ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ನಡೆಯುತ್ತಿದೆ. ಬಿಗ್‌ಬಾಸ್ ಎಲ್ಲಾ ಲೆಕ್ಕಾಚಾರಗಳನ್ನೂ ತಲೆ ಕೆಳಗೆ ಮಾಡಿದೆ. ಇದೀಗ ಬಿಗ್‌ಬಾಸ್ ಮನೆಯಿಂದ ಮೂರನೇ ಸ್ಪರ್ಧಿಯಾಗಿ ದಿವ್ಯ ಉರುಡುಗ ಹೊರಬಂದಿದ್ದಾರೆ. ಅಂತಿಮವಾಗಿ ಕೆ.ಪಿ.ಅರವಿಂದ್ ಹಾಗೂ ಮಂಜು ಪಾವಗಡ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ.

ಬಿಗ್‌ಬಾಸ್ ಆರಂಭದಿಂದಲೂ ಮುಗ್ದತೆ, ನಗುವಿನಿಂದಲೇ ಸದ್ದು ಮಾಡಿದ್ದ ದಿವ್ಯ ಉರುಡುಗ ಇದೀಗ ಬಿಗ್‌ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಕೆ.ಪಿ.ಅರವಿಂದ್ ಮೂರನೇ ಸ್ಥಾನ ಪಡೆಯುತ್ತಾರೆ ಅಂತಾ ಹೇಳಲಾಗಿತ್ತು. ಆದ್ರೆ ಎಲಿಮಿನೇಷನ್‌ನಲ್ಲಿ ಮಂಜುಪಾವಗಡ ಸೇಫ್ ಆಗಿದ್ರು. ದಿವ್ಯ ಹಾಗೂ ಅರವಿಂದ ಅವರ ನಡುವಿನ ಸ್ಪರ್ಧೆಯಲ್ಲಿ ಅಂತಿಮವಾಗಿ ದಿವ್ಯ ಹೊರ ನಡೆದಿದ್ದಾರೆ.

ಫೈನಲ್ ಹಂತ ನಿಜಕ್ಕೂ ಕುತೂಹಲವನ್ನು ಮೂಡಿಸುತ್ತಿದೆ. ಕೆ.ಪಿ.ಅರವಿಂದ್ ಹಾಗೂ ಮಂಜು ಪಾವಗಡ ಇಬ್ಬರಿಗೂ ನಲವತ್ತು ಲಕ್ಷಕ್ಕೂ ಅಧಿಕ ಮತಗಳನ್ನು ವೀಕ್ಷಕರು ನೀಡಿದ್ದಾರೆ. ಇಡೀ ಜರ್ನಿಯುದ್ದಕ್ಕೂ ಇಬ್ಬರ ಪದರ್ಶನದಿಂದಾಗಿ ಈ ಬಾರಿಯ ಬಿಗ್‌ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.