Majestic Film Darshan Birthday: ಮೆಜೆಸ್ಟಿಕ್ ಸಿನಿಮಾ ಮತ್ತೆ ಬಿಡುಗಡೆಗೆ ಸಜ್ಜು; ಫೆ.16ಕ್ಕೆ ನಿಮ್ಮ ನೆಚ್ಚಿನ ಥಿಯೇಟರ್‌ಗಳಲ್ಲಿ ದರ್ಶನ್ ಅಬ್ಬರ

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ, ದರ್ಶನ್ ಎಂಬ ಸ್ಟಾರ್‌ನನ್ನು (Challenging Star Darshan Birthday) ಹುಟ್ಟುಹಾಕಿದ ಮೆಜೆಸ್ಟಿಕ್ ಸಿನಿಮಾ (Majestic Challenging Star Darshan Fil Re Release) ಮತ್ತೆ ಬಿಡುಗಡೆಯಾಗುತ್ತಿದೆ. ಕಾರಣ- ದರ್ಶನ್ ವೃತ್ತಿ ಜೀವನಕ್ಕೆ ಇಪ್ಪತ್ತರ ಹರೆಯ ತುಂಬಿದ್ದು. ಈಕುರಿತು ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಮಾಹಿತಿ ನೀಡಿದ್ದಾರೆ.‘ನನ್ನನ್ನು ನೀವು 20 ವರ್ಷಗಳಿಂದ ಸಾಕಿ ಸಲಹಿದ್ದೀರಿ. ಪ್ರೀತಿ ತೋರಿಸಿದ್ದೀರಿ. ಅದನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಸಿನಿಮಾ ಕ್ಷೇತ್ರಕ್ಕೆ ಬಂದು 20 ವರ್ಷ ಕಳೆದಿದೆ. ಈ ನೆನಪಿಗೆ ನನ್ನ ಮೊದಲ ಸಿನಿಮಾ ಮೆಜೆಸ್ಟಿಕ್ ಅನ್ನು ಫೆ.16ರಂದು (Majestic Film Darshan Birthday) ಮತ್ತೆ ತೆರೆಗೆ ತರುತ್ತಿದ್ದೇವೆ. ನಿಮ್ಮೂರಿನ ಎಲ್ಲ ಥಿಯೇಟರ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಸಿನಿಮಾದಲ್ಲಿ ಅಂಥ ಬದಲಾವಣೆ ಮಾಡಿಲ್ಲ. ತಾಂತ್ರಿಕತೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದೇವೆ. ಇದರ ಜೊತೆಗೆ ನನ್ನ ಹೊಸ ಸಿನಿಮಾದ ಬಗ್ಗೆ ನಿಮಗೆ ಆವತ್ತು ಮಾಹಿತಿ ನೀಡುತ್ತೇನೆ. ತರುಣ್- ರಾಕ್ ಲೈನ್ ಜೊತೆಗಿನ ಹೊಸ ಪ್ರಾಜೆಕ್ಟ್ ವಿಚಾರ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ದಯಮಾಡಿ, ಸಹಕರಿಸಿ’ ಎಂದು ದರ್ಶನ್ ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.

ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ. ಈಗ ದರ್ಶನ್ ಅವರಿಗೆ ವಯಸ್ಸು 45. ಅವರು ಸಿನಿಮಾ ರಂಗಕ್ಕೆ ಕಾಲಿಟ್ಟು 20 ವರ್ಷ ಪೂರೈಸಿದೆ. ಫೆಬ್ರವರಿ 8, 2002ರಲ್ಲಿ ದರ್ಶನ್ ಅಭಿನಯದ ಮೊದಲ ಸಿನಿಮಾ ಮೆಜೆಸ್ಟಿಕ್ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಪಿ.ಎನ್. ಸತ್ಯ ನಿರ್ದೇಶನ ಮಾಡಿದ್ದರು. ಭಾಮಾ ಹರೀಶ್ ಮತ್ತು ರಾಮಮೂರ್ತಿ ಅವರ ನಿರ್ಮಾಣ, ಸಾಧುಕೋಕಿಲ ಸಂಗೀತ ನೀಡಿದ್ದರು. ದರ್ಶನ್ ಹುಟ್ಟುಹಬ್ಬದ ಹಾಗೂ ಸಿನಿಮಾ ರಂಗಕ್ಕೆ ಬಂದು ಎರಡು ದಶಕವಾಗಿರುವ ನೆಪದಲ್ಲಿ ಮೆಜಸ್ಟಿಕ್ ಸಿನಿಮಾವನ್ನು ರಾಜ್ಯ ಎಲ್ಲಾ ಸಿನಿಮಾ ಮಂದಿರಗಳಲ್ಲಿ ಮರು ಪ್ರದರ್ಶಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಇದೇ ದರ್ಶನ್ ಅವರ ಕಡೆಯಿಂದ ಅಭಿಮಾನಿಗಳಿಗೆ ಗಿಫ್ಟ್.  ಈ ಸಲ ಹುಟ್ಟುಹಬ್ಬ ಸಂಭ್ರಮ ಇರೋಲ್ಲ. ಅಭಿಮಾನಿಗಳು ಮನೆ ಮುಂದೆ ಜಮಾಯಿಸಿ, ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡುವ ಯಾವ ಕಾರ್ಯಕ್ರಮಗಳೂ ನಡೆಯುವುದಿಲ್ಲ.ಈ ವಿಚಾರವಾಗಿ ದರ್ಶನ್ ಅವರೇ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ‘ಎಂದಿನಂತೆ ಈ ವರ್ಷ ಫೆಬ್ರವರಿ 16 ಬರ್ತಿದೆ. ಆವತ್ತು ನನ್ನ ಹುಟ್ಟಿದ ದಿನ. ದಯಮಾಡಿ ಯಾರೂ ಕೂಡ ಬೇರೆಬೇರೆ ಊರುಗಳಿಂದ ನನ್ನ ಹುಟ್ಟುಹಬ್ಬವನ್ನು ಆಚರಿಸಲು ಬರಬೇಡಿ. ಈ ಬಾರಿ ಯಾವ ಕಾರಣಕ್ಕೂ ಹುಟ್ಟುಹಬ್ಬವನ್ನು ಮಾಡಿ ಕೊಳ್ಳುತ್ತಿಲ್ಲ. ಇದಕ್ಕೆ ಕಾರಣ, ಕಳೆದ ವರ್ಷ ನಾವೆಲ್ಲ ನಮ್ಮ ಪುನೀತ್ ರಾಜ್ ಕುಮಾರ್  ಅವರನ್ನು ಕಳೆದುಕೊಂಡಿದ್ದೇವೆ. ಆ ನೋವು ಇನ್ನೂ ಇರುವಾಗ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಲು ಮನಸ್ಸು ಒಪ್ಪುತ್ತಿಲ್ಲ. ಇನ್ನೊಂದು ಕೊರೋನ. ಎರಡೂ ಕಾರಣದಿಂದ ಈ ಸಲದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಮುಂದಿನ ವರ್ಷ ಗ್ಯಾರಂಟಿ ನಿಮಗೆ ಸಿಕ್ತೀನಿ. ದಯಮಾಡಿ ಕ್ಷಮಿಸಿ’ ಎಂದು ದರ್ಶನ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: How be sexy hot?: ಸರಳವಾಗಿ ಸುಂದರ ಮತ್ತು ಮಾದಕವಾಗಿ ಕಾಣುವುದು ಹೇಗೆ?

(Majestic Film Darshan Birthday re release)

Comments are closed.