Ranjani Raghavan : “ಸ್ವೈಪ್‌ ರೈಟ್‌” ಕಾದಂಬರಿ ಬರೆದ ಕನ್ನಡತಿ ಖ್ಯಾತಿಯ ರಂಜನಿ ರಾಘವನ್‌

ರಂಜನಿ ರಾಘವನ್‌ (Ranjani Raghavan) “ಆಕಾಶದೀಪ” ಸೀರಿಯಲ್‌ ಮೂಲಕ ಕಿರುತೆರೆಗೆ ಬಂದಿದ್ದು, ನಂತರ ಪುಟ್ಟ ಗೌರಿ ಮದುವೆ ಸೀರಿಯಲ್‌ನಲ್ಲಿ ದೊಡ್ಡ ಗೌರಿಯಾಗಿ ಕನ್ನಡಿಗರ ಮನೆ ಮನಗಳನ್ನು ತಲುಪಿದ್ದಾರೆ. ಪ್ರಸುತ “ಕನ್ನಡತಿ”ಯಲ್ಲಿ ಭುವನೇಶ್ವರಿ ಪಾತ್ರವನ್ನು ನಟಿಸುತ್ತಿರುವ ರಂಜನಿ ರಾಘವನ್‌ ನಟನೆಯಲ್ಲಿ ಮಾತ್ರವಲ್ಲದೇ ಉತ್ತಮ ಬರಹಗಾರ್ತಿ ಆಗಿದ್ದಾರೆ. ಅಷ್ಟೇ ಅಲ್ಲದೇ ಸುಶ್ರಾವ್ಯವಾಗಿ ಹಾಡುಗಳನ್ನು ಹಾಡುತ್ತಾರೆ.

ಈಗಾಗಲೇ ಇವರು ಬರೆದಿರುವ “ಕತೆಡಬ್ಬಿ” ಎಂಬ ಕಥಾ ಸಂಕಲನವನ್ನು ಓದುಗರು ಓದಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈಗ ರಂಜನಿ ರಾಘವನ್‌ ಹೊಸ ಕಾದಂಬರಿ ಪುಸ್ತಕವನ್ನು ಬರೆದಿದ್ದಾರೆ. ಈ ಕಾದಂಬರಿಗೆ ” ಸ್ವೈಪ್‌ ರೈಟ್‌” ಎನ್ನುವ ಹೆಸರನ್ನು ಸೂಚಿಸಿದ್ದಾರೆ. ಹೊಸದಾಗಿ ಬರೆದಿರುವ “ಸ್ವೈಪ್‌ ರೈಟ್‌” ಕಾದಂಬರಿ ಪುಸ್ತಕವನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ಇದೇ ಬರುವ ಡಿಸೆಂಬರ್‌ 7ರಂದು ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ರಂಜನಿ ರಾಘವನ್‌ ಹಂಚಿಕೊಂಡಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಬರುವ ಕನ್ನಡತಿ ಸೀರಿಯಲ್‌ಗೆ ಕರ್ನಾಟಕದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಭಿಮಾನಿಗಳು ಭಾಷೆಯ ಸೊಗಡನ್ನು ಮೆಚ್ಚಿಕೊಂಡಿದ್ದಾರೆ. ಭಾಷೆಯಷ್ಟೇ ಈ ಸೀರಿಯಲ್‌ನಲ್ಲಿ ಭುವಿ ಪಾತ್ರ ಕೂಡ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ರಂಜನಿ ರಾಘವನ್‌ ಅವರ ಮೊದಲ ಪುಸ್ತಕ ಕತೆಡಬ್ಬಿ ಬಹಳ ಜನಪ್ರಿಯವಾಗಿದೆ. ಆ ಪುಸ್ತಕ ಕನ್ನಡ ಸಾಹಿತ್ಯ ಪ್ರೇಮಿಗಳ ಹಾಗೂ ಸಾಹಿತ್ಯಾಸಕ್ತರ ಗಮನವನ್ನು ಸೆಳೆದಿದೆ. ಚೆನ್ನಾಗಿ ಬರೆದಿದ್ದಾರೆ ಎಂದು ಓದುಗರ ರಂಜನಿಯ ಬೆನ್ನು ತಟ್ಟಿದ್ದಾರೆ. ಕನ್ನಡದ ಶಿಕ್ಷಕಿಯಾಗಿದ್ದ ಭುವಿ ಕನ್ನಡದ ಪದ ಬಳಕೆ, ಕನ್ನಡ ಭಾಷೆ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಪ್ರತಿದಿನ ಈ ಧಾರಾವಾಹಿ ಕೊನೆಯಲ್ಲಿ ಮೂರು ನಿಮಿಷಗಳ ಕಾಲ ಕನ್ನಡದ ಕೆಲ ಪದಗಳ ಅರ್ಥ ಮತ್ತು ಬಳಕೆ ಬಗ್ಗೆ ಭುವಿ ಹೇಳುವುದನ್ನು ಎಲ್ಲರೂ ತಪ್ಪದೇ ನೋಡುತ್ತಾರೆ. ಧಾರಾವಾಹಿಯಲ್ಲಿ ರಂಜನಿ ರಾಘವನ್‌ ಅವರು ತುಂಬಾ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಅದು ಧಾರಾವಾಹಿಗೆ ಮಾತ್ರವಲ್ಲದೇ, ಅವರಿಗೆ ಕನ್ನಡದ ಮೇಲೆ ಹೆಚ್ಚು ಆಸಕ್ತಿ ಇದೆ.

ಇದನ್ನೂ ಓದಿ : Siddharth Aditi Rao : ಮುಂಬೈ ಹೋಟೆಲ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸಿದ್ಧಾರ್ಥ – ಅದಿತಿ

ಇದನ್ನೂ ಓದಿ : Kerala High Court: ‘ವರಾಹ ರೂಪಂ’ ಹಾಡಿಗೆ ತಪ್ಪದ ಸಂಕಷ್ಟ: ತೈಕುಡಂ ಬ್ರಿಡ್ಜ್ ದಾವೆ ತಿರಸ್ಕರಿಸಿದ್ದ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ

ಇದನ್ನೂ ಓದಿ : K Muralidharan: ಖ್ಯಾತ ನಿರ್ಮಾಪಕ ಕೆ ಮುರಳೀಧರನ್ ಇನ್ನಿಲ್ಲ

ರಂಜನಿ ನಟನೆಯ ಬ್ಯುಸಿ ಸಮಯದಲ್ಲೂ ಪುಸ್ತಕ ಬರೆಯಲು ಸಮಯ ಮಾಡಿಕೊಂಡಿದ್ದಾರೆ. ಅವರಿಗೆ ನಟಬೆ ಜೊತೆ ಬರೆಯುವುದು ಅಂದ್ರೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಕನ್ನಡತಿ ಭುವಿ ಮೇಲೆ ಅಭಿಮಾನಿಗಳಿಗೆ ಹೆಚ್ಚು ಗೌರವ. ಏಕೆಂದರೆ ಅವರ ಒಳ್ಳೆಯ ಗುಣ ಕಾರಣವಾಗಿದೆ. ಹಾಗೆ ನಿಜ ಜೀವನದಲ್ಲಿ ಪುಸ್ತಕ ಬರೆಯುವುದು ಒಳ್ಳೆಯ ಕೆಲಸ ಎಂದಿದ್ದಾರೆ.

Kannadathi fame Ranjani Raghavan wrote the novel “Swipe Right”.

Comments are closed.