Badminton Tournament:ಬ್ರಹ್ಮಾವರ ತಾಲ್ಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಬ್ರಹ್ಮಾವರ : (Badminton Tournament)ಬ್ರಹ್ಮಾವರ ತಾಲೂಕು ಮಟ್ಟದ ಬಾಲ್‌ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿಚೇತನ ಪ್ರೌಢ ಶಾಲೆ ಪ್ರಥಮ , ಎಸ್. ವಿ. ವಿ.ಎನ್. ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ದ್ವಿತೀಯ ಪಡೆದುಕೊಂಡಿದೆ. ಇನ್ನು ಬಾಲಕಿಯರ ವಿಭಾಗದಲ್ಲಿಎಸ್. ವಿ. ವಿ. ಎನ್. ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಪ್ರಥಮ ಹಾಗೂ ಚೇತನ ಪ್ರೌಢ ಶಾಲೆ ಹಂಗಾರಕಟ್ಟೆಯು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

(Badminton Tournament)ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬ್ರಹ್ಮಾವರ ಮತ್ತು ಶ್ರೀ ವಿಧ್ಯೇಶ ವಿದ್ಯಾಮಾನ್ಯ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರ್ಕೂರು ಜಂಟಿ ಆಶ್ರಯ ದಲ್ಲಿ ತಾಲ್ಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಎಸ್. ವಿ. ವಿ . ಎನ್. ಆಂಗ್ಲ ಮಾಧ್ಯಮ ಶಾಲೆ ಹೇರಾಡಿಯ ಸಂಚಾಲಕ ಹಾಗೂ ಶಿಕ್ಷಣ ತಜ್ಞ ಡಾ. ಬಿ.ಎಮ್. ಸೋಮಯಾಜಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕ್ರೀಡೆ ಮನಸ್ಸಿಗೆ ನೆಮ್ಮದಿ, ಹಾಗೂ ದೇಹಕ್ಕೆ ಆರೋಗ್ಯ ನೀಡುತ್ತದೆ ಎಂದರು. ಬಾರ್ಕೂರು ವಿದ್ಯಾಭಿವೃದ್ದಿನಿ ಸಂಘ (ರಿ ) ಬಾರಕೂರು ಇದರ ಅಧ್ಯಕ್ಷರಾದ ಶಾಂತಾರಾಮ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಾರಕೂರು ವಿದ್ಯಾಭಿವೃದ್ದಿನಿ ಸಂಘ (ರಿ )ಬಾರ್ಕೂರಿನ ಉಪಾಧ್ಯಕ್ಷರಾಗಿರುವ ಶೇಡಿ ಕೋಡ್ಲು ವಿಠ್ಠಲಶೆಟ್ಟಿ, ಶಾಲಾ ಮುಖ್ಯೋ ಪಾಧ್ಯಾಯಿನಿ ಪ್ರೀತಿ ರೇಖಾ, ಬ್ರಹ್ಮಾವರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿರುವ ಪದ್ಮಾವತಿ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿಯಾಗಿರುವ ವಿಜಯಕುಮಾರ್ ಶೆಟ್ಟಿ, ಗ್ರೇಡ್ -1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ದಿನಕರ ಶೆಟ್ಟಿ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘ ದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಶೆಟ್ಟಿ, ಬಾರಕೂರು ಕ್ಲಸ್ಟರ್ ನ ಸಿ. ಆರ್. ಪಿ ಯಾಗಿರುವ ಪುಷ್ಪಾವತಿ ರವರು ಉಪಸ್ಥಿತರಿದ್ದರು.

ಶಾಲಾ ವತಿಯಿಂದ ಅತ್ಯುತ್ತಮ ಸಿ. ಆರ್. ಪಿ ಪ್ರಶಸ್ತಿ ಪಡೆದ ಬಾರಕೂರು ಕ್ಲಸ್ಟರ್ ನ ಸಿ.ಆರ್.ಪಿ ಪುಷ್ಪಾವತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿ ಸುಬ್ರಮಣ್ಯ ಎಮ್.ಪೂಜಾರಿ ಮತ್ತು ಕುಮಾರ್ ನಂಬಿಯಾರ್ ಅವರು ಬಹುಮಾನ ವಿತರಿಸಿದರು.

ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಾಟ್ಸಪ್ ಅಕೌಂಟ್ ಹ್ಯಾಕ್ ಮಾಡಿದ ಸೈಬರ್ ಕ್ರಿಮಿನಲ್ಸ್

ಇದನ್ನೂ ಓದಿ : ಮೊಬೈಲ್ ಪೋನ್ ಬದಲು ಪಾರ್ಸೆಲ್ ನಲ್ಲಿ ಬಂತು ಹಳಸಿದ ತಿಂಡಿಯ ಪೊಟ್ಟಣ

ಸುಜಾತ ಎಲ್ ರವರು ಸ್ವಾಗತಿಸಿದ್ದು, ಶಿಕ್ಷಕಿ ಲಿಖಿತಾ ಕೊಠಾರಿ ಅವರು ಪರಿಚಯಿಸಿದ್ದರು. ಶಿಕ್ಷಕರಾದ ನಾಗೇಂದ್ರ ಆಚಾರ್ ಮತ್ತು ಪೂರ್ಣೇಶ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ದೈಹಿಕ ಶಿಕ್ಷಕಿ ಜ್ಯೋತಿ ಶೆಟ್ಟಿ ವಂದಿಸಿದರು. ಶಾಲೆಯ ಶಿಕ್ಷಕ – ಶಿಕ್ಷಕೇತರರು, ಶಾಲಾ ವಿದ್ಯಾರ್ಥಿ ಗಳು ಹಾಗೂ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಹಕರಿಸಿದರು.

Brahmavar Taluk Level Ball Badminton Tournament

Comments are closed.