ಬಾಲಿವುಡ್ ಕಿಂಗ್ ಖಾನ್ ಶಾರೂಖ್ ( Sharukh khan ) ಪುತ್ರಿ ಯಾವ ಬಾಲಿವುಡ್ ಸ್ಟಾರ್ ಗೂ ಕಮ್ಮಿ ಇಲ್ಲದಷ್ಟು ಜನಪ್ರಿಯತೆ ಗಳಿಸಿದ್ದಾರೆ.ಇನ್ನೂ ವಿಧ್ಯಾರ್ಥಿ ದೆಸೆಯಲ್ಲೇ ಇರುವ ಸುಹಾನಾ ಖಾನ್ ಈಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸಖತ್ ಹಾಟ್ ಆ್ಯಂಡ್ ಬೋಲ್ಡ್ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುಹಾನಾ ಖಾನ್ (Suhana Khan Latest Photoshoot) ತಮ್ಮ ಸೌಂದರ್ಯವನ್ನು ಪ್ರದರ್ಶಿಸಿ ಫ್ಯಾನ್ಸ್ ಗೆ ಮತ್ತೇರಿಸಿದ್ದಾರೆ. ಇನ್ನೂ ಬಾಲಿವುಡ್ ಗೂ ಕಾಲಿಡದ ಸುಹಾನಾ ಈಗಾಗಲೇ ಇನ್ ಸ್ಟಾಗ್ರಾಂನಲ್ಲಿ ಎರಡು ಮಿಲಿಯನ್ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರೋ ಸುಹಾನಾ ತಮ್ಮ ಟ್ರಿಪ್, ಪಾರ್ಟಿ, ಕಾಲೇಜ್, ಎಂಜಾಯಮೆಂಟ್ ಪೋಟೋಗಳನ್ನು ತಪ್ಪದೇ ಶೇರ್ ಮಾಡುತ್ತಾರೆ. ನ್ಯೂಯಾರ್ಕ್ ನಲ್ಲಿ ವಿದ್ಯಾಭ್ಯಾಸ ಮಾಡ್ತಿರೋ ಸುಹಾನಾ ಕಾಲೇಜ್ ಕ್ಯಾಂಪಸ್ ನಲ್ಲೂ ಸಖತ್ ಹಾಟ್ ಹಾಟ್ ಡ್ರೆಸ್ ಗಳ ಪೋಟೋ ಶೇರ್ ಮಾಡಿದ್ದು ಹಲವಾರು ಭಾರಿ ಟ್ರೋಲ್ ಗೂ ಗುರಿಯಾಗಿದ್ದರು. ಸುಹಾನಾ ಸದ್ಯ ನ್ಯೂಯಾರ್ಕ್ ನಿಂದ ವಿದ್ಯಾಭ್ಯಾಸ ಮುಗಿಸಿ ಇಂಡಿಯಾಗೆ ವಾಪಸ್ಸಾಗಿದ್ದು, ಮುಂಬೈ ನಲ್ಲೇ ವಾಸವಾಗಿದ್ದಾರೆ.

ಮಗಳ ಬಗ್ಗೆ ನಟ ಶಾರೂಖ್‌ಖಾನ್ ಅಭಿಮಾನದ ಮಾತುಗಳನ್ನಾಡಿದ್ದು, ಆಕೆಗೆ ನಟನೆಯಲ್ಲಿ ಆಸಕ್ತಿ ಇದೆ ಎಂದು ಹೇಳಿದ್ದರು. ಹೀಗಾಗಿ ಸದ್ಯದಲ್ಲೇ ಸುಹಾನಾ ಬಾಲಿವುಡ್ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದ್ದು ಯಾವ ಚಿತ್ರ, ಯಾರು ನಾಯಕ ಅನ್ನೋ ಕುತೂಹಲಕ್ಕೆ ಉತ್ತರ ಸಿಗಬೇಕಿದೆ. ಸುಹಾನಾ ಈಗಾಗಲೇ ನ್ಯೂಯಾರ್ಕ್ ನಲ್ಲಿ ನಟನೆಯ ತರಬೇತಿ ಯನ್ನು ಪಡೆದಿದ್ದು, ಅವರ ನಟನೆಯ ಹಲವು ವಿಡಿಯೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸದಾ ಬೋಲ್ಡ್ ಲುಕ್ ಗಳ ಪೋಟೋ ಹಂಚಿಕೊಳ್ಳುವ ಸುಹಾನಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಾದಕನೋಟದಿಂದಲೇಸಂಚಲನ ಸೃಷ್ಟಿಸಿದ್ದಾರೆ. ಶಾರೂಖ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಸುಹಾನಾ ಖಾನ್ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು ಮಾತ್ರವಲ್ಲ ಎಲ್ಲಿಯೂ ಕಾಣಿಸಿಕೊಳ್ಳದೇ ಮೀಡಿಯಾದಿಂದಲೂ ಅಂತರ ಕಾಯ್ದುಕೊಂಡಿದ್ದರು. ಈಗ ಮತ್ತೆ ಸೋಷಿಯಲ್ ಮೀಡಿಯಾಕ್ಕೆ ಮರಳಿದ್ದು ತಮ್ಮ ಪೋಟೋಗಳನ್ನು ಶೇರ್ ಮಾಡುವ ಮೂಲಕ ಫ್ಯಾನ್ಸ್ ಗೆ ಸಿಹಿಸುದ್ದಿ ನೀಡಿದ್ದಾರೆ.
ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಗೆ ಬರ್ತಡೇ ಸಂಭ್ರಮ : ಮಕ್ಕಳಿಂದ ಸಿಕ್ತು ಕ್ಯೂಟ್ ಗಿಫ್ಟ್
ಇದನ್ನೂ ಓದಿ : ತಂದೆ ಪಕ್ಕದಲ್ಲಿ ಪುತ್ರ ರತ್ನ: ಪುನೀತ್ ರಾಜ್ ಕುಮಾರ್ ಪ್ರತಿಮೆಗೆ ಪಾಲಿಕೆ ಗ್ರೀನ್ ಸಿಗ್ನಲ್
(Bollywood Beauty Sharukh khan daughter Suhana Khan Latest Photoshoot)