Corona blast in schools : ರಾಜ್ಯದ ಶಾಲೆಗಳಲ್ಲಿ ಕೊರೊನಾ ಸ್ಪೋಟ : ಒಂದೇ ದಿನ 850 ಮಕ್ಕಳಿಗೆ ಸೋಂಕು, ಉಡುಪಿ, ಹಾಸನದಲ್ಲಿ ಆತಂಕ

ಬೆಂಗಳೂರು : ಕರ್ನಾಟಕದಲ್ಲಿ ಶಾಲೆಗಳಲ್ಲಿ ಕೊರೊನಾ ಸೋಂಕು (Corona blast in schools) ಸ್ಪೋಟಗೊಂಡಿದೆ. ಒಂದೇ ದಿನ ರಾಜ್ಯದಲ್ಲಿ 850 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅದ್ರಲ್ಲೂ ಹಾಸನದಲ್ಲಿ 198 ಹಾಗೂ ಉಡುಪಿಯಲ್ಲಿ 139 ಮಕ್ಕಳಿಗೆ ಸೋಂಕು ಒಕ್ಕರಿಸಿದ್ದು ಆತಂಕಕ್ಕೆ ಕಾರಣವಾಗಿದ್ದು, ಶಾಲೆಗಳೇ ಕೊರೊನಾ ಹಾಟ್‌ ಸ್ಪಾಟ್‌ ಮಾರ್ಪಟ್ಟಿವೆ.

ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಗೆ ಕರ್ನಾಟಕ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ನಿತ್ಯವೂ ಇಪತ್ತೈದು ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲಾಗುತ್ತಿದೆ. ಅದ್ರಲ್ಲೂ ಮೊದಲ ಹಾಗೂ ಎರಡನೇ ಅಲೆಯಲ್ಲಿ ಶಾಲೆಗಳು ಬಂದ್‌ ಆಗಿದ್ರೆ, ಮೂರನೇ ಅಲೆಯಲ್ಲಿ ಶಾಲೆಗಳನ್ನು ತೆರೆದಿರುವುದು ಕೊರೊನಾ ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ನಿನ್ನೆ ಒಂದೇ ಬರೋಬ್ಬರಿ 850ಕ್ಕೂ ಅಧಿಕ ಮಕ್ಕಳಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ 10 ದಿನಗಳ ಅವಧಿಯಲ್ಲಿ ಬರೋಬ್ಬರಿ 2319 ಮಕ್ಕಳು ಕೊರೊನಾ ಸೋಂಕು ದೃಢಪಟ್ಟಿದೆ. ಅದ್ರಲ್ಲೂ ಹಾಸನ, ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಆದ್ರೆ ಶಾಲೆಗಳಲ್ಲಿ ನಿರ್ಲಕ್ಷ್ಯ ವಹಿಸುತ್ತಿರೋದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಲೆಗಳಿಗ ಈಗಾಗಲೇ ಜನವರಿ ಅಂತ್ಯದ ವರೆಗೂ ರಜೆಯನ್ನು ಘೋಷಿಸಲಾಗಿದೆ. ಉಳಿದಂತೆ ಮೈಸೂರು, ಮಂಡ್ಯ, ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿಯೂ ಶಾಲೆಗಳನ್ನು ಈಗಾಗಲೇ ಬಂದ್‌ ಮಾಡಲಾಗಿದೆ. ಆದರೆ ಉಡುಪಿ, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಮಕ್ಕಳಿಗೆ ಸೋಂಕು ಹೆಚ್ಚುತ್ತಿದ್ದರೂ ಕೂಡ ಜಿಲ್ಲಾಡಳಿತ ಮಕ್ಕಳಿಗೆ ರಜೆ ನೀಡುವ ಕಾರ್ಯವನ್ನು ಮಾಡಿಲ್ಲ.

ಶಾಲೆ ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಅನ್ನುವ ಹೇಳಿಕೆಯನ್ನು ಜಿಲ್ಲಾಡಳಿತ, ಶಿಕ್ಷಣ ಸಚಿವರು ನೀಡುತ್ತಲೇ ಇದ್ದಾರೆ. ಆದರೆ ಶಾಲೆಗಳಲ್ಲಿ ಕೊರೊನಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆಯಾಗದೇ ಇದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇನ್ನು ಶಾಲೆಗಳಲ್ಲಿನ ಮಕ್ಕಳಿಗೆ, ಶಿಕ್ಷಕರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬರುತ್ತಿದ್ದರೂ ಕೂಡ ಬಹುತೇಕ ಮಕ್ಕಳನ್ನು ಇದುವರೆಗೂ ಕೊರೊನಾ ಟೆಸ್ಟ್‌ಗೆ ಒಳಪಡಿಸಿಲ್ಲ. ಒಂದೊಮ್ಮೆ ರಾಜ್ಯದಲ್ಲಿನ ಎಲ್ಲಾ ಶಾಲೆಗಳಲ್ಲಿಯೂ ಕೊರೊನಾ ಟೆಸ್ಟ್‌ ನಡೆಸಿದ್ದೆ ಆದ್ರೆ ಸೋಂಕಿತರ ಸಂಖ್ಯೆಯಲ್ಲಿ ಮಹಾಸ್ಪೋಟವಾಗೋದು ಖಚಿತ.

ದಿನೇ ದಿನೇ ಮಕ್ಕಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿಗೆ ಒಳಪಡುತ್ತಿದ್ದಾರೆ. ಅದ್ರಲ್ಲೂ ಎಲ್‌ಕೆಜಿ, ಯುಕೆಜಿ ಮಕ್ಕಳನ್ನೂ ಇಡೀ ದಿನ ಶಾಲೆಯಲ್ಲಿ ಕೂರಿಸುವ ಮೂಲಕ ಶಿಕ್ಷಣ ಇಲಾಖೆ ಹಾಗೂ ಸಚಿವರ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಅನ್ನೋ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಮಕ್ಕಳಿಗೆ ಕೊರೊನಾ ಸೋಂಕಿನಿಂದ ಅಪಾಯವಾದ್ರೆ ಯಾರು ಹೊಣೆ ಅಂತಾನೂ ಸಚಿವರನ್ನು ಸಾಮಾಜಿಕ ಜಾಲತಾಣದಲ್ಲಿ ಪೋಷಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದ್ರೆ ಸಚಿವರು ಮಾತ್ರ ಯಾವುದೇ ಕಾರಣಕ್ಕೂ ಶಾಲೆ ಬಂದ್‌ ಮಾಡುವುದಿಲ್ಲ ಅನ್ನೋ ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ.

ಇದನ್ನೂ ಓದಿ : ಅತಿಥಿ ಉಪನ್ಯಾಸಕರಿಗೆ ವೇತನ ಏರಿಕೆ: ಸಂಕ್ರಾಂತಿಯಂದೇ ಸಿಹಿಸುದ್ದಿ ಕೊಟ್ಟ ಸರ್ಕಾರ

ಇದನ್ನೂ ಓದಿ : ಕೊರೊನಾರ್ಭಟಕ್ಕೆ 3 ಜಿಲ್ಲೆಗಳಲ್ಲಿ ಶಾಲೆ ಬಂದ್‌ : ಉಡುಪಿ, ದ.ಕ., ಮಂಡ್ಯದಲ್ಲೂ ಶಾಲೆ ಮುಚ್ಚುವ ಸಾಧ್ಯತೆ

(Karnataka Corona blast in state schools, 850 children in a single day)

Comments are closed.