2015ರಲ್ಲಿ ಬಾಲಿವುಡ್ನಲ್ಲಿ ತೆರೆಕಂಡ ಭಜರಂಗಿ ಭಾಯಿಜಾನ್ ಸಿನಿಮಾ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿತ್ತು. ಕಬೀರ್ ಖಾನ್ರ ಈ ಸಿನಿಮಾಗೆ ನಟ ಸಲ್ಮಾನ್ ಖಾನ್ ಹಾಗೂ ನಟಿ ಕರೀನಾ ಕಪೂರ್ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದರು. ಈ ಸಿನಿಮಾವು ಸಲ್ಮಾನ್ ಖಾನ್ರ ಹಿಟ್ ಸಿನಿಮಾಗಳ ಸಾಲಿನಲ್ಲಿ ಸ್ಥಾನವನ್ನು ಪಡೆದಿದೆ. ಅಭಿಮಾನಿಗಳಿಗೆ ಶುಭ ಸುದ್ದಿ ಎಂಬಂತೆ ಇತ್ತೀಚೆಗಷ್ಟೇ ನಟ ಸಲ್ಮಾನ್ ಖಾನ್ ಭಜರಂಗಿ ಭಾಯಿಜಾನ್ ಸಿನಿಮಾ ಪಾರ್ಟ್ 2(Bajrangi Bhaijaan 2) ಮಾಡೋದಾಗಿ ಹೇಳಿದ್ದಾರೆ.
ಸಲ್ಮಾನ್ ಖಾನ್ ಇಂತದ್ದೊಂದು ಹೇಳಿಕೆ ನೀಡುತ್ತಿದ್ದಂತೆ ಅಭಿಮಾನಿಗಳು ಭಜರಂಗಿ ಭಾಯಿಜಾನ್ ಸಿನಿಮಾದ ಸಿಕ್ವೆಲ್ ಶೂಟಿಂಗ್ ಈಗಾಗಲೇ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಾವು ಮತ್ತೊಮ್ಮೆ ಸಲ್ಲು ಭಾಯಿಯನ್ನು ಭಜರಂಗಿ ಭಾಯಿಜಾನ್ ಆಗಿ ನೋಡಬಹುದು ಎಂದೇ ಭಾವಿಸಿದ್ದರು. ಆದರೆ ಭಜರಂಗಿ ಫಿಲಂ ಮೇಕರ್ ಇದೀಗ ಸಲ್ಮಾನ್ ಖಾನ್ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.
ಭಜರಂಗಿ ಭಾಯಿಜಾನ್ ಸಿಕ್ವೆಲ್ ವಿಚಾರವಾಗಿ ಮಾತನಾಡಿದ ಕಬೀರ್ ಖಾನ್, ನಾನು ಈಗ ಕೇವಲ 83 ಸಿನಿಮಾ ಬಗ್ಗೆ ಮಾತ್ರ ಮಾತನಾಡಲು ಬಯಸುತ್ತೇನೆ. ಸಲ್ಮಾನ್ ಖಾನ್ ಏನು ಹೇಳಿಕೆ ನೀಡಿದ್ದಾರೆ ಅಲ್ಲವೇ..? ಸಿಕ್ವೆಲ್ ಬಗ್ಗೆ ಇನ್ನೂ ಯಾವುದೇ ಕತೆ ತಯಾರಾಗಿಲ್ಲ. ಅಂತದ್ದೊಂದು ಐಡಿಯಾ ಕೂಡ ಇಲ್ಲಿಯವರೆಗೆ ಮೂಡಿಲ್ಲ. ಹೀಗಾಗಿ ಭಜರಂಗಿ ಭಾಯಿಜಾನ್ 2 ಬಗ್ಗೆ ಮಾತನಾಡಲು ನನ್ನ ಬಳಿ ಯಾವುದೇ ವಿಚಾರಗಳು ಇಲ್ಲ ಎಂದಿದ್ದಾರೆ.
ಕಬೀರ್ ಖಾನ್ ಈ ಹೇಳಿಕೆ ನೀಡುತ್ತಿದ್ದಂತೆಯೇ ಅಭಿಮಾನಿಗಳಿಗೆ ಇದೀಗ ಗೊಂದಲ ಶುರುವಾಗಿದೆ. ನಿಜಕ್ಕೂ ಭಜರಂಗಿ ಭಾಯಿಜಾನ್ 2 ಸಿನಿಮಾ ಬರುತ್ತಾ ಅಥವಾ ತಮ್ಮ ನಿರೀಕ್ಷೆ ಹುಸಿಯಾಗುತ್ತಾ ಅಂತಾ ತಲೆಕೆಡಿಸಿಕೊಂಡಿದ್ದಾರೆ.
2015ರಲ್ಲಿ ತೆರೆಕಂಡ ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್ ಮುಗ್ದ ಭಜರಂಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಗಡಿ ದಾಟಿ ಬಂದಿದ್ದ ಮುನ್ನಿ(ಹರ್ಷಾಲಿ ಮೆಹ್ತಾ)ಯನ್ನು ವಾಪಸ್ ಪಾಕಿಸ್ತಾನಕ್ಕೆ ತಲುಪಿಸಲು ಭಜರಂಗಿ ಏನೆಲ್ಲ ಸಾಹಸ ಪಡ್ತಾನೆ ಎಂಬುದೇ ಈ ಸಿನಿಮಾವಾಗಿತ್ತು. ಈ ಸಿನಿಮಾದಲ್ಲಿ ನಟಿ ಕರೀನಾ ಕಪೂರ್, ನವಾಜುದ್ದೀನ್ ಸಿದ್ದಕಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
Bajrangi Bhaijaan 2: Salman Khan Confirms Sequel But Kabir Khan Says, “Neither The Script Is Written, Nor Has The Idea Been Formed Really”
ಇದನ್ನು ಓದಿ : Duniya Vijay : ಅಭಿಮಾನಿ ದುನಿಯಾಗೆ ಸಿಹಿಸುದ್ದಿ: ಹೀರೋ,ಡೈರೈಕ್ಷನ್ ಬಳಿಕ ವಿಲನ್ ಪಾತ್ರದತ್ತ ವಿಜಯ್ ಚಿತ್ತ
ಇದನ್ನೂ ಓದಿ : Sanchari Vijay : ಸಂಚಾರಿ ವಿಜಯ್ ಅಭಿಮಾನಿಗಳಿಗೆ ಸಿಹಿಸುದ್ದಿ: ಜನವರಿ 26 ರಂದು ಅಂತ್ಯವಲ್ಲ ಆರಂಭ ತೆರೆಗೆ