ಡಾಲಿ ಧನಂಜಯ್ ಅಭಿನಯದ 25 ನೇ ಸಿನಿಮಾ “ಗುರುದೇವ ಹೊಯ್ಸಳ” ಇಂದು (ಮಾರ್ಚ್ 30 ) ರಾಮನವಮಿಯಂದು ತೆರೆ ಕಂಡಿದೆ. ಈ ಸಿನಿಮಾದ ಡಾಲಿ ಧನಂಜಯ ಖಡಕ್ ಪೊಲೀಸ್ ಆಫೀಸ್‌ರಾಗಿ ಖಡಕ್ ಲುಕ್‌ನಲ್ಲಿ ಮಿಂಚಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್, ಹಾಡುಗಳು ಹಾಗೂ ಟ್ರೈಲರ್ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು, ಈ ಸಿನಿಮಾಕ್ಕಾಗಿ ಕಾತುರದಿಂದ ಕಾದಿದ್ದರು. ಹೀಗಾಗಿ ಇಂದು ತೆರೆ ಕಂಡ ಸಿನಿಮಾಕ್ಕಾಗಿ ಪ್ರೇಕ್ಷಕರು ಮುಗಿ ಬಿದ್ದಿದ್ದಾರೆ. ಹಾಗೆಯೇ ನಟ ಪುನೀತ್ ರಾಜ್‌ಕುಮಾರ್ ಧರ್ಮಪತ್ನಿ ಅಶ್ವಿನಿ (Dolly Dhananjaya – Ashwini Puneeth Rajkumar) ಅವರು ಸಿನಿತಂಡಕ್ಕೆ ಬಹಳ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ, ” ಇಂದು ಬಿಡುಗಡೆಯಾಗುತ್ತಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಶುಭ ಹಾರೈಕೆಗಳು. ‘ಗುರುದೇವ ಹೊಯ್ಸಳ’ ಇಡೀ ತಂಡಕ್ಕೆ ಶುಭವಾಗಲಿ ಮತ್ತು ಬೆಳ್ಳಿತೆರೆಯಲ್ಲಿ ಅದ್ದೂರಿಯಾಗಿ ಓಡಲಿ ಎಂದು ಹಾರೈಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ. ಹೀಗೆ ಈ ಸಿನಿತಂಡಕ್ಕೆ ವಸಿಷ್ಠ ಸಿಂಹ, ನಾಗಭೂಷಣ ಎನ್.ಎಸ್, ಕಿಚ್ಚ ಸುದೀಪ್ ಸೇರಿದಂತೆ ಅನೇಕ ಸ್ಟಾರ್ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.
ಇಂದು ಬಿಡುಗಡೆಯಾಗುತ್ತಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಶುಭ ಹಾರೈಕೆಗಳು.
— Ashwini Puneeth Rajkumar (@Ashwini_PRK) March 30, 2023
Good luck to the entire team of ‘Gurudev Hoysala’ and wishing it a glorious run on the silver screen. ✨#GurudevHoysala
ಈ ಸಿನಿಮಾವು ಗಡಿ ಭಾಗದ ಸಮಸ್ಯೆಯನ್ನೇ ಮೂಲವಾಗಿರಿಸಿಕೊಂಡು ಕಮರ್ಷಿಯಲ್ ಅಂಶದೊಂದಿಗೆ ಚಿತ್ರಿಕರಿಸಿದ್ದಾರೆ. ಈ ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುತ್ತದೆ. ಈ ಸಿನಿಮಾ ಡಾಲಿ ಧನಂಜಯ್ ಅವರಿಗೆ ಮಾಡಿದ ಎರಡನೇ ಸಿನಿಮಾವಾಗಿದೆ. ಈ ಹಿಂದೆ ಡಾಲಿ ಅಭಿನಯದ ರತ್ನನ್ ಪ್ರಪಂಚ ಸಿನಿಮಾವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜೀ ರಾಜ್ ನಿರ್ಮಾಣ ಮಾಡಿದ್ದು, ಒಳ್ಳೆಯ ಮಟ್ಟದ ಯಶಸ್ಸನ್ನು ಕಂಡಿದ್ದಾರೆ. ಈ ಸಿನಿಮಾವು ಉತ್ತರಕನ್ನಡ ಭಾಷೆಯ ಧಾಟಿಯಲ್ಲಿ ಮೂಡಿ ಬಂದಿರುತ್ತದೆ.
ಇದನ್ನೂ ಓದಿ : ವೀಕೆಂಡ್ ವಿತ್ ರಮೇಶ ಸೀಸನ್ 5 : ಮೋಡಿ ಮಾಡಲು ಬರುತ್ತಿದ್ದಾರೆ ಭಾರತದ ಮೈಕಲ್ ಜಾಕ್ಸನ್
ಇದನ್ನೂ ಓದಿ : Actress Priyanka Chopra : ಬಾಲಿವುಡ್ ತೊರೆಯಲು ಕಾರಣ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಛೋಪ್ರಾ
ಸೋಷಿಯಲ್ ಮೆಸೇಜ್‌ಯನ್ನು ಒಳಗೊಂಡಿರುವ ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು, ನಿರ್ದೇಶಕ ವಿಜಯ್. ಎನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ನೀಡಿದ್ದಾರೆ. ಹೊಯ್ಸಳನಿಗೆ ಜೋಡಿಯಾಗಿ ಅಮೃತ್ ಅಯ್ಯಂಗಾರ್ ಮೋಡಿ ಮಾಡಿದ್ದಾರೆ. ಇನ್ನು ಅಛ್ಯುತ್ ಕುಮಾರ್, ನವೀನ್ ಶಂಕರ್ ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ ನಾಗಭೂಷಣ್ ಹಾಗೂ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
Ashwini Puneeth Rajkumar wished Dolly Dhananjaya starrer “Gurudeva Hoysala”.