Oppo A97 5G : ಒಪ್ಪೋ ನ ಹೊಸ A97 5G ಸ್ಮಾರ್ಟ್‌ಫೋನ್‌ ಅನಾವರಣ! ಬೆಲೆ ಮತ್ತು ವಿಶೇಷತೆಗಳು ಹೀಗಿದೆ…

ಸ್ಮಾರ್ಟ್‌ಫೋನ್‌(Smarphone)ಗಳ ಜಗತ್ತಿನಲ್ಲಿ ಒಪ್ಪೋ(Oppo) ತನ್ನದೇ ಆದ ವಿಶೇಷ ಸ್ಥಾನ ಗಳಿಸಿಕೊಂಡಿದೆ. ಕ್ಯಾಮರಾದಿಂದಲೇ ಇದು ಬಹಳ ಜನಪ್ರಿಯತೆ ಗಳಿಸಿಕೊಂಡಿದೆ. ಒಪ್ಪೋ A97 5G (Oppo A97 5G ) ಯನ್ನು ಅಧಿಕೃತವಾಗಿ ಲಾಂಚ್‌ ಮಾಡಿದೆ. ಇದರ ಅನೇಕ ವಿಶೇಷತೆಗಳು ಈಗಾಗಲೇ ಬಹಿರಂಗವಾಗಿದೆ. ಪ್ರೀಮಿಯಂ ಮಿಡ್‌–ರೇಂಜ್‌ನ 5G ಸ್ಮಾರ್ಟ್‌ಫೋನ್‌ ಆಕರ್ಷಕ ವಿನ್ಯಾಸ ಹೊಂದಿದೆ.

ಒಪ್ಪೋ A97 5G (Oppo A97 5G) ನ ಸೆಲ್ಫಿ ಕ್ಯಾಮರಾವು ಹ್ಯಾಂಡ್‌ಸೆಟ್‌ ಪರದೆಯ ವಾಟರ್‌ಡ್ರಾಪ್‌ ನಾಚ್‌ ಹೊಂದಿದೆ. ಈ ಫೋನಿನ ಪರೆದೆಯು ನಾಲ್ಕು ಬದಿಗಳಲ್ಲಿ ಅತ್ಯಂತ ಕಿರದಾದ ಬೆಜೆಲ್‌ ಅನ್ನು ಹೊಂದಿದೆ. ಇದು ಹಿಂಭಾಗದಲ್ಲಿ ಆಯಾತಾಕರದ ದೊಡ್ಡ ಕ್ಯಾಮರಾ ಮಾಡ್ಯುಲ್‌, ಎರಡು ಶೂಟರ್ಗಳು ಮತ್ತು ಒಂದು LED ಫ್ಲಾಷ್‌ ಹೊಂದಿದೆ. ಇದರ ಬಲಭಾಗದಲ್ಲಿ ಇಂಗರ್‌ಪ್ರಿಂಟ್‌ ಸೆನ್ಸಾರ್‌ ಇದೆ.

ಇನ್ನು ಒಪ್ಪೋ A97 5G 6.65 ಇಂಚಿನ LCD ಡಿಸ್ಪ್ಲೇ ಒಳಗೊಂಡಿದೆ. ಡಿಸ್ಪ್ಲೇಯು 2,408 X 1,080 ಪಿಕ್ಸೆಲ್‌ ರೆಸುಲ್ಯೂಶನ್‌ ಮತ್ತು 90 Hz ಸ್ಕ್ರೀನ್‌ನ ರಿಫ್ರೆಶ್‌ ರೇಟ್‌ ನೀಡುತ್ತದೆ. ಪ್ರೀಮಿಯಂ ಮಿಡ್‌–ರೇಂಜ್‌ನ ಹ್ಯಾಂಡ್‌ಸೆಟ್‌ ಒಕ್ಟಾ–ಕೋರ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 810 ಪ್ರೊಸೆಸ್ಸರ್‌ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಇದು 12 GB RAM ಮತ್ತು 256 GB ನೇಟೀವ್‌ ಸ್ಟೊರೇಜ್‌ ಹೊಂದಿದೆ. ColorOS 12 ಸಾಫ್ಟ್‌ವೇರ್‌ ನಿಂದ ಕಾರ್ಯನಿರ್ವಹಿಸುತ್ತದೆ.

ಇನ್ನು ಕ್ಯಾಮಾರದಾ ವಿಷಯದಲ್ಲಿ ಒಪ್ಪೋ A97 5G ಯು ಹಿಂಭಾಗದ 48MP ಪ್ರೈಮರಿ ಕ್ಯಾಮರಾವು 2MP ಸೆಕೆಂಡರಿ ಸ್ನಾಪರ್‌ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಈ ಫೋನ್‌ 8MP ಮುಂಭಾಗದ ಕ್ಯಾಮರಾ ನೀಡಿದೆ. ಕನೆಕ್ಟಿವಿಟಿಗಾಗಿ 5G, ಡ್ಯುವಲ್‌ SIM ಸ್ಲಾಟ್‌ಗಳು, ಡ್ಯುವಲ್‌ ಬ್ಯಾಂಡ್‌ ವೈ–ಫೈ , ಬ್ಲೂಟೂತ್‌, A-GPS, 3.5mm ಹೆಡ್‌ಫೋನ್‌ ಸಾಕೆಟ್‌ ಮತ್ತು USB ಟೈಪ್‌–C ಚಾರ್ಜಿಂಗ್‌ ಪೋರ್ಟ್‌ ಆಯ್ಕೆಗಳನ್ನು ನೀಡಿದೆ.

ಇದರ ಬ್ಯಾಟರಿಯ ಕ್ಷಮತೆಯು 5000mAh ಮತ್ತು 33w ವೇಗದ ಚಾರ್ಜಿಂಗ್‌ ತಂತ್ರಜ್ಞಾನ ಬೆಂಬಲಿಸಲಿದೆ. ಈ ಹ್ಯಾಂಡ್‌ಸೆಟ್‌ ಡೈರಾಕ್‌–ಆಪ್ಟಿಮೈಸ್ಡ್‌ ಸೌಂಡ್‌ ಔಟ್‌ಪುಟ್‌ ನೊಂದಿಗೆ ಡ್ಯುವಲ್‌ ಸ್ಟೀರಿಯೊ ಸ್ಪೀಕರ್‌ ಹೊಂದಿದೆ.

ಬೆಲೆ ಮತ್ತು ಲಭ್ಯತೆ :

ಒಪ್ಪೋ A97 5G ಬೆಲೆಯು ಚೀನಾದಲ್ಲಿ CNY 2099 (ಅಂದಾಜು 24,730 ರೂ ) ಆಗಿದೆ. ಈ ಸ್ಮಾರ್ಟ್‌ಫೋನ್‌ ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈ ಮೊಬೈಲ್‌ ಚೀನಾದಲ್ಲಿ ಈಗಾಗಲೇ ಪ್ರೀ–ಬುಕ್ಕಿಂಗ್‌ ಆಗಿದೆ. Oppo A97 5G ಸ್ಮಾರ್ಟ್‌ಫೋನ್‌ ಭಾರತ ಸೇರಿದಂತೆ ಉಳಿದ ಜಾಗತಿಕ ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಿರುತ್ತದೆ ಎಂದು ಇನ್ನೂ ತಿಳಿದುಬಂದಿಲ್ಲ. ಆದರೆ ಜುಲೈ 18ರಂದು ನಡೆಯುವಲಿರುವ ಸಮಾರಂಭದಲ್ಲಿ ರೆನೋ 8 ಸಿರೀಸ್‌ ನ ಸಾಧನಗಳನ್ನು ಭಾರತದಲ್ಲಿ ಪ್ರಾರಂಭಿಸಲು ಬ್ರ್ಯಾಂಡ್‌ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Samsung Galaxy S23 : ಹೊಸ ವಿಶೇಷತೆಯೊಂದಿಗೆ ಬರಲಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸೀರಿಸ್‌ ! 200MP ಕ್ಯಾಮರಾ ಮತ್ತು ಸ್ನಾಪ್‌ಡ್ರಾಗನ್‌ 8 ಜೆನ್‌ 2 SoC ಇದರ ವಿಶೇಷತೆಯಾಗಲಿದೆಯೇ?

ಇದನ್ನೂ ಓದಿ :Insurance Payment Restrictions: ವಾಹನ ಚಾಲನೆಯಲ್ಲಿ ಅಪಘಾತ ಸಂಭವಿಸಿದರೆ ವಿಮಾ ಪಾವತಿ ನಿಬಂಧನೆಗಳು

(Oppo A97 5G launched know the price and specification)

Comments are closed.