ಸಿನಿಮಾಕ್ಕಿಂತ ಪೋಟೋಶೂಟ್ ಮತ್ತು ಪ್ರವಾಸದಿಂದಲೇ ಸದ್ದು ಮಾಡಿರೋ ನಟಿ ಐಂದ್ರಿತಾ ರೈ ಪಡ್ಡೆಹೈಕಳ ನಿದ್ದೆ ಕದಿಯೋ ಪೋಟೋಗಳ ಮೂಲಕ ಸೋಷಿಯಲ್ ಮೀಡಿಯಾದ ರಂಗೇರಿಸಿದ್ದಾರೆ. ಬಿಸಿಲಿನ ಬೇಗೆಯನ್ನು ತಂಪಾಗಿಸುವಂತ ಸೌಂದರ್ಯದ ಖನಿಯಾಗಿ ಐಂದ್ರಿತಾ ರೈ (Aindrita Ray) ಬೋಲ್ಡ್ ಪೋಸ್ ನೀಡಿದ್ದಾರೆ.
ಐಂದ್ರೀತಾ ರೈ ಮನಮೋಹಕ ಚೆಲುವನ್ನು ಭುವನ್ ಪೋಟೋಗ್ರಫಿ (Bhuvan Photograph) ತಂಡ ಸೆರೆಹಿಡಿದಿದೆ. ಬ್ಯೂಟಿಫುಲ್ ಬಿಕನಿಯ ಜೊತೆ ಐಂದ್ರಿತಾ ರೈ ತಿಳಿ ನೀಲ ಆಕಾಶದ ಅಂಗಳದಲ್ಲಿ ಜೋಕಾಲಿಯಾಡುತ್ತಾ, ಮರಳಿನಲ್ಲಿ ಮೈಚೆಲ್ಲಿ ಮಲಗುತ್ತಾ, ತುಂಟ ಕಣ್ಣಿನ ಹುಡುಗಿಯಾಗಿ ಪೋಸ್ ನೀಡಿದ್ದು ಐಂದ್ರೀತಾ ಅಭಿಮಾನಿಗಳು ಈ ಪೋಟೋಸ್ ನೋಡಿ ವಾವ್ ಬ್ಯೂಟಿಫುಲ್ ಎಂದು ಉದ್ಘರಿಸಿದ್ದಾರೆ.

ಕೇವಲ ಇದೊಂದೇ ಅಲ್ಲ ಐಂದ್ರಿತಾ ರೈ ಸೋಷಿಯಲ್ ಮೀಡಿಯಾ ವಾಲ್ ತುಂಬ ಮಾದಕ ಪೋಟೋಗಳದ್ದೇ ರಾಶಿ ಇದೆ. ಪೆಟ್ ಲವ್ವರ್ ಆಗಿರೋ ಐಂದ್ರಿತಾ ರೈ ಸದಾಕಾಲ ತಮ್ಮ ನಾಯಿಗಳು ಹಾಗೂ ಪತಿ ದಿಗಂತ್ ಜೊತೆ ಪ್ರವಾಸ ಹೋಗೋದನ್ನು ಇಷ್ಟಪಡುತ್ತಾರೆ. ಮಾತ್ರವಲ್ಲ ಪ್ರತಿಯೊಂದು ಪ್ರವಾಸದಲ್ಲೂ ಹಾಟ್ ಹಾಟ್ ಪೋಟೋಶೂಟ್ ಮಾಡಿಸೋದನ್ನು ಐಂದ್ರೀತಾ ಮರೆಯೋದಿಲ್ಲ.
ಇದನ್ನೂ ಓದಿ : ಬಾಲಿವುಡ್ ನಟಿಯರಿಗೂ ಸೆಡ್ಡು ಹೊಡೆಯೋ ಸುಂದರಿ: ಇದು ಧನ್ಯಾ ರಾಮಕುಮಾರ್ ಮನಸೆಳೆಯೋ ಪೋಟೋಶೂಟ್
ಸ್ಲೈಕ್ಲಿಂಗ್,ಯೋಗಾ ಹೀಗೆ ಹಲವಾರು ಹೆಲ್ದಿ ಹವ್ಯಾಸ ಹೊಂದಿರೋ ಐಂದ್ರಿತಾ ಸೋಷಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ ಸೋಷಿಯಲ್ ಆಕ್ಟಿವಿಟಿಸ್ ನಲ್ಲೂ ಸಕ್ರಿಯವಾಗಿದ್ದಾರೆ. ರಾಜಸ್ಥಾನದ ಉದಯಪುರದ ಬಂಗಾಲಿ ಕುಟುಂಬದಲ್ಲಿ ಜನಿಸಿದ ಐಂದ್ರೀತಾ ರೈ ಮುಂಬೈನಲ್ಲಿ ಬೆಳೆದರು. ಬೆಂಗಳೂರಿನ. ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಐಂದ್ರಿತಾ ಮಾಡೆಲಿಂಗ್ ಹಾಗೂ ದೂರದರ್ಶನದ ಜಾಹೀರಾತುಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಬೆಂಗಾಲಿ ಸಿನಿಮಾದಲ್ಲೂ ನಟಿಸಿದ ಅನುಭವ ಹೊಂದಿರೋ ಐಂದ್ರಿತಾ ರೈ, ಕನ್ನಡದಲ್ಲಿ 2006 ರಲ್ಲಿ ಜಾಕ್ಪಾಟ್ ನಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಮೇಲೆ 2008 ರಲ್ಲಿ ಮೆರವಣಿಗೆ ಸಿನಿಮಾದ ಮೂಲಕ ತಮ್ಮ ಕೆರಿಯರ್ ಆರಂಭಿಸಿದರು. ಇದಾದ ಬಳಿಕ ಸಕ್ರಿಯವಾಗಿ ಸಿನಿಮಾಗಳಲ್ಲಿ ಮಿಂಚಿದ ಐಂದ್ರಿತಾ ಮಸ್ತಮಜಾಮಾಡಿ, ವಾಯುಪುತ್ರ,ಜಂಗ್ಲಿ ಸಿನಿಮಾದಲ್ಲಿ ನಟಿಸಿದರು.
ಅದರಲ್ಲೂ ಜಂಗ್ಲಿ ಸಿನಿಮಾದ ಹಾಡುಗಳಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿರಸಿಕರ ಮನಸೂರೆಗೊಂಡರು. ಪುನೀತ್ ರಾಜ್ ಕುಮಾರ್ ಜೊತೆ ನಟಿಸಿದ ಪರಮಾತ್ಮ ಸಿನಿಮಾ ಕೂಡ ಐಂದ್ರಿತಾ ಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಅಂದಾಜು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಐಂದ್ರಿತಾ 2018 ರ ಡಿಸೆಂಬರ್ 12 ರಂದು ಬಹುಭಾಷಾ ನಟ ದಿಗಂತ್ ಜೊತೆ ಸಪ್ತಪದಿ ತುಳಿದು ಕನ್ನಡದ, ಕರ್ನಾಟಕದ ಸೊಸೆಯಾದ್ರು.

ಇತ್ತೀಚೆಗಷ್ಟೇ ನಟಿ ಐಂದ್ರಿತಾ ರೈ ಹಸು ತ್ಯಾಜ್ಯ ಸಾಗಣೆ ಬಗ್ಗೆ ಬೆಂಗಳೂರು ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಮಾಡಿ ಸುದ್ದಿಯಾಗಿದ್ದರು. ರಾತ್ರಿ ಟ್ರಕ್ ನಲ್ಲಿ ಹಸುವಿನ ತ್ಯಾಜ್ಯವನ್ನು ಸಾಗಿಸಲಾಗುತ್ತಿತ್ತು. ಎಫ್ ಆಯ್ ಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರು ನಿರಾಕರಿಸುತ್ತಿದ್ದಾರೆ. FIR ದಾಖಲಿಸಿ ತನಿಖೆ ನಡೆಸಬೇಕು.
ಇದನ್ನೂ ಓದಿ : ಮದಕರಿ ಸುಂದರಿ ರಾಗಿಣಿ ದ್ವಿವೇದಿ ಮಾದಕ ನೋಟ : ಪಡ್ಡೆ ಹೈಕಳಿಗೆ ಹಬ್ಬದೂಟ
ಗೋಹತ್ಯೆ ಕಾನೂನು ಬಾಹಿರ ಎಂದು ಬೆಂಗಳೂರು ಪೊಲೀಸರು, ಬೊಮ್ಮನಹಳ್ಳಿ ಪೊಲೀಸ್ ಠಾಣೆ, ಡಿಸಿಪಿ ಹಾಗೂ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಬಳಿಕ ಈ ಸಂಗತಿ ತೀವ್ರ ವಿವಾದ ಸೃಷ್ಟಿಸಿತ್ತು. ಬಳಿಕ ಡಿಸಿಪಿ ಸಿ.ಕೆ.ಬಾಬಾ ಅದು ತಮಿಳುನಾಡಿನ ತ್ಯಾಜ್ಯ ಸಂಗ್ರಹಣೆ.
ಆದರೆ ಪಶು ತ್ಯಾಜ್ಯವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಪತಿಯ ಜೊತೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಬಳಿಕ ಸದ್ಯ ಐಂದ್ರಿತಾ ರೈ ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ.
Bengali Beauty Aindrita Ray Latest Photoshoot