ನಟಿ ಶ್ರೀ ಲೀಲಾ (Sreeleela) “ಕಿಸ್” ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಂತರ ಭರಾಟೆ ಸಿನಿಮಾದಲ್ಲಿ ನಟ ಮುರಳಿ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ ನಟಿ ಶ್ರೀ ಲೀಲಾಗೆ ಟಾಲಿವುಡ್‌ನಲ್ಲಿ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿದೆ. ತೆಲುಗು ಸಿನಿಮಾರಂಗದಲ್ಲಿ ಜಾಲ್ತಿಯಲ್ಲಿರುವ ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಶ್ರೀ ಲೀಲಾ ಸೆಡ್ಡೆ ಹೊಡೆದು ನಿಂತಿದ್ದಾರೆ. ತೆಲುಗಿನ ಸಾಲು ಸಾಲು ಸಿನಿಮಾಗಳಿಗೆ ಭರಾಟೆ ಬೆಡಗಿ ಶ್ರೀ ಲೀಲಾ ನಾಯಕಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕಿಸ್, ಭರಾಟೆ ಹಾಗೂ ಬೈಟು ಲವ್ ಮೂರು ಸಿನಿಮಾಗಳಲ್ಲಿ ನಟಿಸಿದ ಶ್ರೀ ಲೀಲಾ “ಪೆಳ್ಳಿ ಸಂದಡಿ” ಸಿನಿಮಾದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟಿದ್ದು, ತೆಲುಗು ಸಿನಿಪ್ರಿಯರಿಗೆ ಚಿರಪರಿಚಿತರಾಗಿದ್ದಾರೆ. ಇದೀಗ ಶ್ರೀ ಲೀಲಾ ತೆಲುಗಿನ ಬ್ಯಾಕು ಟೂ ಬ್ಯಾಕ್ ಏಳು ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಶ್ರೀ ಲೀಲಾಗೆ ತೆಲುಗಿನ ಸ್ಟಾರ್ ನಟರು ಜೋಡಿಯಾಗಲಿದ್ದಾರೆ.
ಶ್ರೀ ಲೀಲಾ ಸದ್ಯ ಏಳು ತೆಲುಗು ಸಿನಿಮಾಗಳಿಗೆ ಸಹಿ ಹಾಕಿದ್ದು ತೆಲುಗು ಸಿನಿರಂಗದಲ್ಲೇ ಸುಮಾರು ಎರಡರಿಂದ ಮೂರು ವರ್ಷಗಳ ಕಾಲ ಬ್ಯುಸಿಯಾಗುವುದು ಖಚಿತವಾಗಿದೆ. ಶ್ರೀ ಲೀಲಾ ಸಹಿ ಹಾಕಿರುವ ತೆಲುಗು ಸಿನಿಮಾಗಳೆಂದರೆ, ಧಮಾಕಾ ಸಿನಿಮಾ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಮೂಡಿ ಬರಲಿದೆ. ಬೋಯಾಪತಿ ಸಿನಿಮಾ ಶ್ರೀನಿವಾಸ ಹಾಗೂ ರಾಮ್ ಪೋತಿನೇನಿ ಕಾಂಬಿನೇಶನ್‌ನಲ್ಲಿ ಮೂಡಿ ಬರಲಿದೆ. ನಿತಿನ್ ಅಭಿನಯದ ೩೨ನೇ ಸಿನಿಮಾ, ವೈಷ್ಣವ್ ತೇಜಾ ಅಭಿನಯದ ನಾಲ್ಕನೇ ಸಿನಿಮಾ ಅನಗನಗಾ ಒಕ ರೋಜು, ನಂದಮೂರಿ ಬಾಲಕೃಷ್ಣ ನಟನೆಯ ೧೦೮ನೇ ಸಿನಿಮಾ. ಮಹೇಶ್ ಬಾಬು ಸಿನಿಮಾಕ್ಕೆ ಶ್ರೀ ಲೀಲಾ ಎರಡನೇ ನಾಯಕಿಯಾಗಿ ನಟಿಸಿದ್ದಾರೆ.
ಇದನ್ನೂ ಓದಿ : Ranjani Raghavan : “ಸ್ವೈಪ್ ರೈಟ್” ಕಾದಂಬರಿ ಬರೆದ ಕನ್ನಡತಿ ಖ್ಯಾತಿಯ ರಂಜನಿ ರಾಘವನ್
ಇದನ್ನೂ ಓದಿ : Siddharth Aditi Rao : ಮುಂಬೈ ಹೋಟೆಲ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸಿದ್ಧಾರ್ಥ – ಅದಿತಿ
ನಟಿ ಶ್ರೀ ಲೀಲಾ ತೆಲುಗು ಸಿನಿಮಾರಂಗದಲ್ಲಿ ಇಷ್ಟೇಲ್ಲಾ ಸಿನಿಮಾಗಳು ಅನೌನ್ಸ್ ಆಗುತ್ತಿರಬೇಕಾದರೆ ಇತ್ತೀಚೆಗೆ ರಶ್ಮಿಕಾ, ಪೂಜಾ ಹೆಗ್ಡೆ ಹೆಚ್ಚು ಸಿನಿಮಾಗಳನ್ನು ಘೋಷಿಸದೇ ಇರುವುದು ಸದ್ಯ ಬಾರೀ ಚರ್ಚೆಗೆ ಗುರಿಯಾಗಿದೆ.
Bharata Bedagi Sreeleela who signed 7 Telugu movies