Ranbir Kapoor : ನಟ ರಣಬೀರ್ ಕಪೂರ್ ಸದ್ಯ ತಮ್ಮ ಬ್ರಹ್ಮಾಸ್ತ್ರ ಸಿನಿಮಾದ ಯಶಸ್ಸನ್ನು ಎಂಜಾಯ್ ಮಾಡ್ತಿದ್ದಾರೆ. ಸಾಲು ಸಾಲು ಬಾಲಿವುಡ್ ಸಿನಿಮಾಗಳು ನೆಲಕಚ್ಚುತ್ತಿದ್ದ ಈ ಸಂದರ್ಭದಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಮಾತ್ರ ಈ ಸಾಲಿಗೆ ಸೇರದೇ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಾ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾ ತೆಲಗು ಆವೃತ್ತಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಕಲೆಕ್ಷನ್ ಮಾಡುತ್ತಿದ್ದು ದಕ್ಷಿಣ ಭಾರತದಿಂದಲೇ ಬ್ರಹ್ಮಾಸ್ತ್ರಕ್ಕೆ ಇನ್ನಷ್ಟು ಲಾಭ ಸಿಕ್ಕಂತಾಗಿದೆ .
ಹಿಂದಿ ಜೊತೆಯಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲೂ ಬ್ರಹ್ಮಾಸ್ತ್ರ ರಿಲೀಸ್ ಆಗಿದ್ದು ದೇಶಾದ್ಯಂತ ನೂರು ಕೋಟಿಗೂ ಅಧಿಕ ಹಣವನ್ನು ಕಲೆಕ್ಟ್ ಮಾಡಿದೆ. ಹೀಗಾಗಿ ಸದ್ಯ ದೊಡ್ಡ ಯಶಸ್ಸನ್ನು ಕಾಣುತ್ತಿರುವ ನಟ ರಣಬೀರ್ ಕಪೂರ್ ಸೋಮನಾಥ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ್ದಾರೆ. ಅಯಾನ್ ಮುಖರ್ಜಿ ಹಾಗೂ ರಣಬೀರ್ ಕಪೂರ್ ಸೋಮನಾಥ ದೇವಸ್ಥಾನಕ್ಕೆ ತೆರಳಿದ್ದು ಈ ಫೋಟೋಗಳನ್ನು ಅಯಾನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಫೋಟೋಗಳಲ್ಲು ಅಯಾನ್ ಮುಖರ್ಜಿ ಹಾಗೂ ರಣಬೀರ್ ಕಪೂರ್ ಸಾಂಪ್ರದಾಯಿಕ ಉಡುಗೆಗಳಲ್ಲಿ ಒಂದಾದ ಕುರ್ತಾ ಪೈಜಾಮಾದಲ್ಲಿ ಕಾಣಿಸಿದ್ದಾರೆ. ರಣಬೀರ್ ಕಪೂರ್ ಬಿಳಿ ಬಣ್ಣದ ಕುರ್ತಾ – ಪೈಜಾಮಾ ಹಾಗೂ ನೀಲಿ ಬಣ್ಣದ ನೆಹರೂ ಜಾಕೆಟ್ ಧರಿಸಿದ್ದಾರೆ. ಯೇ ಜವಾನಿ ಹೇ ದಿವಾನಿ ನಿರ್ದೇಶಕ ಅಯಾನ್ ಹಳದಿ ಹಾಗೂ ಬಿಳಿ ಬಣ್ಣದ ಕುರ್ತಾ ಸೆಟ್ನ್ನು ಧರಿಸಿದ್ದಾರೆ.
ಈ ಫೋಟೋವನ್ನು ಶೇರ್ ಮಾಡಿರುವ ಅಯಾನ್ ಮುಖರ್ಜಿ, ಸೋಮನಾಥ ದೇಗುಲ, ಶ್ರೀ ಸೋಮೇಶ್ವರಾಯ ಜ್ಯೋತಿರ್ಲಿಂಗಾಯ ಮಹಾರುದ್ರಾಯ ನಮಃ, ಈ ವರ್ಷ ಸೋಮನಾಥ ದೇಗುಲಕ್ಕೆ ಇದು ನನ್ನ ಮೂರನೇ ಭೇಟಿ. ಬ್ರಹ್ಮಾಸ್ತ್ರ ಬಿಡುಗಡೆಯಾದ ಬಳಿಕ ನಾನು ಸೋಮನಾಥಕ್ಕೆ ಭೇಟಿ ನೀಡುತ್ತೇನೆಂದು ಮನಸ್ಸಿನಲ್ಲೇ ಹೇಳಿಕೊಂಡಿದ್ದೆ. ಅದರಂತೆ ನಾವು ಇಲ್ಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಆಲಿಯಾ ಭಟ್ ಸೇರಿದಂತೆ ಬ್ರಹ್ಮಾಸ್ತ್ರ ಸಿನಿಮಾ ತಂಡ ಇತ್ತೀಚಿಗೆ ಸಿನಿಮಾದ ಪ್ರಚಾರಕ್ಕಾಗಿ ಅಹಮದಾಬಾದ್ಗೆ ಭೇಟಿ ನೀಡಿತ್ತು. ಅಯಾನ್ ಬ್ರಹ್ಮಾಸ್ತ್ರ ಸಿನಿಮಾಗಳಲ್ಲಿ ಇನ್ನೂ ಬಿಡುಗಡೆಯಾಗದ ಹಾಡುಗಳನ್ನು ದಸರಾದಲ್ಲಿ ರಿಲೀಸ್ ಮಾಡೋದಾಗಿ ಹೇಳಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಇನ್ನೂ ನಾವು ಬಿಡುಗಡೆ ಮಾಡದ ಹಲವು ಹಾಡುಗಳಿವೆ. ರಸಿಯಾ, ನಮ್ಮ ಶೀವ ಹೀಗೆ ಮುಖ್ಯ ಹಾಡುಗಳು ಇನ್ನೂ ರಿಲೀಸ್ ಆಗಬೇಕಿದೆ. ನಮಗೆ ಸಿನಿಮಾ ಬಿಡುಗಡೆ ಕಡೆಗೆ ಹೆಚ್ಚಿನ ಗಮನ ನೀಡಬೇಕಿತ್ತು. ಹೀಗಾಗಿ ನಮಗೆ ಈ ಟ್ರ್ಯಾಕ್ಗಳ ಲಾಂಚ್ಗೆ ಸರಿಯಾಗಿ ನ್ಯಾಯ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.
ಮುಂದಿನ ವಾರದ ಆರಂಭದಲ್ಲಿ ರಾಸಿಯಾ ಹಾಗೂ ಇತರೆ ಟ್ರ್ಯಾಕ್ಗಳನ್ನು ಲಾಂಚ್ ಮಾಡಲು ಯೋಚಿಸುತ್ತಿದ್ದೇವೆ. ಅಕ್ಟೋಬರ್ ಐದು ದಸರಾದಂದು ಸಂಪೂರ್ಣ ಬ್ರಹ್ಮಾಸ್ತ್ರ ಮ್ಯೂಸಿಕ್ ಆಲ್ಬಂ ರಿಲೀಸ್ ಆಗಲಿದೆ ಎಂದು ಅಯಾನ್ ಮುಖರ್ಜಿ ಘೋಷಣೆ ಮಾಡಿದ್ದಾರೆ.
ಇದನ್ನು ಓದಿ : woman killed grandmother :ಆನ್ಲೈನ್ ಸಾಲದ ಆ್ಯಪ್ಗಳಿಂದ ಕಿರುಕುಳ : ಸಾಲ ತೀರಿಸಲೆಂದು ಅಜ್ಜಿಯನ್ನೇ ಕೊಂದ ಮೊಮ್ಮಗಳು ಅಂದರ್
ಇದನ್ನೂ ಓದಿ : Aashiki : ಕನ್ನಡದಲ್ಲೂ ‘ಆಶಿಕಿ’ ಕಿಕ್..ಇದು ಕ್ರೈಮ್ ರಿಪೋರ್ಟರ್ ಹೆಣೆದ ಮ್ಯೂಸಿಕಲ್ ಲವ್ ಸ್ಟೋರಿ
Ayan Mukerji poses with Ranbir Kapoor at Somnath Temple