independence day flower show : ಲಾಲ್​ಬಾಗ್​ ಫ್ಲವರ್​ ಶೋ ಪುನೀತ್​​ ರಾಜ್​​ಕುಮಾರ್​​ಗೆ ಅರ್ಪಿಸಲು ರಾಜ್ಯ ಸರ್ಕಾರದಿಂದ ನಿರ್ಧಾರ

ಬೆಂಗಳೂರು independence day flower show : ಪವರ್​ ಸ್ಟಾರ್​​, ಕರ್ನಾಟಕ ರತ್ನ ಡಾ. ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲ ಅಗಲಿ ವರ್ಷಗಳೇ ಉರುಳುತ್ತಾ ಬಂದರೂ ಅವರಿನ್ನು ಅಭಿಮಾನಿಗಳ ಎದೆಯಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಈಗಲೂ ಕೂಡ ಅಪ್ಪು ಸ್ಮರಣಾರ್ಥ ಅನೇಕ ಕಡೆಗಳಲ್ಲಿ ಸಾಮಾಜಿಕ ಕಾರ್ಯ, ಪುತ್ಥಳಿ ನಿರ್ಮಾಣ, ರಸ್ತೆಗಳ ಮರು ನಾಮಕರಣ ಹೀಗೆ ಸಾಕಷ್ಟು ಕಾರ್ಯಗಳು ನಡೆಯುತ್ತಲೇ ಇದೆ. ಈ ಎಲ್ಲದರ ನಡುವೆ ರಾಜ್ಯ ಸರ್ಕಾರ ಈ ಬಾರಿ ಲಾಲ್​ಬಾಗ್​ ಫ್ಲವರ್​ ಶೋವನ್ನು ನಟ ಪುನೀತ್​ ರಾಜ್​​ಕುಮಾರ್​ಗೆ ಅರ್ಪಿಸಲು ನಿರ್ಧರಿಸಿದೆ.


ಕೋವಿಡ್​ ಕಾರಣದಿಂದಾಗಿ ಕಳೆದ ವರ್ಷ ಲಾಲ್​ಬಾಗ್​ ಫ್ಲವರ್​ ಶೋ ನಡೆದಿರಲಿಲ್ಲ. ಆದರೆ ಈ ಬಾರಿ ತೋಟಗಾರಿಕಾ ಇಲಾಖೆ ಫ್ಲವರ್​ ಶೋ ನಡೆಸಲು ತಯಾರಿಯನ್ನು ಮಾಡಿಕೊಂಡಿದ್ದು ಡಾ.ಪುನೀತ್​ ರಾಜ್​ ಕುಮಾರ್​ ಹೆಸರಲ್ಲಿ ಈ ಬಾರಿಯ ಫ್ಲವರ್​ ಶೋ ನಡೆಸಲು ತೀರ್ಮಾನಿಸಿದೆ. ಈ ಸಂಬಂಧ ವಿಕಾಸ ಸೌಧದದಲ್ಲಿ ಸುದ್ದಿಗೋಷ್ಠಿ ನಡೆಸಿ ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಮಾಹಿತಿಯನ್ನು ನೀಡಿದ್ದಾರೆ.


ಈ ವರ್ಷ ಆಗಸ್ಟ್​ ಐದರಿಂದ ಹದಿನೈದನೇ ತಾರೀಖಿನವರೆಗೆ ಈ ಬಾರಿ ಲಾಲ್​ಬಾಗ್​ ಫ್ಲವರ್​ ಶೋ ಇರಲಿದೆ . ಫ್ಲವರ್​ ಶೋನಲ್ಲಿ ಗಾಜನೂರಿನ ಡಾ.ರಾಜ್​ ಕುಮಾರ್​ ನಿವಾಸವನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ಫ್ಲವರ್​ ಶೋಗೆ ಚಾಲನೆ ನೀಡಲಿದ್ದಾರೆ. ಆಗಸ್ಟ್​ 15ರ ಬಳಿಕ ಇನ್ನೂ ಎರಡು ದಿನಗಳ ಕಾಲ ಈ ಶೋವನ್ನು ವಿಸ್ತರಿಸಲು ಚರ್ಚೆ ನಡೆಯುತ್ತಿವೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಅತ್ಯಂತ ವಿಜೃಂಭಣೆಯಿಂದ ಫ್ಲವರ್​ ಶೋ ನಡೆಸಲು ತೀರ್ಮಾನಿಸಿದ್ದೇವೆ ಎಂದು ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಮಾಹಿತಿ ನೀಡಿದರು.


ಫ್ಲವರ್​ ಶೋ ಪ್ರಯುಕ್ತ ಡಾ.ರಾಜ್​ ಕುಮಾರ್​ ಹಾಗೂ ಡಾ.ಪುನೀತ್​ ರಾಜ್​ಕುಮಾರ್​ ಪ್ರತಿಮೆಗಳಿಗೆ ಹೂವಿನ ಅಲಂಕಾರ ಮಾಡಲಾಗುತ್ತದೆ ಎಂದು ಸಚಿವ ಮುನಿರತ್ನ ಹೇಳಿದರು. ಇದೇ ವೇಳೆ ಈ ಬಾರಿಯ ಫ್ಲವರ್​ ಶೋ ಟಿಕೆಟ್​ ದರ ಹೆಚ್ಚು ಮಾಡುತ್ತೀರಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಾರಿ ಹೆಚ್ಚಿನ ಹೂವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ತಿದ್ದೇವೆ. ಇದಾದ ಬಳಿಕ ಟಿಕೆಟ್​ ದರ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಕರೆದು ತೀರ್ಮಾನ ಕೈಗೊಳ್ಳಲಿದ್ದೇನೆ ಎಂದು ಹೇಳಿದರು .

ಇದನ್ನು ಓದಿ : Mallikarjun Kharge Next CM : ಕರ್ನಾಟಕದಲ್ಲಿ ಬಾರಿ ಅತಂತ್ರ ವಿಧಾನಸಭೆ : ಜೆಡಿಎಸ್‌ ಜೊತೆ ಸಂಘರ್ಷ ಬೇಡ ಎಂದ ಹೈಕಮಾಂಡ್, ಖರ್ಗೆ ಸಿಎಂ ?

ಇದನ್ನೂ ಓದಿ : cm asavaraj bommai : ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಅಸ್ತು : ಬಿಎಸ್​ವೈ ಆಪ್ತ ಬಣದವರಿಗೆ ಕೊಕ್​​

independence day flower show will be held at the lalbagh

Comments are closed.