೇ ಇರಲಾರದು. ಈ ವಿಡಿಯೋದಲ್ಲಿ ಇನ್ನೊಂದು ದೊಡ್ಡ ನಾಯಿಯೂ ಇದ್ದು, ಅದು ಸುಮ್ಮನೆ ಈ ತುಂಟಾಟಗಳನ್ನು ನೋಡುತ್ತಿದೆ.

ತನ್ನ ಗಾತ್ರಕ್ಕಿಂತ ದುಪ್ಪಟ್ಟು ಗಾತ್ರದ ಶೂ ಹಾಗೂ ಬ್ಯಾಗ್ ಹೊರಲಾರದೆ, ಕಚ್ಚಿ ದೂಡುತ್ತ ಸಾಗುವ ಈ ನಾಯಿ ಮರಿಯ ಪರಿಶ್ರಮಕ್ಕೆ ನೆಟ್ಟಿಗರು ” ಈ ಮರಿ ಮನೆಯಲ್ಲೇ ಅಂಗಡಿ ತೆರೆಯುವ ಯೋಚನೆಯಲ್ಲಿದೆ”, ” ಪುಟಾಣಿ ಪರಿಶ್ರಮಿ”, “ಇದರಲ್ಲಿ ನಾಯಿ ಮರಿಯದ್ದು ತಪ್ಪೇನಿಲ್ಲ ಬಿಡಿ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Patralekhaa : ಪತ್ರಲೇಖಾ – ರಾಜ್‌ಕುಮಾರ್‌ ರಾವ್‌ ಅದ್ದೂರಿ ನಿಶ್ವಿತಾರ್ಥ : ಪ್ರೊಪೋಸಲ್‌ ವಿಡಿಯೋ ವೈರಲ್‌

(Viral Video Cute dog carries the most random things in its mouth from one room to another)

Comments are closed.