ಮುಂಬೈ : ಕೊಲೊನ್ ಸೋಂಕಿನಿಂದ ಬಾಲಿವುಟ್ ನಟ ಇರ್ಫಾನ್ ಖಾನ್ (52 ವರ್ಷ) ವಿಧಿವಶರಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಇರ್ಫಾನ್ ಖಾನ್ ಇಂದು ಮೃತಪಟ್ಟಿದ್ದಾರೆ.

ಇರ್ಫಾನ್ ಖಾನ್ ತಾಯಿ ಕಳೆದ 5 ದಿನಗಳ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ತಾಯಿಯ ಅಂತ್ಯಕ್ರೀಯೆಯಲ್ಲಿ ಪಾಲ್ಗೊಂಡಿರಲಿಲ್ಲ, ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತಿಮ ದರ್ಶನ ಪಡೆದಿದ್ದರು.

2018ರಲ್ಲಿ ನ್ಯೂರೋ ಎಂಡೋಕ್ರೈನ್ ಗಡ್ಡೆ ಇರೋದು ತಿಳಿದಿತ್ತು. ಹೀಗಾಗಿ ವಿದೇಶದಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು.

ಆದ್ರೀಗ ಕ್ಯಾನ್ಸರ್ ನಿಂದಾಗಿ ಬಳಲುತ್ತಿದ್ದ ಅವರು ಕೊಲೊನಾ ಇನ್ ಫೆಕ್ಷನ್ ನಿಂದಾಗಿ ಇರ್ಫಾನ್ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಬಾಲಿವುಡ್ ನ ಪೀಕು, ತಲ್ವಾರ್, ಗೂಂಡೆ, ಹೈದರ್, ಲಂಚ್ ಬಾಕ್ಸ್, ಅಂಗ್ರೇಜಿ ಮೀಡಿಯಂ. ಹಾಲಿವುಡ್ ನ ಲೈಫ್ ಆಫ್ ಪೈ, ಸ್ಲಂ ಡಾಗ್ ಮಿಲೇನಿಯರ್, ದಿ ವಾರಿಯರ್, ಜುರಾಸಿಕ್ ವರ್ಲ್ಡ್, ಡಾರ್ಜಲಿಂಗ್ ಅನ್ ಲಿಮಿಡೆಟ್, ನ್ಯೂಯಾರ್ಕ್ ಐಲವ್ ಯು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಇರ್ಫಾನ್ ಖಾನ್ ಇಂದು ಅನಾರೋಗ್ಯಕ್ಕೆ ಬಲಿಯಾಗಿದ್ದಾರೆ.