(Bigg Boss Kannada OTT Season)ಕನ್ನಡ ಓಟಿಟಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಗ್‌ಬಾಸ್ ಕಾರ್ಯಕ್ರವನ್ನು ಓಟಿಟಿಯಲ್ಲಿ ಪ್ರಸಾರ ಮಾಡಲಾಗಿತ್ತು. ಕನ್ನಡದ ಓಟಿಟಿ ಬಿಗ್‌ಬಾಸ್ ಕಾರ್ಯಕ್ರಮ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮೊದಲ ಬಿಗ್‌ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಕುಡ್ಲದ ಹುಡುಗ (Roopesh Shetty)ರೂಪೇಶ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮೂಲಕ ರೂಪೇಶ್ ಶೆಟ್ಟಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
(Bigg Boss Kannada OTT Season)ಕಲರ್ಸ್ ಸೂಪರ್ ವಾಹಿನಿಯ ಟ್ವಿಟರ್ ಪೆಜ್ ನಲ್ಲಿ ಕಿಚ್ಚ ಸುದೀಪ್ (Roopesh Shetty)ರೂಪೇಶ್ ಶೆಟ್ಟಿ ಅವರಿಗೆ 5ಲಕ್ಷ ಚೆಕ್ ಮತ್ತು ಟ್ರೋಫಿ ಹಸ್ತಾಂತರಿಸುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ರೂಪೇಶ್ ಶೆಟ್ಟಿ (Roopesh Shetty)ಬಿಗ್ ಬಾಸ್ ಓಟಿಟಿ ಶೋನ ಟಾಪರ್ ಎಂದು ಸಂಭ್ರಮವನ್ನು ಆಚರಿಸಲು ಪ್ರಾರಂಭಿಸಿದ್ದಾರೆ. ಇನ್ನು ಇವತ್ತಿನ ಬಿಗ್ ಬಾಸ್ ಓಟಿಟಿ ಗ್ರಾಂಡ್ ಫಿನಾಲೆಯ ಎಪಿಸೋಡ್ ಓಟಿಟಿಯಲ್ಲಿ ಪ್ರಸಾರವಾಗಬೇಕಷ್ಟೇ.
ಜನರ ಮತದಿಂದ ರೂಪೇಶ್ಗೆ ಕ್ಯಾಶ್ ಪ್ರೈಜ್! Happening Now>https://t.co/Xu9coYZ53L | BIGG BOSS OTT FINALE ಸ್ಟ್ರೀಮಿಂಗ್#BiggBossOTT #BiggBossOTTKannada #BBOTTKOnVoot @kichchasudeepa @vootselect @endemolshineind @vimalelaichi pic.twitter.com/xmyyJAEQNS
— Colors Super (@ColorsSuper) September 16, 2022
ಕಾರ್ಯಕ್ರಮದ ಮೂಲಕ ಹಲವರ ಮನಸ್ಸನ್ನು ಗೆದ್ದಿರುವ ರೂಪೇಶ್ ಶೆಟ್ಟಿ (Roopesh Shetty)ಬಿಗ್ ಬಾಸ್ ಮನೆಯಲ್ಲೂ ಕೂಡ ಎಲ್ಲರೊಂದಿಗೂ ಆತ್ಮೀಯತೆಯನ್ನು ಹೊಂದಿದ್ದಾರೆ. ಈ ಕಾರಣಗಳಿಂದಾಗಿ ಹೆಚ್ಚು ವೋಟ್ ಪಡೆಯುವ ಮೂಲಕ ಬಿಗ್ ಬಾಸ್ ಟಾಪರ್ ಆಗಿ ಟಿವಿ ಶೋಗೆ ನೇರ ಸೇರ್ಪಡೆಯನ್ನು ಪಡೆದಿದ್ದಾರೆ.
ಗ್ರ್ಯಾಂಡ್ ಫಿನಾಲೆ ವಾರದವರೆಗೂ ಜಶ್ವಂತ್ ಬೋಪಣ್ಣ, ಜಯಶ್ರೀ ಆರಾಧ್ಯ, ಸೋನು ಶ್ರೀನಿವಾಸ್ ಗೌಡ, ಸೋಮಣ್ಣ ಮಾಚಿವಾಡ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಅವರು ಸಖತ್ ಪೈಪೋಟಿಯನ್ನು ಕೊಟ್ಟಿದ್ದರು. ಇದರಲ್ಲಿ ಜನರಿಂದ ಕಡಿಮೆ ವೋಟ್‌ನ್ನು ಪಡೆದ ಕಾರಣದಿಂದಾಗಿ ಸೋಮಣ್ಣ ಮಾಚಿವಾಡ, ಸೋನು ಶ್ರೀನಿವಾಸ ಗೌಡ, ಜಯಶ್ರೀ ಆರಾಧ್ಯ ಮತ್ತು ಜಶ್ವಂತ್ ಬೋಪಣ್ಣ ರವರ ಬಿಗ್ ಬಾಸ್ ಪಯಣವನ್ನು ಮುಗಿಸಿದ್ದಾರೆ. ಅಂತಿಮವಾಗಿ ಉಳಿಯುವ ನಾಲ್ವರು ಸ್ಪರ್ಧಿಗಳನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ಬಾಸ್‌ಗೆ ಕಳುಹಿಸಲಾಗುತ್ತದೆ.
ಇದನ್ನೂ ಓದಿ : ಬಿಗ್‌ಬಾಸ್ ಒಟಿಟಿ ಸೀಸನ್ 1ರ ಟಾಪರ್ ಆಗಿ ಹೊರಹೊಮ್ಮಿದ ಕರಾವಳಿ ಕುವರ ರೂಪೇಶ್ ಶೆಟ್ಟಿ
ಇದನ್ನೂ ಓದಿ : ವಿಭಿನ್ನ ಶೀರ್ಷಿಕೆ ‘ಮಂಕು ಭಾಯ್ ಫಾಕ್ಸಿ ರಾಣಿ’ ಬಿಡುಗಡೆಗೆ ರೆಡಿ…ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಚೊಚ್ಚಲ ಸಿನಿಮಾ ಕನಸು ಇದು
ಇದನ್ನೂ ಓದಿ : ‘ಗಜರಾಮ’ನಾದ ಮ್ಯಾಸಿವ್ ಸ್ಟಾರ್ ರಾಜವರ್ಧನ್…ಡಿಂಗ್ರಿ ನಾಗರಾಜ್ ಪುತ್ರನ ಹೊಸ ಕನಸು ಇದು
ಇದನ್ನೂ ಓದಿ : ವಿದ್ಯಾರ್ಥಿ ದಿನಗಳಲ್ಲಿ ಮೈಸೂರು ದಸರಾದಲ್ಲಿ ಈ ಕೆಲಸ ಮಾಡ್ತಾ ಇದ್ರಂತೆ ಡಾಲಿ ಧನಂಜಯ
ಕಲರ್ಸ್ ಕನ್ನಡ ವಾಹಿನಿಯಲ್ಲಿ”ಬಿಗ್ ಬಾಸ್ ಕನ್ನಡ ಸೀಸನ್ 9″ರ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಅದರಲ್ಲಿ ಹಿಂದಿನ ಸೀಸನ್‌ನಲ್ಲಿ ಭಾಗವಹಿಸಿದ ಸ್ಪರ್ಧಿಗಳಾದ ದೀಪಿಕಾ ದಾಸ್, ಅನುಪಮಾ ಗೌಡ ಹಾಗೂ ಪ್ರಶಾಂತ್ ಸಂಬರಗಿ ಸೇರಿದಂತೆ ಇನ್ನೂ ಕೆಲವರು ಭಾಗವಹಿಸುವುದು ನಿಖರವಾಗಿದೆ. ಬಿಗ್ ಬಾಸ್ ಫ್ಯಾನ್ಸ್‌ಗಳು ಇದೇ ಸೆಪ್ಟೆಂಬರ್ 24ರಿಂದ ಶುರುವಾಗಲಿರುವ ಬಿಗ್‌ಬಾಸ್ ಟಿವಿ ಶೋಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಎಂದಿನಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರೇ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
Bigg Boss Kannada OTT Season 1 Winner Rupesh Shetty: Fans Celebrate