bhagyavantharu : ಸ್ಯಾಂಡಲ್ವುಡ್ನಲ್ಲಿ ಸದ್ಯ ಸಾಲು ಸಾಲು ಹಿಟ್ ಸಿನಿಮಾಗಳು ತೆರೆಗೆ ಬರುತ್ತಿವೆ. ಗರುಡ ಗಮನ ವೃಷಭ ವಾಹನ,ಕೆಜಿಎಫ್ 2, ಚಾರ್ಲಿ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳ ಬಳಿಕ ಸ್ಯಾಂಡಲ್ವುಡ್ನ ಗತ್ತಿನ ಬಗ್ಗೆ ದೇಶಾದ್ಯಂತ ಸುದ್ದಿಯಾಗುತ್ತಿದೆ. ಉತ್ತರ ಭಾರತದ ಸಿನಿಮಾ ಇಂಡಸ್ಟ್ರಿ ಕೂಡ ಸಾಲು ಸಾಲು ಹಿಟ್ ಸಿನಿಮಾಗಳ ಬಳಿಕ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯತ್ತ ತಿರುಗಿ ನೋಡುತ್ತಿದೆ. ಆದರೆ ಅದೆಷ್ಟೇ ಹಿಟ್ ಸಿನಿಮಾಗಳು ಬೆಳ್ಳಿ ತೆರೆಗೆ ಏರಿರಲಿ. ಈಗಲೂ ಕೂಡ ಅಣ್ಣಾವ್ರ ಸಿನಿಮಾ ಅಂದರೆ ಇಷ್ಟ ಪಡುವ ಜನರು ಸಾಕಷ್ಟು ಮಂದಿಯಿದ್ದಾರೆ. ವರನಟ ಡಾ.ರಾಜ್ಕುಮಾರ್ ಸಿನಿಮಾ ಬೆಳ್ಳಿ ತೆರೆ ಮೇಲೆ ಮತ್ತೆ ಪ್ರದರ್ಶನ ಕಾಣುತ್ತೆ ಅಂದರೆ ಇದಕ್ಕಿಂತ ದೊಡ್ಡ ಸಿಹಿ ಸುದ್ದಿ ಕನ್ನಡ ಸಿನಿಮಾ ಪ್ರಿಯರಿಗೆ ಇನ್ನೊಂದು ಸಿಗಲು ಸಾಧ್ಯವೇ ಇಲ್ಲ.
ವರನಟ ಡಾ. ರಾಜ್ಕುಮಾರ್ ಹಾಗೂ ಹಿರಿಯ ನಟಿ ಬಿ.ಸರೋಜಾದೇವಿ ನಟಿಸಿದ್ದ ಭಾಗ್ಯವಂತರು ಸಿನಿಮಾ ನಿಮಗೆ ನೆನಪಿದ್ದರಬಹುದು. 45 ವರ್ಷಗಳ ಹಿಂದೆ ತೆರೆ ಕಂಡಿದ್ದ ಈ ಸಿನಿಮಾಗೆ ಭಾರ್ಗವ ಆ್ಯಕ್ಷನ್ ಕಟ್ ಹೇಳಿದ್ದರೆ ದ್ವಾರಕೀಶ್ ಬ್ಯಾನರ್ನ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾ ಅಂದು ಸೂಪರ್ ಹಿಟ್ ಪ್ರದರ್ಶನ ಕೂಡ ಕಂಡಿತ್ತು.
ಇದೀಗ ಈ ಸಿನಿಮಾ ಮತ್ತೊಮ್ಮೆ ಬೆಳ್ಳಿ ತೆರೆಯಲ್ಲಿ ಪ್ರದರ್ಶನ ಕಾಣಲು ಸಜ್ಜಾಗುತ್ತಿದೆ. ಹೊಸ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಎಂ. ಮುನಿರಾಜು ಈ ಸಿನಿಮಾವನ್ನು ರಿ ರಿಲೀಸ್ ಮಾಡುತ್ತಿದ್ದಾರೆ. ಜುಲೈ 8ರಂದು ಭಾಗ್ಯವಂತರು ಸಿನಿಮಾ ರಾಜ್ಯದ 50ಕ್ಕೂ ಅಧಿಕ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಭಾಗ್ಯವಂತರು ಸಿನಿಮಾಗೆ 7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಮುನಿರಾಜು ಈ ರೀತಿ ರಾಜ್ಕುಮಾರ್ರ ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಪರೇಷನ್ ಡೈಮಂಡ್ ರಾಕೆಟ್, ನಾನೊಬ್ಬ ಕಳ್ಳ, ದಾರಿ ತಪ್ಪಿದ ಸಿನಿಮಾಗಳನ್ನೂ ಸಹ ಮುನಿರಾಜು ಇದೇ ರೀತಿ ಆಧುನಿಕ ತಂತ್ರಜ್ಞಾನ ಬಳಸಿ ರಿಲೀಸ್ ಮಾಡಿದ್ದರು. ಅಣ್ಣಾವ್ರ ಅಪ್ಪಟ ಅಭಿಮಾನಿಯಾಗಿರುವ ಮುನಿರಾಜು ರಾಜ್ಕುಮಾರ್ರ ಇನ್ನೂ ಹಲವು ಸಿನಿಮಾಗಳನ್ನು ರಿ ರಿಲೀಸ್ ಮಾಡುವ ಗುರಿಯನ್ನು ಹೊಂದಿದ್ದಾರೆ.
ಇದನ್ನೂ ಓದಿ : Alia Bhatt : ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಆಲಿಯಾ ಭಟ್,ರಣಬೀರ್ ಕಪೂರ್ ದಂಪತಿ
bhagyavantharu dr rajkumar kannada film rerelease new technology