MLA S. A. Ramadas : ಶಾಸಕ ರಾಮದಾಸ್‌ಗೆ ಉರುಳಾಗುತ್ತಾ ಭೂ ಹಗರಣ : ಕ್ರಿಮಿನಲ್‌ ಕೇಸ್‌ ದಾಖಲಿಸಲು ಸೂಚಿಸಿದ ನ್ಯಾಯಾಲಯ

ಮೈಸೂರು : ರಾಜ್ಯದ ನೂತನ ಸಂಪುಟದಲ್ಲಿ ಸಚಿವ ಸ್ಥಾನದಿಂದ ವಂಚತರಾಗಿದ್ದ ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್‌ ಅವರಿಗೆ ಭೂ ಹಗರಣ ಉರುಳಾಗುವ ಸಾಧ್ಯತೆಯಿದೆ. ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ರಾಮದಾಸ್‌ ಅವರ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಸೂಚಿಸಿದೆ.

ಶಾಸಕ ರಾಮದಾಸ್‌ ಅವರ ವಿರುದ್ದ 1994 ರಲ್ಲಿ ನಡೆದ ಭೂ ಹಗರಣದ ಆರೋಪ ಕೇಳಿಬಂದಿತ್ತು. ಮೈಸೂರಿನ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ತ.ಮ.ವಿಜಯಭಾಸ್ಕರ್ ಅವರು ಭೂಹಗರಣಕ್ಕೆ ಸಂಬಂಧಿಸಿದಂತೆ ವರದಿಯೊಂದನ್ನು ಸಲ್ಲಿಸಿದ್ದರು. ಹಿನ್ನೆಲೆಯಲ್ಲಿ 2008 ರಲ್ಲಿ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದರು. ಅಲ್ಲದೇ ಮೈಸೂರಿನ ನ್ಯಾಯಾಲಯ ಅಂಗೀಕರಿಸಿತ್ತು.

ಆದರೆ ಪೊಲೀಸರ ಕ್ರಮವನ್ನು ಖಂಡಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಮೈಸೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿದರು. ಆದರೆ ರಾಮದಾಸ್‌ ಪ್ರಸ್ತುತ ಶಾಸಕರಾಗಿರುವುದರಿಂದ ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ಸೂಚನೆ ನೀಡಿತ್ತು. ಈ ಕುರಿತು ರಾಮದಾಸ್‌ ಹೈಕೋರ್ಟ್‌ ಮೆಟ್ಟಿಲೇರಿ ಪ್ರಕರಣಕ್ಕೆ ತಡೆಯಾಜ್ಞೆಯನ್ನು ತಂದಿದ್ದರು.

ಆದ್ರೀಗ ಹೈಕೋರ್ಟ್‌ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಅಲ್ಲದೇ ರಾಮದಾಸ್‌ ಅವರ ವಿರುದ್ದ ಸೆಕ್ಷನ್ 420 ಮತ್ತು 468 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸೂಚಿಸಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಬೇಕಾಗಿದೆ. ಆದರೆ ರಾಮದಾಸ್‌ ಮತ್ತೆ ನ್ಯಾಯಾಲಯದ ಮೊರೆ ಹೋಗ್ತಾರಾ, ಇಲ್ಲಾ ಅರೆಸ್ಟ್‌ ಆಗ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಕೊರೊನಾ ಜನ್ಮದಾತ ಚೀನಾದಲ್ಲಿ ಹೆಚ್ಚಿದ ಸೋಂಕು : ಡೆಲ್ಟಾ ಆರ್ಭಟಕ್ಕೆ ತತ್ತರಿಸಿದೆ ಕೆಂಪು ರಾಷ್ಟ್ರ

( Land scam to MLA Ramadas: Court to file criminal case)

Comments are closed.