bigg boss kannada 9 : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಕೊರೊನಾ ಹಾಗೂ ಲಾಕ್ಡೌನ್ ಕಾರಣಗಳಿಂದಾಗಿ ಬಿಗ್ ಬಾಸ್ ಸೀಸನ್ 8 ಕೊಂಚ ಅಡೆತಡೆಗಳ ಮೂಲಕವೇ ಅಂತ್ಯ ಕಂಡಿತ್ತು. ಇದಾದ ಬಳಿಕ ಬಿಗ್ ಬಾಸ್ ಮಿನಿ ಸೀಸನ್ ಕೂಡ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದಾದ ಬಳಿಕ ಬಿಗ್ ಬಾಸ್ ಯಾವಾಗ ಸ್ಟಾರ್ಟ್ ಆಗುತ್ತಪ್ಪಾ ಅಂತಾ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9 ಕಾರ್ಯಕ್ರಮಕ್ಕೆ ಕಲರ್ಸ್ ಕನ್ನಡ ಸಜ್ಜಾಗುತ್ತಿದ್ದು ಪ್ರಿ ಪ್ರಾಡಕ್ಷನ್ ಕಾರ್ಯಗಳ ಕುರಿತು ಕಲರ್ಸ್ ಕನ್ನಡ ಚಾನೆಲ್ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೌದು..! ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೊಸದಾಗಿ ನಿರ್ಮಾಣವಾಗುತ್ತಿರುವ ಬಿಗ್ ಬಾಸ್ ಮನೆ ಎದುರು ಕ್ಲಿಕ್ಕಿಸಿಕೊಂಡಿರುವ ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಫೋಟೋಗೆ ನಿರ್ಮಾಣ ಹಂತದಲ್ಲಿದೆ ಎಂದು ಶೀರ್ಷಿಕೆ ನೀಡಿದ್ದಾರೆ . ಈ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗುತ್ತೆ ಎಂಬ ಎಲ್ಲಾ ವರದಿಗಳಿಗೆ ಪರಮೇಶ್ವರ್ ಗುಂಡ್ಕಲ್ ಸಾಕ್ಷ್ಯ ನೀಡಿದಂತಾಗಿದೆ.
ಕಳೆದ ಬಾರಿ ಬಿಗ್ ಬಾಸ್ ಸೀಸನ್ 8 ಮುಗಿದ ಬಳಿಕ ಅದೇ ಮನೆಗೆ ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವವರನ್ನು ಕಳುಹಿಸಿ ಒಂದು ಮಿನಿ ಸೀಸನ್ ಮಾಡಿದ್ದರು.ಆದರೆ ಈ ಬಾರಿ ಇದು ಉಲ್ಟಾ ಇರಲಿದೆ. ಆಗಸ್ಟ್ ತಿಂಗಳಲ್ಲಿ ಬಿಗ್ ಬಾಸ್ ಮಿನಿ ಸೀಸನ್ ಆರಂಭಗೊಳ್ಳಲಿದೆ. ಈ ಮಿನಿ ಸೀಸನ್ನಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ಸ್ ಹಾಗೂ ಸೆಲೆಬ್ರಿಟಿಗಳು ಇರಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮ ವೂಟ್ನಲ್ಲಿ ಪ್ರಸಾರವಾಗಲಿದೆ.
ಈ ಮಿನಿ ಸೀಸನ್ ಅಕ್ಟೋಬರ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ಅಸಲಿ ಬಿಗ್ ಬಾಸ್ ಶೋ ಕಾರ್ಯಕ್ರಮ ಆರಂಭಗೊಳ್ಳಲಿದೆ. ಎರಡೂ ಕಾರ್ಯಕ್ರಮಗಳನ್ನು ನಟ ಕಿಚ್ಚ ಸುದೀಪರೇ ನಡೆಸಿಕೊಡ್ತಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನು ಓದಿ : Actor Sudeep ವಿರುದ್ಧ ಅವಹೇಳನಕಾರಿ ಮಾತು : ಸೈಬರ್ ಕ್ರೈಂ ಮತ್ತು ಆಯುಕ್ತರಿಗೆ ಭಾಮಾ ಹರೀಶ್ ದೂರು
ಇದನ್ನೂ ಓದಿ : John Abraham Mike : ಚೊಚ್ಚಲ ಮಲಯಾಳಂ “ಮೈಕ್” ಸಿನಿಮಾದಲ್ಲಿ ಜಾನ್ಅಬ್ರಹಾಂ
bigg boss kannada 9 colors kannada business head parameshwar gundkal reveals bigg boss house is under construction