BBMP Master Plan : ಕೊರೋನಾ ನಿಯಂತ್ರಕ್ಕೆ ಪಾಲಿಕೆ ಮಾಸ್ಟರ್ ಪ್ಲ್ಯಾನ್ : ಸಂಕಷ್ಟಕ್ಕೆ ಸಿಲುಕಿದ ಕಾಮನ್ ಮ್ಯಾನ್

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿಧಾನಕ್ಕೆ ಒಮೈಕ್ರಾನ್ ಹಾಗೂ ಕೊರೋ‌ನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸೋಂಕು ಹರಡುವುದನ್ನು ತಪ್ಪಿಸಲು ಬಿಬಿಎಂಪಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದು(BBMP Master Plan), ಇನ್ಮುಂದೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಕರೋನಾ ಪರೀಕ್ಷೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ನಗರದಲ್ಲಿ ಒಮೈಕ್ರಾನ್ ಹಾಗೂ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಪಾಲಿಕೆ ನಗರದ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಸೂಚನೆ ರವಾನಿಸಿದ್ದು,ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗಕ್ಕೆ ಆಗಮಿಸುವ ರೋಗಿಗಳಿಗೆ ಕೊರೋನಾ ಪರೀಕ್ಷೆ ಕಡ್ಡಾಯ ಎಂದಿದೆ. ಖಾಸಗಿ ಆಸ್ಪತ್ರೆಗಳ ಓಪಿಡಿಗೆ ಬರುವ ಎಲ್ಲರಿಗೂ ಸಿಂಪ್ಟಮ್ಸ್ ಇದ್ದರೂ ಇಲ್ಲದಿದ್ದರೂ ಕೊರೋನಾ ಪರೀಕ್ಷೆ ನಡೆಸಲು ಸೂಚನೆ ನೀಡಿದೆ.

ಈ ಬಗ್ಗೆ ನಗರದ ನೂರಕ್ಕು ಅಧಿಕ ಖಾಸಗಿ ಆಸ್ಪತ್ರೆಗಳ ಜೊತೆ ವರ್ಚುವಲ್ ಸಭೆ ನಡೆಸಿದ ಬಿಬಿಎಂಪಿ ಆದೇಶ ಹೊರಡಿಸಿದ್ದು, ಈ ಕುರಿತು ಖಾಸಗಿ ಆಸ್ಪತ್ರೆಗಳ ‌ಒಕ್ಕೂಟ ಫನಾಗೂ ಬಿಬಿಎಂಪಿ ನಿರ್ದೇಶನ ನೀಡಿದೆ. ವಿಶೇಷ ಪ್ರಕರಣಗಳು ‌ಆಗಮಿಸಿದರೆ ಅಂಥಾ ರೋಗಿಗಳ ಸ್ಯಾಂಪಲ್ಸ್ ಅನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಗೆ ಕಳುಹಿಸುವಂತೆ ಸೂಚನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಮುಂದಿನ ದಿನಗಳಲ್ಲಿ ಓಮೈಕ್ರಾನ್ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಸಿಎಚ್ ಓ ಡಾ. ಬಾಲಸುಂದರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಲ್ಲದೇ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳು ಬೆಡ್ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದ್ದು, ಬೆಂಗಳೂರಿನ ಎಲ್ಲಾ ನರ್ಸಿಂಗ್ ಹೋಮ್ ಗಳಲ್ಲೂ ಅಗತ್ಯಕ್ಕೆ ತಕ್ಕಂತೆ ಹಾಸಿಗೆ ಸಿದ್ಧ ಇರಬೇಕು ಎಂದು ಸೂಚಿಸಲಾಗಿದೆ. ಹೊರ ರೋಗಿಗಳ ವಿಭಾಗಕ್ಕೆ ಬರುವ ರೋಗಿಗಳಿಗೆ SARI & ILI ಸಮಸ್ಯೆ ಇದ್ದರೆ ಪರೀಕ್ಷೆ ಮಾಡಿಸುವುದು ಕಡ್ಡಾಯ. ಆದರೂ ಇದನ್ನು ಓಪಿಡಿಯಲ್ಲಿ ಇರುವ ವೈದ್ಯರು ನಿರ್ಧಾರಕ್ಕೆ ಬಿಟ್ಟ ಸಂಗತಿ ಎಂದು ಬಿಬಿಎಂಪಿ ಸ್ಪಷ್ಟವಾಗಿ ಹೇಳಿದೆ.

ವೈದ್ಯರು ರೋಗಿಗಳಿಗೆ ಪರೀಕ್ಷೆ ಮಾಡಿಸುವಂತೆ ಸೂಚಿಸಿದರೇ ಮಾತ್ರ ಮಾಡಿಸಬೇಕು. ಅಲ್ಲದೇ ಈ ಪರೀಕ್ಷೆಗೂ ಪಾಲಿಕೆ ದರ ನಿಗದಿ ಮಾಡಿದ್ದು, ಸಾಮಾನ್ಯ ಕೊರೋನಾ ಪರೀಕ್ಷೆಗೆ 500 ರೂ. ಹಾಗೂ ಶೀಘ್ರ ವರದಿಯ ಪರೀಕ್ಷೆಗೆ 2000 ರೂ ನಿಗದಿಯಾಗಿದೆ. ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಹಣ ಪಾವತಿಸಿ ಹಾಗೂ ಬಿಬಿಎಂಪಿ ಪರೀಕ್ಷಾ ಕೇಂದ್ರದಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶವಿದೆ. ಈಗಾಗಲೇ ರೋಗಿಗಳಿಂದ ಸುಲಿಗೆಗೆ ನಿಂತಿರುವ ನಗರದ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಆದೇಶ ವರದಾನವಾಗುವ ಸಾಧ್ಯತೆಯಿದ್ದು ರೋಗಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಇದನ್ನೂ ಓದಿ : Karnataka Lockdown Again : ಮತ್ತೆ ಕರ್ನಾಟಕದಲ್ಲಿ ಲಾಕ್ ಡೌನ್ ಭೂತ : ಸರ್ಕಾರದ ಮುಂದಿರೋ ಆಯ್ಕೆಗಳೇನು?!

ಇದನ್ನೂ ಓದಿ : LIC logo : ಎಲ್ಐಸಿ ಲೋಗೊ ಬಳಸುವ ಮುನ್ನ ಹುಷಾರ್! ಅನಧಿಕೃತ ಲೋಗೊ ಬಳಕೆ ವಿರುದ್ಧ ಕಾನೂನು ಕ್ರಮ

ಇದನ್ನೂ ಓದಿ : Transgenders Police : ಪೊಲೀಸ್‌ ಇಲಾಖೆಗೆ ಮಂಗಳಮುಖಿಯರು : ನೇಮಕಾತಿಯಲ್ಲಿ ಮೀಸಲಾತಿ, ಕರ್ನಾಟಕ ಸರಕಾರದ ದಿಟ್ಟ ನಿರ್ಧಾರ

( BBMP Master Plan for Corona Control: The Common Man in Distress)

Comments are closed.