ಮಂಗಳವಾರ, ಏಪ್ರಿಲ್ 29, 2025
HomeCinemaSree Leela : ಮದುವೆಗೂ ಮುನ್ನವೇ ಇಬ್ಬರು ಮಕ್ಕಳ ತಾಯಿ : ಮಾದರಿಯಾಯ್ತು ಶ್ರೀಲೀಲಾ ಮಾನವೀಯತೆ

Sree Leela : ಮದುವೆಗೂ ಮುನ್ನವೇ ಇಬ್ಬರು ಮಕ್ಕಳ ತಾಯಿ : ಮಾದರಿಯಾಯ್ತು ಶ್ರೀಲೀಲಾ ಮಾನವೀಯತೆ

- Advertisement -

ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ನಟ-ನಟಿಯರು ಸಾಮಾಜಿಕ ಕಾರ್ಯದಲ್ಲಿ ತೊಡಗೋದು ಮತ್ತು ಅಶಕ್ತರಿಗೆ ಸಹಾಯಹಸ್ತ ಚಾಚೋದು ಹಿಂದಿನಿಂದಲೂ ನಡೆದುಬಂದಿದೆ. ಆದರೆ ಈಗ ಈ ಸಾಲಿಗೆ ಕನ್ನಡದ ನಟಿಮಣಿಯೊಬ್ಬರು ಸೇರ್ಪಡೆಗೊಂಡಿದ್ದು ಮುಗ್ಧ ಮಕ್ಕಳಿಗಾಗಿ ಮಿಡಿದ ನಟಿ ಶ್ರೀಲೀಲಾ ಮದುವೆಗೂ ಮುನ್ನವೇ ತಾಯ್ತನದ ಭಾರ ಹೊತ್ತಿದ್ದಾರೆ. ಅದರೇ ಇದೇನಿದು ಮದುವೆಗೂ ಮುನ್ನ ತಾಯಾಗುವ ನಿರ್ಧಾರ ಅಂದ್ರಾ ನಟಿ ಶ್ರೀಲೀಲಾ (Sree Leela) ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದಿದ್ದಾರೆ.

ಇತ್ತೀಚಿಗಷ್ಟೇ ತಮ್ಮ ಬೈಟು ಲವ್ ಸಿನಿಮಾದ ಪ್ರಮೋಶನ್ ಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದ ಶ್ರೀಲೀಲಾ ನಟ ಧ್ವನೀರ್ ಜೊತೆ ದಾವಣಗೆರೆ ಬೆಣ್ಣೆ ದೋಸೆ ಹಾಕುವ ಮೂಲಕ ಗಮನ ಸೆಳೆದಿದ್ದರು. ಇದರ ಜೊತೆಗೆ ಚಿತ್ರದ ಪ್ರಮೋಶನ್ ಗಾಗಿ ಮೈಸೂರಿಗೂ ಬೈಟ್ ಟು ಲವ್ ಚಿತ್ರತಂಡ ಭೇಟಿ ಕೊಟ್ಟಿತ್ತು. ಈ ವೇಳೆ ಶ್ರೀಲೀಲಾ ಮೈಸೂರಿನಲ್ಲಿರುವ ಮನೋ ವಿಕಾಸ ಕೇಂದ್ರದ ವಿಕಲ ಚೇತನ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಆ ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ.

ಮನೋವಿಕಾಸ ಕೇಂದ್ರದಲ್ಲಿ ಸಮಯ ಕಳೆದ ಶ್ರೀಲೀಲಾ ಅಲ್ಲಿನ ವಿಶೇಷ ಚೇತನ ಮಕ್ಕಳ ಕತೆಯನ್ನು ಅರಿತು ಭಾವುಕರಾಗಿದ್ದಾರೆ. ಈ ವೇಳೆ ಶ್ರೀಲೀಲಾ, ತಂದೆ ತಾಯಿಯನ್ನು ಕಳೆದುಕೊಂಡ ಅನಾಥವಾದ ಎಂಟು ತಿಂಗಳ ಗುರು ಹಾಗೂ ಶೋಭಿತ ಅನ್ನೋ ಮಕ್ಕಳನ್ನು ದತ್ತು ಪಡೆದಿದ್ದಾರೆ. ಗುರು ಹಾಗೂ ಶೋಭಿತ್ ಅನ್ನೋ ಇಬ್ಬರು ಮಕ್ಕಳನ್ನು ದತ್ತು ಪಡೆದಿರೋ ಶ್ರೀಲೀಲಾ ಆ ಮಕ್ಕಳ ಭವಿಷ್ಯದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಶ್ರೀಲೀಲಾ ಕೆಲವು ತಿಂಗಳ ಹಿಂದೆ ವೈಯಕ್ತಿಕ ಬದುಕಿನಲ್ಲೂ ಅನಾಥ ಭಾವನೆಯಿಂದ ನರಳಿದ್ದಾರೆ.

ಶ್ರೀಲೀಲಾ ತಂದೆ ಯಾರೆಂಬ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಉದ್ಯಮಿಯೊಬ್ಬರ ಹೆಸರನ್ನು ಶ್ರೀಲೀಲಾ ಹೇಳಿದ್ದರು. ಈ ವೇಳೆ ಮಾಧ್ಯಮಗಳ ಎದುರು ಮಾತನಾಡಿದ ಆ ಉದ್ಯಮಿ ಶ್ರೀಲೀಲಾ ತನ್ನ ಮಗಳಲ್ಲ. ಆಕೆ ಪ್ರಸಿದ್ಧಿಗಾಗಿ ತನ್ನ ಹೆಸರನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ವೈಯಕ್ತಿಕ ಬದುಕಿನಲ್ಲಿ ಅನಾಥ ಪ್ರಜ್ಞೆಯನ್ನು ಅನುಭವಿಸಿದ್ದ ನೊಂದಿದ್ದ ಶ್ರೀಲೀಲಾ ಈಗ ಅನಾಥ ಮಕ್ಕಳನ್ನು ಕಂಡ ತಕ್ಷಣ ಮಾನಸಿಕವಾಗಿ ಕರಗಿ ಹೋಗಿದ್ದು ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ದತ್ತು ಪಡೆದಿದ್ದಾರೆ. ಆ ಮೂಲಕ ನಟನೆಯ ಜೊತೆಗೆ ಮಾನವೀಯತೆಯನ್ನು ಮೆರೆದು ಕನ್ನಡಿಗರ ಮನಗೆದ್ದಿದ್ದಾರೆ.

ಇದನ್ನೂ ಓದಿ : A2 MUSICನಲ್ಲಿ ಬಿಡುಗಡೆಯಾಗಲಿದೆ ನಟಿ ಅನಿತಾ ಭಟ್‌ ನಿರ್ಮಾಣದ ಇಂದಿರಾ ಸಿನಿಮಾದ ಹಾಡು

ಇದನ್ನೂ ಓದಿ : ಈ ವರ್ಷವೂ ಹುಟ್ಟುಹಬ್ಬ ಆಚರಿಸಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ : ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ?

(Before marriage, mother of two children, Sree Leela model of humanitarian)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular