ಭಾನುವಾರ, ಏಪ್ರಿಲ್ 27, 2025
HomeCinemaAshwini Puneeth Rajkumar : ಪುನೀತ್‌ ಅಗಲಿಕೆಯ ನೋವಲ್ಲೂ ಅಭಿಮಾನಿಗಳ ಕಾಳಜಿ : ಪತ್ರದಲ್ಲಿ...

Ashwini Puneeth Rajkumar : ಪುನೀತ್‌ ಅಗಲಿಕೆಯ ನೋವಲ್ಲೂ ಅಭಿಮಾನಿಗಳ ಕಾಳಜಿ : ಪತ್ರದಲ್ಲಿ ಅಶ್ವಿನಿ ಹೇಳಿದ್ದೇನು ಗೊತ್ತಾ?

- Advertisement -

ಪುನೀತ್ ರಾಜ್ ಕುಮಾರ್ ಅಗಲಿಕೆ ಕೇವಲ ಡಾ.ರಾಜ್ ಕುಟುಂಬಕ್ಕೆ ಮಾತ್ರವಲ್ಲ ಕರುನಾಡಿನ ಜನತೆಗೂ ಶಾಕ್ ತಂದಿದೆ. ಆದರೂ ಅಭಿಮಾನಿಗಳ ಗೌರವ ಘನತೆಯಿಂದ ಪುನೀತ್ ರನ್ನು ಕಳುಹಿಸಿ ಕೊಟ್ಟಿದ್ದಾರೆ. ಅಭಿಮಾನಿಗಳ ಈ ಅಭಿಮಾನಕ್ಕೆ ತಮ್ಮ ದುಃಖದ ನಡುವೆಯೂ ಪುನೀತ್ ಪತ್ನಿ ಅಶ್ವಿನಿ (Ashwini Puneeth Rajkumar) ಸ್ಪಂದಿಸಿದ್ದು ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಸುಧೀರ್ಘವಾದ ಪತ್ರ ಬರೆದಿರುವ ಅಶ್ವಿನಿಯವರು, ಪುನೀತ್ ರಾಜ್ ಕುಮಾರ್ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ನಿಷ್ಕಲ್ಮಶ ಪ್ರೀತಿಯಿಂದ ಅಕ್ಕರೆಯ ಅಭಿಮಾನದಿಂದ ಅವರನ್ನು ನೀವೆಲ್ಲರೂ ಪವರ್ ಸ್ಟಾರ್ ಆಗಿ ರೂಪಿಸಿದ್ದಿರಿ. ನಿಮ್ಮೆಲ್ಲರಿಗೆ ಅವರ ವಿದಾಯ ತಂದಿತ್ತ ನೋವು ಎಷ್ಟಿರಬಹುದೆಂದು ಊಹಿಸಲು ಕಷ್ಟವಿದೆ.

ಆದರೆ ನೀವು ಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ ಅಹಿತಕರ ಘಟನೆಗಳು ನಡೆಯಲು ಬಿಡದೆ ಗೌರವಯುತವಾಗಿ ಬೀಳ್ಕೊಟ್ಟಿದ್ದಿರಿ.ಸಿನಿಮಾ ಪ್ರೇಮಿಗಳು ಮಾತ್ರವಲ್ಲದೇ ದೇಶ ವಿದೇಶದ ಎಲ್ಲ ವಯೋಮಾನದ ಜನರು ಸಂತಾಪ ಸೂಚಿಸುವುದನ್ನು ಕಂಡಾಗ ಹೃದಯಭಾರವಾಗುತ್ತದೆ.

Puneeth Raj Kumar's daughter Vandita attends sslc exams audition on the day of her death

ನಿಮ್ಮ ಪ್ರೀತಿಯ ಅಪ್ಪು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತ ಸಾವಿರಾರು ಜನರು ನೇತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ಕಂಡಾಗ ಕಣ್ತುಂಬಿ ಬರುತ್ತದೆ. ಅವರ ಆದರ್ಶ ಗಳನ್ನು ಅನುಸರಿಸಿಕೊಂಡು ನೀವು ಮಾಡುವ ಸತ್ಕಾರ್ಯದಲ್ಲಿ, ಅವರ ನೆನಪು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದು ಜೀವಂತವಾಗಿರುತ್ತಾರೆ.

ದೇಶ ವಿದೇಶ ಸೇರಿದಂತೆ ಪ್ರಪಂಚದಾದ್ಯಂತದಿಂದ ನಮ್ಮ ದುಃಖದಲ್ಲಿ ಭಾಗಿಯಾದ ಎಲ್ಲರಿಗೂ ನಮ್ಮ ಕುಟುಂಬದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಅಶ್ವಿನಿ ಪುನೀತ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಶ್ವಿನಿ ಪುನೀತ್ ಪತಿಯ ಕುರಿತು ಸಿದ್ಧಪಡಿಸಲಾದ ಸಾಕ್ಷ್ಯ ಚಿತ್ರ ಕಂಡು ಕಣ್ಣೀರಿಟ್ಟರು.
ಅಲ್ಲದೇ ಪುತ್ರಿ ವಂದಿತಾ ಕೂಡ ತಂದೆಯ ನೆನಪು, ಫೋಟೋಗಳನ್ನು ಕಂಡು ಕಣ್ತುಂಬಿಕೊಂಡರು.

ಪುನೀತ್ ನಿಧನದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಿದ ಹಾಗೂ ಅಂತಿಮ ಕಾರ್ಯಗಳಿಗೆ ನೆರವಾಗಿದ್ದ ಸರ್ಕಾರಕ್ಕೆ,‌ಜಿಲ್ಲಾಧಿಕಾರಿಗಳಿಗೆ ಹಾಗೂ ಗೃಹ ಸಚಿವರಿಗೂ ಅಶ್ವಿನಿ ಪತ್ರ ಬರೆದು ಧನ್ಯವಾದ ಹೇಳಿದ್ದರು. ಅಶ್ವಿನಿ ತಮ್ಮ ತೀರದ ದುಃಖದ ನಡುವೆಯೂ ಅಭಿಮಾನಿಗಳಿಗಾಗಿ‌ ಮಿಡಿದಿದ್ದು ಅಶ್ವಿನಿಯವರು ಅಭಿಮಾನಿಗಳ ಬಗ್ಗೆ ತೋರಿದ ಕಾಳಜಿಗೆ ಎಲ್ಲೆಡೆಯಿಂದ ಮೆಚ್ಚುಗೆ ಹಾಗೂ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ : Puneeth Day : ಅಪ್ಪು ದಿನಾಚರಣೆ ಘೋಷಣೆ ಮಾಡಿ : ಸಿಎಂ ಬೊಮ್ಮಾಯಿಗೆ ಇಂದ್ರಜಿತ್‌ ಮನವಿ

ಇದನ್ನೂ ಓದಿ : ಪುನೀತ್‌ ರಾಜ್‌ ಕುಮಾರ್‌ಗೆ ಕರ್ನಾಟಕ ರತ್ನ : ಸಿಎಂ ಬಸವರಾಜ್‌ ಬೊಮ್ಮಾಯಿ ಘೋಷಣೆ

( Ashwini Puneeth Rajkumar wrote to fans in the midst of Puneet Raj Kumar’s departure)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular