ಬಾಲಿವುಡ್ ನಟಿಯರಿಗೂ ಯೋಗಕ್ಕೂ ಎಲ್ಲಿಲ್ಲದ ನಂಟು. ಅದೇಷ್ಟೇ ಜಿಮ್, ಏರೋಬಿಕ್ಸ್ ಅಂತ ಓಡಾಡಿದ್ರೂ ಒತ್ತಡ ಮ್ಯಾನೇಜ್ ಮಾಡೋಕಾದರೂ ನಟಿಯರು ಯೋಗದ ಮೊರೆ ಹೋಗ್ತಾರೆ. ಇದಕ್ಕೆ ಬಾಲಿವುಡ್ ನ ಧಡಕ್ ಸುಂದರಿ ಜಾಹ್ನವಿ ಕಪೂರ್ (jhanvi kapoor special photoshoot ) ಕೂಡ ಹೊರತಲ್ಲ. ಮೈಯಲ್ಲಿ ಒಂದು ಮುಷ್ಠಿ ಮಾಂಸವೂ ಹೆಚ್ಚಿಲ್ಲದಷ್ಟು ಅಚ್ಚುಕಟ್ಟಾದ ದೇಹಸಿರಿ ಹೊಂದಿದ್ದರೂ ನಟಿ ಜಾಹ್ನವಿ ಕಪೂರ್ ಯೋಗ ಮಾಡೋದನ್ನು ಬಿಡೋದಿಲ್ವಂತೆ. ಇಷ್ಟಕ್ಕೂ ಜಾಹ್ನವಿ ಯೋಗ ಮಾಡೋ ಪೋಟೋಗಳು ಯಾವ ಮಾದಕ ಪೋಟೋ ಶೂಟ್ ಗೂ ಕಡಿಮೆ ಇಲ್ಲ ಅನ್ನೋದು ನೆಟ್ಟಿಗರ ಅಂಬೋಣ.
ಕಲಾರಸಿಕರ ದೇವತೆಯಂತಿದ್ದ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿ ಈ ಜಾಹ್ನವಿ ಕಪೂರ್. ತಾಯಿಯನ್ನು ಮೀರಿಸುವಂತೆ ಸೌಂದರ್ಯದ ಗಣಿಯಾಗಿರೋ ಜಾಹ್ನವಿ ಸದಾ ಹಾಟ್ ಹಾಟ್ ಪೋಟೋ ಶೂಟ್ ಹಾಗೂ ಬೋಲ್ಡ್ ಬಿಕನಿ ಪೋಟೋಗಳಿಂದಲೇ ಗಮನ ಸೆಳೆದವರು. ಸದಾ ಒಂದಿಲ್ಲೊಂದು ಸಮುದ್ರ ತೀರಕ್ಕೆ ಟ್ರಿಪ್ ಹೋಗೋ ಜಾಹ್ನವಿ ಅಲ್ಲಿ ಬಿಕನಿ ತೊಟ್ಟು ಮೈಚಳಿ ಬಿಟ್ಟು ಪೋಸ್ ಕೊಟ್ಟು ಪೋಟೋಶೂಟ್ ಮಾಡಿಸುತ್ತಾರೆ. ಮಾತ್ರವಲ್ಲ ಆ ಪೋಟೋವನ್ನು ಅಭಿಮಾನಿಗಳಿಗಾಗಿ ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡುತ್ತಾರೆ.
ಇತ್ತೀಚಿಗಷ್ಟೇ ನಟಿ ಜಾಹ್ನವಿ ಕಪೂರ್ ಕೊರೋನಾ ಸೋಂಕಿಗೆ ತುತ್ತಾಗಿದ್ದರು.ನಟಿ ಜಾಹ್ನವಿ ಮಾತ್ರವಲ್ಲ ಸಹೋದರಿ ಖುಷಿಗೂ ಕೊರೋನಾ ಕಾಣಿಸಿಕೊಂಡಿತ್ತು. ಕೊರೋನಾದಿಂದ ಚೇತರಿಸಿಕೊಂಡ ಮೇಲೆ ಜಾಹ್ನವಿ ಕಪೂರ್ ಮನೆಯಲ್ಲೇ ಸಖತ್ ಯೋಗಾಭ್ಯಾಸ ಮಾಡಿದ್ದಾರೆ. ಡಿಪ್ ನೆಕ್ ಹಾಫ್ ಕರ್ವ್ ಟೀ ಶರ್ಟ್ ಹಾಗೂ ನೈಟ್ ಪ್ಯಾಂಟ್ ನಲ್ಲಿ ಜಾಹ್ನವಿ ನಡೆಸಿರುವ ಯೋಗಾಭ್ಯಾಸದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಯೋಗಾಭ್ಯಾಸದ ವೇಳೆ ಜಾಹ್ನವಿ ಮಾದಕಮೈಮಾಟವೇ ಹೈಲೈಟ್ ಆಗಿದ್ದು ಅಭಿಮಾನಿಗಳು ಜಾಹ್ನವಿ ಪೋಟೋ ನೋಡಿ ವಾವ್ ಅಂತಿದ್ದಾರೆ. 24 ವರ್ಷದ ಜಾಹ್ನವಿ ಕಪೂರ್ ಧಡಕ್ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು, ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.
ತಮ್ಮ ಮದುವೆ ಬಗ್ಗೆ ನೊರೆಂಟು ಕನಸು ಕಂಡು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿರೋ ಜಾಹ್ನವಿ, ಇಟಲಿಯ ಐಲ್ಯಾಂಡ್ ನಲ್ಲಿ ಬ್ಯಾಚುಲರ್ ಪಾರ್ಟಿ ಮಾಡ್ಕೋತಾರಂತೆ. ಬಳಿಕ ಚೈನೈನ ತಮ್ಮ ಹಿರಿಯರ ಮನೆಯಲ್ಲಿ ಜಾಹ್ನವಿ ಸಂಪ್ರದಾಯದಂತೆ ಮೆಹೆಂದಿ ಶಾಸ್ತ್ರ ಹಾಗೂ ತಿರುಪತಿಯಲ್ಲಿ ಮದುವೆ ಮಾಡ್ಕೋತಾರಂತೆ. ಒಟ್ಟಿನಲ್ಲಿ ಜಾಹ್ನವಿ ಕಪೂರ್ ಯೋಗಾ ಅಭಿಮಾನಿಗಳಿಗೆ ವೈಭೋಗದ ದೃಶ್ಯ ತೋರಿಸಿದಂತೂ ಸತ್ಯ.
ಇದನ್ನೂ ಓದಿ : ನಟಿ ಅಮೃತಾ ನಾಯ್ಡು ಬಾಳಲ್ಲಿಇದೆಂತಾ ದುರಂತ : 2 ನೇ ಮಗು ಸಮನ್ವಿಯನ್ನು ಕಳೆದುಕೊಂಡ ಕಿರುತೆರೆ ನಟಿ
ಇದನ್ನೂ ಓದಿ : ಲಾಲಿ ಹಾಡಲು ಸಜ್ಜಾದ್ರು ಚೆಲುವಿನ ಚಿತ್ತಾರದ ಬೆಡಗಿ : ನಟಿ ಅಮೂಲ್ಯ ಬೇಬಿ ಬಂಪ್ ಪೋಟೋಸ್ ವೈರಲ್
(jhanvi kapoor special photoshoot)