ಎಲೆಕ್ಷನ್ ಗೆದ್ದ ಮುನಿರತ್ನ್ ಗೆ ಹೈಕೋರ್ಟ್ ಶಾಕ್…! ಮತ್ತೆ ವೋಟರ್ ಐಡಿ ಪ್ರಕರಣಕ್ಕೆ ಮರುಜೀವ..!!

ಬೆಂಗಳೂರು: ನಿನ್ನೆಯಷ್ಟೇ ಹೊರಬಿದ್ದ ಆರ್.ಆರ್.ನಗರ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ವಿರುದ್ಧ ಗೆದ್ದು ಬೀಗಿದ ಮುನಿರತ್ನಗೆ ಹೈಕೋರ್ಟ್ ಇಂದು ಶಾಕ್ ನೀಡಿದೆ.

ವೋಟರ್ ಐಡಿ ಪ್ರಕರಣಕ್ಕೆ ಮತ್ತೆ ಮರುಜೀವ ನೀಡಲಾಗಿದ್ದು, ಪ್ರಕರಣದ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಆರ್.ಆರ್.ನಗರದ ವೋಟರ್ ಐಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಆನಂದ ಮತ್ತು ಸಂತೋಷ್ ಎಂಬುವವರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಲು ಹಿರಿಯ ಐಪಿಎಸ್ ಅಧಿಕಾರಿಯನ್ನು ನೇಮಿಸು ವಂತೆ ರಾಜ್ಯದ ಡಿಜಿಐಜಿಪಿಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಸೂಚಿಸಿದ್ದಾರೆ.

ಆರೋಪಿ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿಬೇಜು, ತನಿಖೆ ಸೂಕ್ತವಾಗಿ ನಡೆದಿದೆಯೋ ಇಲ್ಲವು ಪರಿಶೀಲಿಸಬೇಕು. ಅರ್ಜಿದಾರರ ಸಮಸ್ಯೆ ಆಲಿಸಿ ಕ್ರಮಕೈಗೊಳ್ಳಬೇಕು.

ಮುಖ್ಯವಾಗಿ ಇನ್ನೊಮ್ಮೆ ಪ್ರಕರಣದ ಸಂಪೂರ್ಣ ತನಿಖೆ ಮುಂದುವರೆಸುವ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸಿ ಹಿರಿಯ ಐಪಿಎಸ್ ಅಧಿಕಾರಿ ಡಿಸೆಂಬರ್ ,೧೫ ರ ಒಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಇದರಿಂದ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿ ಸಧ್ಯ ಬಿಎಸ್ವೈ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳೋ ಕನಸಿನಲ್ಲಿರೋ ಮುನಿರತ್ನಗೆ ಆತಂಕ ಎದುರಾಗಿದೆ.

Comments are closed.