Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

ಮುಂಬೈ: ದಕ್ಷಿಣ ಆಫ್ರಿಕಾದ ದಿಗ್ಗಜ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮಾರ್ಕ್ ಬೌಷರ್ ಮುಂಬೈ ಇಂಡಿಯನ್ಸ್ ತಂಡದ ನೂತನ ಹೆಡ್ ಕೋಚ್ (Mark Boucher MI Head Coach) ಆಗಿ ನೇಮಕ ಗೊಂಡಿದ್ದಾರೆ. ಶ್ರೀಲಂಕಾದ ಮಹೇಲ ಜಯವರ್ಧನೆ ಅವರ ಬದಲು ದಕ್ಷಿಣ ಆಫ್ರಿಕಾದ ಬೌಷರ್ ಅವರಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೋಚ್ ಪಟ್ಟ ಕಟ್ಟಿದೆ.

2016ರಿಂದ ಇಲ್ಲಿಯವರೆಗೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಕೋಚ್ ಆಗಿದ್ದ ಮಹೇಲ ಜಯವರ್ಧನೆ ಅವರಿಗೆ ಮುಂಬೈ ಇಂಡಿಯನ್ಸ್’ನ ಗ್ಲೋಬಲ್ ಹೆಡ್ ಆಫ್ ಪರ್ಫಾಮೆನ್ಸ್ (Global Head of Performance, MI) ಜವಾಬ್ದಾರಿ ನೀಡಲಾಗಿದೆ. 2016ರ ನವೆಂಬರ್ ತಿಂಗಳಲ್ಲಿ ಮಹೇಲ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಜಯವರ್ಧನೆ ಗರಡಿಯಲ್ಲಿ ಮುಂಬೈ ತಂಡ 3 ಬಾರಿ (2017, 2019, 2020) ಐಪಿಎಲ್ ಚಾಂಪಿಯನ್ ಆಗಿತ್ತು.

ಇದುವರೆಗೆ ದಕ್ಷಿಣ ಆಫ್ರಿಕಾ ತಂಡದ ಕೋಚ್ ಆಗಿದ್ದ ಮಾರ್ಕ್ ಬೌಷರ್, ಮುಂದಿನ ಸಾಲಿನಿಂದ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ನಿರ್ವಹಿಸಲಿದ್ದಾರೆ. ಹೊಸ ಜವಾಬ್ದಾರಿಯ ಬಗ್ಗೆ ಪ್ರತಿಕ್ರಿಯಿಸಿರುವ ಬೌಷರ್, “ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿರುವುದು ನನ್ನ ಪಾಲಿಗೆ ಸಂದಿರುವ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಮುಂಬೈ ಇಂಡಿಯನ್ಸ್ ತಂಡದ ಇತಿಹಾಸ ಮತ್ತು ಸಾಧನೆ ಅವರನ್ನು ಜಗತ್ತಿನ ಅತ್ಯಂತ ಯಶಸ್ವಿ ಫ್ರಾಂಚೈಸಿ ಪಟ್ಟದಲ್ಲಿ ಕೂರಿಸಿದೆ. ನಾನು ಸವಾಲನ್ನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.

45 ವರ್ಷದ ಬೌಷರ್ 2012ರಲ್ಲಿ ದಕ್ಷಿಣ ಆಫ್ರಿಕಾ ಪರ ಕೊನೆಯ ಬಾರಿ ಟೆಸ್ಟ್ ಆಡಿದ್ದರು. ನಿವೃತ್ತಿಯ ನಂತರ ಕೋಚಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದ ಮಾರ್ಕ್ ಬೌಷರ್, ದಕ್ಷಿಣ ಆಫ್ರಿಕಾದ ಟಾಪ್ ಡೊಮೆಸ್ಟಿಕ್ ತಂಡವಾಗಿರುವ ಟೈಟನ್ಸ್ ತಂಡದ ಕೋಚ್ ಆಗಿದ್ದರು. ಬೌಷರ್ ಗರಡಿಯಲ್ಲಿ ಟೈಟನ್ಸ್ ತಂಡ ಐದು ದೇಶೀಯ ಕ್ರಿಕೆಟ್ ಟ್ರೋಫಿಗಳನ್ನು ಗೆದ್ದಿತ್ತು. ಬೌಷರ್ ಕೋಚ್ ಆಗಿದ್ದಾಗ ದಕ್ಷಿಣ ಆಫ್ರಿಕಾ ತಂಡ 11 ಟೆಸ್ಟ್, 12 ಏಕದಿನ ಹಾಗೂ 23 ಟಿ20 ಪಂದ್ಯಗಳನ್ನು ಗೆದ್ದಿದೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಇದೀಗ ಐಪಿಎಲ್’ನಿಂದ ವಿದೇಶೀ ಟಿ20 ಲೀಗ್’ಗಳಿಗೂ ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಎಂಐ ಕೇಪ್ ಟೌನ್ (MI Cape Town in the SA20) ಹಾಗೂ ಯುಎಇ ಇಂಟರ್’ನ್ಯಾಷನಲ್ ಟಿ20 ಲೀಗ್’ನಲ್ಲಿ ಎಂಐ ಎಮಿರೇಟ್ಸ್ (MI Emirates in the ILT20) ಹೆಸರಲ್ಲಿ ಆಡಲಿದೆ. ಈ ಹಿನ್ನೆಲೆಯಲ್ಲಿ ಮಹೇಲ ಜಯವರ್ಧನೆ ಅವರಿಗೆ ಹೊಸ ಜವಾಬ್ದಾರಿ ವಹಿಸಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಟೀಮ್ ಡೈರೆಕ್ಟರ್ ಆಗಿದ್ದ ಮಾಜಿ ವೇಗದ ಬೌಲರ್ ಜಹೀರ್ ಖಾನ್ (Zaheer Khan) ಅವರಿಗೆ ಮುಂಬೈ ಇಂಡಿಯನ್ಸ್ ಕ್ರಿಕೆಟ್ ಡೆವಲಪ್ಮೆಂಟ್ ಗ್ಲೋಬಲ್ ಹೆಡ್ ಆಗಿ ಪ್ರಮೋಷನ್ ನೀಡಲಾಗಿದೆ ( Global Head of Cricket Development, MI). ಯುಎಇ ಇಂಟರ್’ನ್ಯಾಷನಲ್ ಟಿ20 ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ ಲೀಗ್’ಗಳು ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿವೆ.

ಇದನ್ನೂ ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?

ಇದನ್ನೂ ಓದಿ : Indian Cricket Team: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಔಟಾದ್ರೆ ಟಿ20ಯಲ್ಲಿ ಭಾರತ 60 ರನ್ನಿಗೆ ಆಲೌಟ್

Mark Boucher Appointed as MI Head Coach

Comments are closed.