ಕೊನೆಗೂ ಒಂದಾಗಲಿಲ್ಲ ಸುದೀಪ್-ದರ್ಶನ್ ! ಕಾರಣ ಏನು ಗೊತ್ತಾ?!

ಹೋರಾಟದಿಂದಲೇ ಸ್ಯಾಂಡಲ್ ವುಡ್ ನಲ್ಲಿ ನೆಲೆಕಂಡುಕೊಂಡ ಇಬ್ಬರೂ ನಟರ ನಡುವೆ ಸಾಮ್ಯತೆ ಇತ್ತು. ಆದರೆ ಅದ್ಯಾವುದೋ‌ ಕಹಿ ಗಳಿಗೆಯಲ್ಲಿ ಮುರಿದ ಸ್ನೇಹದ ಕೊಂಡಿ ಮತ್ತೆ ಸರಿಯಾಗುವ ಲಕ್ಷಣವೇ ಕಾಣುತ್ತಿಲ್ಲ.

ಸುದೀಪ್ ಹಾಗೂ ದರ್ಶನ್ ಕನ್ನಡ ಚಲನಚಿತ್ರ ರಂಗದ ಇಬ್ಬರು ಸ್ಟಾರ್ ಗಳು. ಹೋರಾಟದಿಂದಲೇ ಸ್ಯಾಂಡಲ್ ವುಡ್ ನಲ್ಲಿ ನೆಲೆಕಂಡುಕೊಂಡ ಇಬ್ಬರೂ ನಟರ ನಡುವೆ ಸಾಮ್ಯತೆ ಇತ್ತು. ಆದರೆ ಅದ್ಯಾವುದೋ‌ ಕಹಿ ಗಳಿಗೆಯಲ್ಲಿ ಮುರಿದ ಸ್ನೇಹದ ಕೊಂಡಿ ಮತ್ತೆ ಸರಿಯಾಗುವ ಲಕ್ಷಣವೇ ಕಾಣುತ್ತಿಲ್ಲ. ಈ‌ ಬಗ್ಗೆ ಮೌನ ಮುರಿದ ಸುದೀಪ್ (Kiccha Sudeep), ಎಲ್ಲದಕ್ಕೂ ಕಾಲಾವಕಾಶ ಬೇಕು ಎಂದಿದ್ದಾರೆ.

ಇದಕ್ಕಿದ್ದಂತೆ ಮೊನ್ನೆ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿತ್ತು. ವೈಯಕ್ತಿಕ ಇಗೋ ಕಾರಣಕ್ಕೆ ಸ್ನೇಹ ಮುರಿದುಕೊಂಡ ಇಬ್ಬರು ನಟರೂ ಸುಮಲತಾ ಬರ್ತಡೇ ಪಾರ್ಟಿಯಲ್ಲಿ ಒಂದಾಗಲಿದ್ದಾರೆ ಎಂದು ನೀರಿಕ್ಷಿಸಲಾಗಿತ್ತು. ಆದರೆ ಈ ನೀರಿಕ್ಷೆ ಸುಳ್ಳಾಗಿದೆ.‌ ಸುದೀಪ್‌ ದರ್ಶನ್ (Darshan) ಒಂದೇ ಪಾರ್ಟಿಯಲ್ಲಿದ್ದರೂ ಒಬ್ಬರ ಮುಖ ಒಬ್ಬರು ನೋಡಿಲ್ಲ ಎಂದೇ ಪಾರ್ಟಿಯಲ್ಲಿರೋ ಪ್ರಮುಖ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

Sudeep-Darshan did not unite at last! Do you know what the reason is?!
Image Credit to Original Source

ಇಷ್ಟೇ ಇಲ್ಲ, ನೇರಾ ನೇರ ನಟರ ನಡುವೆ ರಾಜಿಯಾಯ್ತು ಎಂದು ಸ್ವತಃ ಸುಮಲತಾ ಕೂಡ ಖಚಿತಪಡಿಸಲಿಲ್ಲ. ಹೀಗಾಗಿ ದರ್ಶನ್ , ಸುದೀಪ್ ಒಂದಾಗಿದ್ದು, ಇನ್ಮೇಲೆ ಸ್ನೇಹಿತರಾಗಿ ಒಟ್ಟಿಗೆ ಸಾಗೋದು, ಒಂದು ಸಿನಿಮಾ‌ಮಾಡೋದು ಎಲ್ಲವೂ ಕತೆ ಅನ್ನೋದು ಸ್ಪಷ್ಟವಾಗಿದೆ. ಆದರೆ ಈ ಬಗ್ಗೆ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಸೋಷಿಯಲ್ ಮೀಡಿಯಾದಲ್ಲೂ ಮೌನ ಕಾಯ್ದು ಕೊಂಡಿದ್ದಾರೆ.

Sudeep-Darshan did not unite at last! Do you know what the reason is?!
Image Credit to Original Source

ಇನ್ನೊಂದೆಡೆ ತಮ್ಮ ಹುಟ್ಟುಹಬ್ಬದ ಸಂಭ್ರಮದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುದೀಪ್, ಈ ವಿಚಾರವನ್ನು ಹೀಗೆಲ್ಲ ಅರ್ಥೈಸಲು ಸಾಧ್ಯವಿಲ್ಲ. ಮಾತ್ರವಲ್ಲ ದರ್ಶನ್ ಕೂಡ ದೊಡ್ಡ ನಟರು, ಒಂದು ದೊಡ್ಡ ಹೆಸರು, ಶಕ್ತಿ ಹಾಗಾಗಿ ನಾವು ಏನೇನನ್ನೂ ಯೋಚಿಸೋಕೆ ಆಗಲ್ಲ.

ಸೋತಿತು ಇಲ್ಲ ಗೆದ್ದಿದೆ ಎಂದು ನಿರ್ಧರಿಸಲಾಗೋದಿಲ್ಲ. ಇದು ಸಿನಿಮಾ ಅಲ್ಲ. ಹೀಗಾಗಿ ಪರಸ್ಪರ ಈ ಸಂಬಂಧ ಜೋಡಿಸಲು ಕಾಯಬೇಕು. ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಬೇಕು. ಪ್ರಶ್ನೆಗಳಿಗೆ ಉತ್ತರ ಸಿಗದೆ ಯಾವುದು ಕ್ಲಿಯರ್ ಆಗೋದಿಲ್ಲ. ಇದಕ್ಕಾಗಿ ನಮಗೆ ಸ್ವಲ್ಪ ಸಮಯ ಕೊಡಬೇಕು. ಆಮೇಲೆ ಎಲ್ಲವೂ ನಿರ್ಧಾರವಾಗಲಿದೆ ಎಂದಿದ್ದಾರೆ.

ಇನ್ನೊಂದೆಡೆ ನಟ ದರ್ಶನ್ ಕೂಡ ಸುದೀಪ್ ಅವರ ಜೊತೆ ಸ್ನೇಹ ಮುಂದುವರೆಸುವ ಯಾವುದೇ ಲಕ್ಷಣದಲ್ಲಿಲ್ಲ. ಬದಲಾಗಿ ಮೌನವಾಗಿದ್ದಾರೆ. ಸಪ್ಟೆಂಬರ್ 2 ರಂದು ಸುದೀಪ್ ಬರ್ತಡೇ, ಆದರೆ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ರೀತಿ ಪೋಸ್ಟ್ ಮಾಡಿಲ್ಲ.‌ಮಾತ್ರವಲ್ಲ ಒಂದೇ ಒಂದು ವಿಶ್ ಕೂಡ ಮಾಡಿಲ್ಲ. ಇದನ್ನೂ ಓದಿ : ಯಶ್‌ ಮನೆಯಲ್ಲಿ ಮಕ್ಕಳ ಸಂಭ್ರಮದ ರಕ್ಷಾಬಂಧನ: ರಾಧಿಕಾ ಪಂಡಿತ್ ಹಂಚಿಕೊಂಡ್ರು ಸ್ಪೆಶಲ್ ವಿಡಿಯೋ

ಇದಕ್ಕೂ ಮುನ್ನ ಸುದೀಪ್ ಹಾಗೂ ದರ್ಶನ್ ಸ್ನೇಹ ಮುಂದುವರೆಯಲಿದೆ. ಸಪ್ಟೆಂಬರ್ 1 ರಂದು ರಾತ್ರಿ ದರ್ಶನ್ ಸುದೀಪ್ ಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲಿದ್ದಾರೆ ಎಂದು ನೀರಿಕ್ಷಿಸಲಾಗಿತ್ತು. ಆದರೆ ಎಲ್ಲ ನೀರಿಕ್ಷೆಗಳು ಹುಸಿಯಾಗಿದೆ. ಇಬ್ಬರೂ ನಟರು ತಮ್ಮ ತಮ್ಮ ಇಗೋವನ್ನು ಹಾಗೇಯೇ ಕಾಯ್ದಿಟ್ಟುಕೊಂಡಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಇಬ್ಬರೂ ನಟರು ಸ್ನೇಹ ಮುಂದುವರೆಸಲು ಸಿದ್ಧವಿದ್ದರೂ, ಪರಸ್ಪರ ಮಾತುಕತೆ ನಡೆಸಲು ಮುಂದಾಗುತ್ತಿಲ್ಲವಂತೆ. ಇದನ್ನೂ ಓದಿ : ಸ್ವಿಮ್ಮಿಂಗ್‌ ಪೂಲ್‌ನಲ್ಲಿ ರಾಗಿಣಿ ದ್ವಿವೇದಿ : ತುಪ್ಪದ ಬೆಡಗಿಯ ಅವತಾರಕ್ಕೆ ಫ್ಯಾನ್ಸ್‌ ಫಿದಾ

ಹೀಗಾಗಿ ಈ ಸ್ನೇಹ ಮುಂದುವರೆಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದು, ಸಂದರ್ಶನವೊಂದರಲ್ಲಿ ಸುದೀಪ್ ದರ್ಶನ್ ಗೆ ತಾವೇ ಅವಕಾಶ ಕೊಡಿಸಿದ್ದು ಎಂದು ಹೇಳಿದ್ದರು ಎಂಬ ಕಾರಣಕ್ಕೆ ಈ ಸ್ನೇಹ ಮುರಿದುಬಿದ್ದಿತ್ತು. ಇದಾದ ಮೇಲೆ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸಾಕಷ್ಟು ಸೋಷಿಯಲ್ ಮೀಡಿಯಾ ವಾರ್ ಕೂಡ ನಡೆದಿತ್ತು. ಸದ್ಯ ಎರಡೂ ಸ್ಟಾರ್ ನಟರೂ ಸ್ನೇಹ ಮುಂದುವರೆಸುವ ನೀರಿಕ್ಷೆ ಸುಳ್ಳಾಗಿದ್ದರೂ, ಮುಂದೊಂದು ದಿನ ಈ ಸ್ನೇಹ ಸಾಕಾರಗೊಳ್ಳಲಿ ಎಂದು ಸ್ಯಾಂಡಲ್ ವುಡ್ ಮಂದಿ ನೀರಿಕ್ಷೆ ಮಾಡ್ತಿರೋದಂತು ಸುಳ್ಳಲ್ಲ.

Sudeep-Darshan did not unite at last! Do you know what the reason is?!

Comments are closed.