ಮಂಗಳವಾರ, ಏಪ್ರಿಲ್ 29, 2025
HomeCinemaಅಣ್ಣನ ವಿಷ್ಯದಲ್ಲಿ ಸೆನ್ಸಿಟಿವ್ ಆಗಿರಿ….! ಮೀಡಿಯಾಕ್ಕೆ ಧ್ರುವ್ ಸರ್ಜಾ ಖಡಕ್ ವಾರ್ನಿಂಗ್…!!

ಅಣ್ಣನ ವಿಷ್ಯದಲ್ಲಿ ಸೆನ್ಸಿಟಿವ್ ಆಗಿರಿ….! ಮೀಡಿಯಾಕ್ಕೆ ಧ್ರುವ್ ಸರ್ಜಾ ಖಡಕ್ ವಾರ್ನಿಂಗ್…!!

- Advertisement -

ಕಳೆದ ನಾಲ್ಕೈದು ತಿಂಗಳಿನಿಂದ ಸರ್ಜಾ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಸ್ನೇಹಿತನಂತಿದ್ದ ಅಣ್ಣನನ್ನು ಕಳೆದುಕೊಂಡ ಧ್ರುವ ಸರ್ಜಾ ಅಕ್ಷರಷಃ ಮಗುವಿನಂತೆ ಕಣ್ಣೀರಿಟ್ಟಿದ್ದರು. ಈಗ ಜ್ಯೂನಿಯರ್ ಚಿರು ಆಗಮನದ ಬಳಿಕ ಕೊಂಚ ಚೇತರಿಸಿಕೊಂಡಿರೋ ಧ್ರುವ್ ಮಾಧ್ಯಮಗಳಿಗೆ ಸಖತ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸರ್ಜಾ ಕುಟುಂಬ ನೋವಿನಲ್ಲಿದೆ. ಎದೆಯ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ನೋವು ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಮಧ್ಯೆ ಮಾಧ್ಯಮಗಳಲ್ಲಿ ಪ್ರತಿನಿತ್ಯ ಚಿರು ಸರ್ಜಾ ಬಗ್ಗೆ ಪ್ರಸಾರವಾಗುತ್ತಿರುವ ರಂಗೀನ್ ಸುದ್ದಿಗಳು ಹಾಗೂ ವಿಡಿಯೋಗಳು ಸರ್ಜಾ ಕುಟುಂಬಕ್ಕೆ ಬೇಸರ ತಂದಿದೆ. ಅಷ್ಟೇ ಅಲ್ಲ ಅವರ ನೋವು ಕೂಡ ಹೆಚ್ಚಿಸಿದೆ.

ಇದಕ್ಕಾಗಿ ದುಬಾರಿ ಸಿನಿಮಾ ಟೈಟಲ್ ಲಾಂಚ್ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಧ್ರುವ್ ಸರ್ಜಾ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಾನು ನನ್ನ ಅಣ್ಣನನ್ನು ತುಂಬ ಮಿಸ್ ಮಾಡಿಕೊಳ್ತೇನೆ.

ಅಷ್ಟೇ ಅಲ್ಲ ನೀವೆಷ್ಟು ಸಲ ಅಣ್ಣನ ಬಗ್ಗೆ ಮಾತಾಡು ಅಂದ್ರೂ ಮಾತಾಡ್ತೇನೆ. ಆದರೇ ನಿಮ್ಮ ಮಾಧ್ಯಮಗಳಲ್ಲಿ ಅಣ್ಣನ ವಿಡಿಯೋಗಳನ್ನು ಉಪಯೋಗಿಸುವಾಗ ಸ್ವಲ್ಪ ಸೆನ್ಸಿಬಲ್ ಮತ್ತು ಸೆನ್ಸಿಟಿವ್ ಆಗಿರಿ.

ಮನೆಯಲ್ಲಿ ಫ್ಯಾಮಿಲಿ ಮೆಂಬರ್ ಗಳು ಟಿವಿ ನೋಡ್ತಿರ್ತಾರೆ. ನಿಮಗೂ ಫ್ಯಾಮಿಲಿ ಇದೆಯಲ್ಲ. ಅವರಿಗೂ ನೋವಾಗುತ್ತೆ. ಅದೇ ತರ ನಮ್ಮ ಮನೆಗಳಲ್ಲೂ ನೊಂದ್ಕೋತಾರೆ. ಸೋ ಸ್ವಲ್ಪ ಸೆನ್ಸಿಟಿವ್ ಆಗಿರಿ. ಯಾರದ್ದೋ ತೀಟೆಗೆಲ್ಲ ನಾನು ಮಾತಾಡಲ್ಲ ಎಂದು ಖಡಕ್ ಆಗಿ ಎಚ್ಚರಿಕೆ ರವಾನಿಸಿದ್ದಾರೆ.

ಡ್ರಗ್ಸ್ ಪ್ರಕರಣ ಹೊರಬಂದಾಗ ಚಿರು ಸಾವಿಗೂ ಅದೇ ಕಾರಣ ಎಂಬರ್ಥದ ಗಾಸಿಪ್ ಗಳು ಹುಟ್ಟಿಕೊಂಡಿದ್ದವು. ಹೀಗಾಗಿ ಮಾಧ್ಯಮಗಳು ಸಾಕಷ್ಟು ಸುದ್ದಿ ಮಾಡಿದ್ದವು. ಇದನ್ನೇ ಗಮನದಲ್ಲಿಟ್ಟುಕೊಂಡು ಧ್ರುವ್ ಸರ್ಜಾ ಸಖತ್ ವಾರ್ನಿಂಗ್ ಕೊಟ್ಟಿದ್ದಾರೆ.

RELATED ARTICLES

Most Popular