Athiya Shetty and KL Rahul : ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ಡೇಟಿಂಗ್ ಮಾಡ್ತಿರುವ ವಿಚಾರ ಗುಟ್ಟಾಗಿ ಏನು ಉಳಿದಿಲ್ಲ. ಈ ಜೋಡಿ ತಮ್ಮ ರಿಲೇಶನ್ಶಿಪ್ ಹಾಗೂ ಮದುವೆ ವಿಚಾರಗಳಿಂದಾಗಿ ಸುದ್ದಿಯಲ್ಲಿರ್ತಾರೆ. ಆದರೆ ಇತ್ತೀಚಿಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಸುನೀಲ್ ಶೆಟ್ಟಿ ಪುತ್ರಿ ಆಥಿಯಾ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ಮುಂದಿನ ಮೂರು ತಿಂಗಳ ಒಳಗಾಗಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಆಥಿಯಾ ಶೆಟ್ಟಿ ಹಾಗೂ ಕೆ.ಎಲ್ ರಾಹುಲ್ ಮುಂದಿನ ಮೂರು ತಿಂಗಳ ಒಳಗಾಗಿ ಮದುವೆಯಾಗಲಿದ್ದು ಈಗಾಗಲೇ ಮದುವೆ ತಯಾರಿ ನಡೀತಾ ಇದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಎರಡೂ ಕುಟುಂಬಗಳು ಇತ್ತೀಚಿನ ದಿನಗಳಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಆಥಿಯಾ ಹಾಗೂ ರಾಹುಲ್ ನೂತನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ರಾಹುಲ್ ಹಾಗೂ ಅವರ ಪೋಷಕರು. ಕೆಲವು ದಿನಗಳ ಹಿಂದೆಯಷ್ಟೇ ಮುಂಬೈನಲ್ಲಿರುವ ಆಥಿಯಾ ಶೆಟ್ಟಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ಅದ್ಧೂರಿ ಸಿದ್ಧತೆ ನಡೆಸುತ್ತಿವೆ ಎಂದು ತಿಳಿದು ಬಂದಿದೆ.
ಆಥಿಯಾ ಹಾಗೂ ರಾಹುಲ್ ಮೂರು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ . ಕಳೆದ ವರ್ಷ ಕೆ.ಎಲ್ ರಾಹುಲ್ ಆಥಿಯಾ ಶೆಟ್ಟಿಯೊಂದಿಗೆ ಸುನೀಲ್ ಶೆಟ್ಟಿ ಸಹೋದರ ಅಹಾನ್ ಶೆಟ್ಟಿ ಚೊಚ್ಚಲ ಸಿನಿಮಾ ತಡಪ್ ಸಿನಿಮಾ ಪ್ರದರ್ಶನಕ್ಕೆ ಬರುವ ಮೂಲಕ ತಮ್ಮ ಸಂಬಂಧವನ್ನು ಬಹಿರಂಗಗೊಳಿಸಿದ್ದರು. ಈ ಮೂಲಕ ತಮ್ಮ ಸಂಬಂಧವನ್ನು ಸಾರ್ವಜನಿಕಗೊಳಿಸಿದ್ದರು.
ಇದನ್ನೂ ಓದಿ : Jasprit Bumrah : ಭೂಮ್ ಭೂಮ್ ಬುಮ್ರಾ, ಖತರ್ನಾಕ್ ವೇಗಿಯ ಬೆಂಕಿ ಬೌಲಿಂಗ್’ಗೆ ಇಂಗ್ಲೆಂಡ್ ಉಡೀಸ್.. ನೆಹ್ರಾ ದಾಖಲೆ ಪೀಸ್ ಪೀಸ್ !
ಇದನ್ನೂ ಓದಿ : KL Rahul Tattoo : ಕೈಗೆ “ಗೂಬೆ” ಚಿತ್ರವನ್ನು ಹಚ್ಚೆ ಹಾಕಿಸಿಕೊಂಡು ಅಚ್ಚರಿ ಮೂಡಿಸಿದ ರಾಹುಲ್, ಗೂಬೆಯ ಮಹತ್ವ ಏನ್ ಗೊತ್ತಾ..?
ಇದನ್ನು ಓದಿ : cm asavaraj bommai : ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಅಸ್ತು : ಬಿಎಸ್ವೈ ಆಪ್ತ ಬಣದವರಿಗೆ ಕೊಕ್
ಇದನ್ನೂ ಓದಿ : independence day flower show : ಲಾಲ್ಬಾಗ್ ಫ್ಲವರ್ ಶೋ ಪುನೀತ್ ರಾಜ್ಕುಮಾರ್ಗೆ ಅರ್ಪಿಸಲು ರಾಜ್ಯ ಸರ್ಕಾರದಿಂದ ನಿರ್ಧಾರ
Athiya Shetty and KL Rahul To Tie The Knot In Next 3 Months, Grand Preparations Underway: Reports