ಬಾಲಿವುಡ್ ನಟಿಯರಿಗೂ ಸೆಡ್ಡು ಹೊಡೆಯೋ ಸುಂದರಿ: ಇದು ಧನ್ಯಾ ರಾಮಕುಮಾರ್ ಮನಸೆಳೆಯೋ ಪೋಟೋಶೂಟ್

ಸ್ಯಾಂಡಲ್ ವುಡ್ ನ (Sandalwood) ದೊಡ್ಮನೆ ಎಂದೇ ಗುರುತಿಸಿಕೊಂಡ ಡಾ.ರಾಜ್ (Dr.Rajkumar Family)  ಕುಟುಂಬದ ಕುಡಿ ಧನ್ಯಾ ರಾಮ್ ಕುಮಾರ್ (Dhanya Ramkumar).

ಸ್ಯಾಂಡಲ್ ವುಡ್ ನ (Sandalwood) ದೊಡ್ಮನೆ ಎಂದೇ ಗುರುತಿಸಿಕೊಂಡ ಡಾ.ರಾಜ್ (Dr.Rajkumar Family)  ಕುಟುಂಬದ ಕುಡಿ ಧನ್ಯಾ ರಾಮ್ ಕುಮಾರ್ (Dhanya Ramkumar). ಡಾ.ರಾಜ್ ಬಳಿಕ ದೊಡ್ಮನೆಯಿಂದ ಗಂಡುಮಕ್ಕಳು ಇಂಡಸ್ಟ್ರಿಗೆ ಕಾಲಿಟ್ಟಿದ್ದು ಬಿಟ್ಟರೇ, ಫುಲ್ ಟೈಂ ಚಂದನವನಕ್ಕೆ ರಾಜ್ ಕುಟುಂಬದಿಂದ ಬಂದ ಹೆಣ್ಣುಮಗಳು ಧನ್ಯಾ ರಾಮ್ ಕುಮಾರ್. ಶಿವರಾಜ್ ಕುಮಾರ್ ಎರಡನೇ ಪುತ್ರಿ ನಿವೇದಿತಾ ಚಿಕ್ಕಂದಿನಲ್ಲಿ ಒಂದೆರಡು ಚಿತ್ರಗಳಿಗೆ ಬಣ್ಣ ಹಚ್ಚಿದ್ದರು.

Sandalwood Actor Ram Kumar Daughter Actress Dhanya Ramkumar PhotoShoot
Image Credit : Dhanya Ramkumar Instagram

ಆದರೆ ನಾಯಕಿಯಾಗಿ ಮಿಂಚಿದ್ದು ಧನ್ಯಾ ರಾಮ್ ಕುಮಾರ್ ಮಾತ್ರ. ಕೇವಲ ಸಿನಿಮಾ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಧನ್ಯಾ ಬೋಲ್ಡ್ ಲೈಫ್ ಸ್ಟೈಲ್ ಮೂಲಕ ಗಮನ ಸೆಳೆದಿದ್ದಾರೆ. ಧನ್ಯಾ ರಾಮಕುಮಾರ್ ಡಾ.ರಾಜ್ ಮೊಮ್ಮಗಳು. ನಟ ರಾಮ್ ಕುಮಾರ್ ಹಾಗೂ ಪೂರ್ಣಿಮಾ ದಂಪತಿಯ ಮಗಳು.

Sandalwood Actor Ram Kumar Daughter Actress Dhanya Ramkumar PhotoShoot
Image Credit : Dhanya Ramkumar Instagram

ತಂದೆಯಿಂದ ಬಣ್ಣ , ಅಜ್ಜನ ಮನೆಯಿಂದ ಹಾಡುಗಾರಿಕೆ, ನಟನೆಯನ್ನು ಬಳುವಳಿಯಾಗಿ ಪಡೆದ ಧನ್ಯಾ ನೀಳಕಾಯದ ಸುಂದರಿ. ಓದು ಮುಗಿಸಿದ ಬಳಿಕ ತಂದೆಯ ವಿರೋಧದ ನಡುವೆಯೂ ಚಿತ್ರರಂಗಕ್ಕೆ ಕಾಲಿಟ್ಟ ಧನ್ಯಾಗೆ ಮಾವಂದಿರ ಬೆಂಬಲ, ಪ್ರೋತ್ಸಾಹವೇ ಶ್ರೀರಕ್ಷೆ.

ಇದನ್ನೂ ಓದಿ : ಅನ್ವೇಶಿ ಜೈನ್ ಎಂಬ ಮಾದಕಕನ್ಯೆ : ಸೋಷಿಯಲ್ ಮೀಡಿಯಾದಲ್ಲಿ ಮೋಡಿ ಮಾಡಿದ ಮಾರ್ಟಿನ್ ಚೆಲುವೆ

Sandalwood Actor Ram Kumar Daughter Actress Dhanya Ramkumar PhotoShoot
Image Credit : Dhanya Ramkumar Instagram

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಧನ್ಯಾ ರಾಮಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸದಾಕಾಲ ನಟನೆಯಲ್ಲೇ ಬ್ಯುಸಿಯಾಗಿರೋ ನಟಿಮಣಿಯರ ಮಧ್ಯೆ ಧನ್ಯಾ ನಟನೆ ಜೊತೆಗೆ ಪ್ರವಾಸಕ್ಕೂ ಟೈಂ ಕೊಡುತ್ತಾರೆ. ಪ್ರೆಂಡ್ಸ್ ಜೊತೆ ವಿದೇಶಗಳನ್ನೂ ಸುತ್ತೋ ಧನ್ಯಾ ಅಲ್ಲಿನ ಸೈಟ್ ವಿಸಿಟ್, ಫುಡ್ ಕಲ್ಚರ್ ಎಲ್ಲ ವಿಚಾರಗಳನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಾರೆ.

Sandalwood Actor Ram Kumar Daughter Actress Dhanya Ramkumar PhotoShoot
Image Credit : Dhanya Ramkumar Instagram

ಅದರಲ್ಲೂ ಧನ್ಯಾ ರಾಜ್ ಕುಟುಂಬದ ಹೆಣ್ಣುಮಕ್ಕಳ ಪೈಕಿ ಸ್ವಲ್ಪ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್. ಯಾಕೆಂದರೆ ರಾಜ್ ಕುಟುಂಬದ ಯಾವ ಹೆಣ್ಣು ಮಕ್ಕಳು ಮಾಡರ್ನ್ ಬಟ್ಟೆಗಳಲ್ಲಿ ಕಾಣಿಸಿಕೊಳ್ಳೋದೇ ಅಪರೂಪ. ಆದರೆ ಧನ್ಯಾ ಮಾತ್ರ ಟ್ರೆಡಿಶನ್ ಜೊತೆ ಸಖತ್ ಮಾಡರ್ನ್ ಬಟ್ಟೆಗಳಲ್ಲೂ ಪೋಟೋಶೂಟ್ ಗೆ ಧನ್ಯಾ ಪೋಸ್ ನೀಡಿದ್ದಾರೆ.

ಇದನ್ನೂ ಓದಿ : ಸಪ್ತಮಿಯ ಲೀಲಾವತಾರ ! ಹಬ್ಬದ ರಂಗೇರಿಸಿದ ಕಾಂತಾರ ಚೆಲುವೆ

Sandalwood Actor Ram Kumar Daughter Actress Dhanya Ramkumar PhotoShoot
Image Credit : Dhanya Ramkumar Instagram

ಮಾಲ್ಡಿವ್ಸ್ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಿಗೆ ಪ್ರವಾಸ ಮಾಡ್ತಿರೋ ಧನ್ಯಾ, ಗೌನ್,ಸೆಲ್ವಾರ್,ಸೀರೆ ಜೊತೆ ಶಾರ್ಟ್ಸ್ ಸೇರಿದಂತೆ ವೈರೈಟಿ ವೈರೈಟಿ ಡ್ರೆಸ್ ಗಳಲ್ಲಿ ಪೋಸ್ ನೀಡಿದ್ದಾರೆ. ಸಮುದ್ರ ತೀರದಲ್ಲಿ ಸಮಯ ಕಳೆಯೋದನ್ನು ತುಂಬಾ ಇಷ್ಟ ಪಡೋ ಧನ್ಯಾ ಹಲವು ಭಾರಿ ತಮ್ಮ ಹಳೆಯ ಟ್ರಿಪ್ ಪೋಟೋಗಳನ್ನು ಶೇರ್ ಮಾಡಿ ಈಗ ನನ್ನ ಮನಸ್ಸು ಅಲ್ಲಿದೆ ಎಂದು ಪೋಸ್ಟ್ ಹಾಕ್ತಾರೆ.

Sandalwood Actor Ram Kumar Daughter Actress Dhanya Ramkumar PhotoShoot
Image Credit : Dhanya Ramkumar Instagram

ನಿನ್ನ ಸನಿಹಕೆ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಧನ್ಯಾ ಕಾಲಾಪತ್ಥರ್, ಹೈಡ್ ಆಂಡ್ ಸೀಕ್, ದ ಜಡ್ಜಮೆಂಟ್, ಎಲ್ಲಾ ನಿನಗಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಪೋಟೋಗಳು ಮಾತ್ರವಲ್ಲ ಕನ್ನಡ ಪರ ವಿಚಾರಗಳಲ್ಲಿ ಬೋಲ್ಡ್ ಕಮೆಂಟ್ ಮಾಡೋ ಮೂಲಕ ಕೂಡ ಧನ್ಯಾ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ : ಮದಕರಿ ಸುಂದರಿ ರಾಗಿಣಿ ದ್ವಿವೇದಿ ಮಾದಕ ನೋಟ : ಪಡ್ಡೆ ಹೈಕಳಿಗೆ ಹಬ್ಬದೂಟ

Sandalwood Actor Ram Kumar Daughter Actress Dhanya Ramkumar PhotoShoot
Image Credit : Dhanya Ramkumar Instagram

ಡ್ಯಾನ್ಸರ್ ಸಲ್ಮಾನ್ ಯೂಸೂಫ್ ಖಾನ್ ಬೆಂಗಳೂರಿನ ಏರ್ಪೋರ್ಟ್ ನಲ್ಲಿ ಕನ್ನಡ ಹೇರಿಕೆ ಬಗ್ಗೆ ಮಾತಾನಾಡಿದಾಗ ನೇರವಾಗಿ ಕಮೆಂಟ್ ಮಾಡೋ ಮೂಲಕ ಗಮನ ಸೆಳೆದಿದ್ದರು. ಒಟ್ನಲ್ಲಿ ಸ್ಯಾಂಡಲ್ ವುಡ್ ಗೊಂದು ಭರವಸೆ ನಾಯಕಿ ಸಿಕ್ಕಿದ್ದು, ಇನ್ನಷ್ಟು ಸಿನಿಮಾಗಳ ಮೂಲಕ ಧನ್ಯಾ ಪ್ರತಿಭೆ ಅನಾವರಣಗೊಳ್ಳಬೇಕಿದೆ.‌

Sandalwood Actor Ram Kumar Daughter Actress Dhanya Ramkumar PhotoShoot

Comments are closed.