Malaika Arora : ಸೌಂದರ್ಯ ಅನ್ನೋದು ಹದಿನೆಂಟರ ಸ್ವತ್ತು ಅನ್ನೋ ಮಾತಿದೆ. ಆದರೆ ಬಾಲಿವುಡ್ ನ ಈ ಬೆಡಗಿ ನೋಡಿದ ಮೇಲೆ ಸೌಂದರ್ಯಕ್ಕೆ ವಯಸ್ಸಿನ ಹಂಗಿಲ್ಲ ಅನ್ನೋ ಮಾತನ್ನು ನೀವು ಒಪ್ಪಲೇ ಬೇಕು. ಇಷ್ಟಕ್ಕೂ ಆಕೆ ಹದಿನೆಂಟನ್ನು ಮೂರು ಸಲ ಸೇರಿಸಿದ್ರೇ ಎಷ್ಟಾಗುತ್ತೋ ಅಷ್ಟು ವಯಸ್ಸಿನ ಹತ್ತಿರದಲ್ಲಿದ್ದಾರೆ. ಆದರೆ ಮನಸ್ಸು ಮತ್ತು ದೇಹ ಸೌಂದರ್ಯ ಇನ್ನೂ ಹದಿನೆಂಟರ ಅಸುಪಾಸಿನಲ್ಲೇ ಇದೆ. ಆದ್ಯಾರು ಅಂತಹ ಎವರ್ ಗ್ರೀನ್ ನಟಿ ಅನ್ನೋ ಕುತೂಹಲ ಕ್ಕೆ ಇಲ್ಲಿದೆ ವಿತ್ ಪೋಟೋ ಉತ್ತರ.

ಬಾಲಿವುಡ್ ನ ಹಾಟ್ ಹಾಟ್ ಬೆಡಗಿಯರ ಪೈಕಿ ಟಿನೇಜ್ ಹಿರೋಯಿನ್ ಗಳಿಗೆ ಸೆಡ್ಡು ಹೊಡೆಯಬಲ್ಲ ಸುಂದರಿ ಮಲೈಕಾ ಅರೋರಾ. ವಯಸ್ಸು ಅನ್ನೋದು ಕೇವಲ ನಂಬರ್ ಅನ್ನೋ ಹಾಗೇ ಇನ್ನೂ ಎಳೆ ಹುಡುಗಿಯರನ್ನು ಮೀರಿಸುವಂತಹ ಅಂಗಸೌಷ್ಠವವನ್ನು ಮೆಂಟೆನ್ ಮಾಡಿದ್ದಾರೆ ಮಲೈಕಾ ಅರೋರಾ.

ಕೇವಲ ಸಿನಿಮಾ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲೂ ಮಲೈಕಾ ಸಖತ್ ಆಕ್ಟಿವ್ ಆಗಿದ್ದಾರೆ. ಪ್ರತಿನಿತ್ಯ ತಮ್ಮ ವರ್ಕೌಟ್ ವಿಡಿಯೋವನ್ನು ಅಪ್ಡೇಟ್ ಮಾಡೋ ಮಲೈಕಾ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಯೋಗಾಭ್ಯಾಸದ ಹವ್ಯಾಸ ಹೊಂದಿರೋ ಮಲೈಕಾ ತಮ್ಮ ಹಾಟ್ ಹಾಟ್ ಯೋಗಾಭ್ಯಾಸದ ವಿಡಿಯೋಗಳನ್ನು ಮರೆಯದೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ.
ಇದನ್ನೂ ಓದಿ : ಕೇರಳ ಸ್ಟೋರಿಯ ಬಳಿಕ ಅದಾ ಶರ್ಮ ಫುಲ್ ಮಿಂಚಿಂಗ್ : ಸಿನಿ ಮ್ಯಾಗಜಿನ್ ಸಖತ್ ಪೋಸ್ ಕೊಟ್ಟ ಅದಾ
ಅಷ್ಟೇ ಅಲ್ಲ ಸಖತ್ ಮಾಡ್ ಡ್ರೆಸ್ ಗಳಲ್ಲಿ ವೈರೈಟಿ ವೈರೈಟಿ ಪೋಟೋಶೂಟ್ ಗಳಿಗೂ ಮಲೈಕಾ ಪೋಸ್ ನೀಡಿದ್ದಾರೆ. ಯೋಗಾಭ್ಯಾಸದ ವಿಡಿಯೋ ತುಣುಕುಗಳ ಜೊತೆ ಟಿಪ್ಸ್ ಗಳನ್ನು ಕೂಡ ಮಲೈಕಾ ನೀಡುತ್ತ ಬಂದಿದ್ದಾರೆ. ಅತ್ಯಂತ ಕ್ಲಿಷ್ಟವಾದ ಯೋಗದ ಭಂಗಿಗಳನ್ನು ಮಲೈಕಾ ಅತ್ಯಂತ ಸುಲಭವಾಗಿ ಮಾಡುತ್ತಾರೆ. ಹಲವು ಸಂಸ್ಥೆಗಳೊಂದಿಗೆ ಮಲೈಕಾ ಆರೋಗ್ಯದ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳುತ್ತಾರೆ.

ಇನ್ನು ಸಿನಿಮಾದ ವಿಚಾರಕ್ಕೆ ಬರೋದಾದರೇ ಮಲೈಕಾ ಸಕ್ರಿಯವಾಗಿ ಸಿನಿಮಾದಲ್ಲಿ ತೊಡಗಿಕೊಳ್ಳುತ್ತಿಲ್ಲ. ಆದರೆ ಕೆಲ ಸಿನಿಮಾಗಳಲ್ಲಿ ಗೆಸ್ಟ್ ಅಫಿಯರೆನ್ಸ್ ನಲ್ಲಿ ನಟಿಸಿದ್ದಾರೆ. ಅಲ್ಲದೇ ಕಿರುತೆರೆಯ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಮಲೈಕಾ ಸಕ್ರಿಯವಾಗಿ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಕಾರ್ಯಕ್ರಮಕ್ಕೂ ವಿಶೇಷವಾಗಿ ವಿನ್ಯಾಸ ಮಾಡಿದ ಮಾಡರ್ನ್ ಡ್ರೆಸ್ ನಲ್ಲಿ ಕಾಣಿಸಿಕೊಳ್ಳೋದು ಮಲೈಕಾ ಅವರ ಇನ್ನೊಂದು ವಿಶೇಷತೆ. ಇತ್ತೀಚಿಗಷ್ಟೇ ಮಲೈಕಾ ಅಚ್ಚ ಬಿಳುಪಿನ ಓಫನ್ ಡೀಫ್ ಹಾರ್ಟ್ ಫುಲ್ ಗೌನ್ ನಲ್ಲಿ ಅಕ್ಷರಷಃ ಮತ್ಸಕನ್ಯೆಯಂತೆ ಮಿಂಚಿದ್ದಾರೆ.

ಇದನ್ನೂ ಓದಿ : ಕೊನೆಗೂ ಒಂದಾಗಲಿಲ್ಲ ಸುದೀಪ್-ದರ್ಶನ್ ! ಕಾರಣ ಏನು ಗೊತ್ತಾ?!
ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಮಲೈಕಾ ಕಲರ್ ಫುಲ್ ಪೋಟೋಶೂಟ್ ಗಳ ವೈರೈಟಿ ವೈರೈಟಿ ಪೋಟೋಸ್ ಶೇರ್ ಮಾಡಿಕೊಂಡಿದ್ದು, ಲಕ್ಷಾಂತರ ಲೈಕ್ಸ್ ಗಳು ಹರಿದು ಬಂದಿವೆ. ಮಹಾರಾಷ್ಟ್ರ ಮೂಲದ ಮಲೈಕಾ ಅರೋರಾ ಬಾಲಿವುಡ್ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದು, 2005 ರಲ್ಲಿ ನಚ್ ಬಲಿಯೇ ಮೂಲಕ ಕಿರುತೆರೆಗೆ ಹಾಗೂ ಇಎಂಆಯ್ ಸಿನಿಮಾದ ಮೂಲಕ 2008 ರಲ್ಲಿ ಹಿರಿತೆರೆಗೆ ಎಂಟ್ರಿ ನೀಡಿದ್ದಾರೆ.

.ಬ್ಯಾಲೆ,ಭರತ ನಾಟ್ಯ ಹಾಗೂ ಜಾಝ್ ನೃತ್ಯಗಳಲ್ಲಿ ಪರಿಣಿತಿ ಪಡೆದಿರುವ ಮಲೈಕಾ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ರನ್ನು ಮದುವೆ ಆಗಿದ್ದರು. ಅದರೆ ಕೆಲ ವರ್ಷಗಳ ಬಳಿಕ ಈ ಜೋಡಿ ವಿಚ್ಚೇಧನ ಪಡೆದುಕೊಂಡಿದ್ದು ಇವರಿಗೆ ಅರ್ಹಾದ್ ಖಾನ್ ಎಂಬ ಮಗನಿದ್ದು, ವಿದೇಶದಲ್ಲಿ ಅಧ್ಯಯನ ಮಾಡ್ತಿದ್ದಾನೆ.
ಇದನ್ನೂ ಓದಿ : ಪೋಟೋಶೂಟ್ ನಲ್ಲೆ ಮತ್ತೇರಿಸೋ ವರ್ಮಾ ಮಾದಕ ಲೋಕದ ಅಪ್ಸರೆ ಅಪ್ಸರಾ ರಾಣಿ !
ಯಾವುದೇ ಟೀಕೆಗಳಿಗೆ ಕಿವಿಗೂಡದ ಮಲೈಕಾ ತಮಗಿಂತ 12 ವರ್ಷ ಚಿಕ್ಕವರಾದ ಅರ್ಜುನ್ ಖಾನ್ ಜೊತೆ ಲವ್ವಿ ಡವ್ವಿಯಲ್ಲಿದ್ದು ನಾಲ್ಕು ವರ್ಷಗಳಿಂದ ಈ ಜೋಡಿ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದೆ. ಇತ್ತೀಚಿಗಷ್ಟೇ ಮಲೈಕಾ ಹಾಗೂ ಅರ್ಜುನ್ ಬ್ರೇಕ್ ಅಪ್ ಮಾಡಿಕೊಂಡರು ಅನ್ನೋ ಗಾಸಿಪ್ ಕೂಡ ಹಬ್ಬಿತ್ತಾದರೂ ಮಲೈಕಾ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಎಂದಿನಂತೆ ತಮ್ಮ ಗ್ಲ್ಯಾಮರ್ ರೂಟಿನ್ ಮುಂದುವರೆಸಿದ್ದಾರೆ.
Bollywood actress Malaika Arora is getting better with age This is the story of Malaika Arora