Corona Blast : ರಾಜ್ಯದಲ್ಲಿ ಕೊರೋನಾ ಸೋಂಕಿನ ನಾಗಾಲೋಟ: ಒಟ್ಟು 12 ಸಾವಿರ ಪ್ರಕರಣ ದಾಖಲು

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಾದಯಾತ್ರೆ ಅದ್ದೂರಿಯಾಗಿ ಅರಂಭಗೊಂಡಿದ್ದರೇ, ಇತ್ತ ಕೊರೋನಾ ಸೋಂಕಿನ ಯಾತ್ರೆಯೂ ನಾಗಾಲೋಟದಲ್ಲಿ ಸಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಶ ಸಾವಿರದ ಗಡಿ ದಾಟಿದ್ದು (Corona Blast) ರಾಜ್ಯದಲ್ಲಿ ಇಂದು 12 ಸಾವಿರ ಕೊರೋನಾ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು 12 ಸಾವಿರ ಕರೋನಾ ಪ್ರಕರಣಗಳು ದಾಖಲಾಗಿದ್ದರೇ, ಬೆಂಗಳೂರು ಒಂದರಲ್ಲೇ 9,020 ಪ್ರಕರಣಗಳು ವರದಿಯಾಗಿವೆ.

ಪಾಸಿಟಿವಿಟಿ ರೇಟ್ ಈಗಾಗಲೇ 6.33% ದಾಟಿದ್ದು, 901 ಜನರು ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 49,602 ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ 40 ಸಾವಿರ ಪ್ರಕರಣಗಳು ಬೆಂಗಳೂರಿನಲ್ಲೇ ಅಕ್ಟಿವ್ ಆಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಇದುವರೆಗೂ 1,89,499 ಟೆಸ್ಟ್ ನಡೆಸಲಾಗಿದೆ. ಈ ಬಗ್ಗೆ ಟ್ವೀಟರ್ ನಲ್ಲಿ ವೈದ್ಯಕೀಯ ಸಚಿವ ಡಾ.ಸುಧಾಕರ್ ಮಾಹಿತಿ‌ನೀಡಿದ್ದಾರೆ.

ರಾಜ್ಯದಲ್ಲಿ ಇಂದು ಕೊರೋನಾಕ್ಕೆ ನಾಲ್ವರು ಸಾವನ್ನಪ್ಪಿದ್ದು ಈ ಪೈಕಿ ಇಬ್ಬರು ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ. ನಿನ್ನೆಗೆ ಹೋಲಿಸಿದರೇ ಇಂದೂ ಕೂಡಾ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಏರಿಕೆಕಂಡಿದ್ದು, ಪಾಸಿಟಿವಿಟಿ ರೇಟ್ ಕೂಡಾ ಏರಿಕೆಯಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದು ಜನವರಿ 19 ರವರೆಗೆ ಕಠಿಣ ನಿಯಮಗಳನ್ನು ಸರ್ಕಾರ ಜಾರಿಗೊಳಿಸಿದೆ.

ಅದರೂ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕಿನ‌ ಪ್ರಕರಣಗಳಲ್ಲಿ ಏರಿಕೆಯಾಗುತ್ತಲೇ ಇದ್ದು, ಜನವರಿ 19 ರ ಬಳಿಕವೂ ಕೊರೋನಾ ನಿಯಂತ್ರಣಕ್ಕೆ ಕಠಿಣ ನಿಯಮ ಅನಿವಾರ್ಯವಾಗಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಇಂದು ವಿದೇಶದಿಂದ ಬಂದ 7 ವಿದೇಶಿ ಪ್ರವಾಸಿಗರಿಗೆ ಕೊರೋನಾ ಸೋಂಕು ಧೃಡಪಟ್ಟಿದ್ದು, ಇಂಗ್ಲೆಂಡ್ ನಿಂದ ಬಂದ ಮೂವರು,ಅಮೇರಿಕಾದಿಂದ ಬಂದ ಇಬ್ಬರು ಹಾಗೂ ಐರ್ಲೆಂಡ್ ಹಾಗೂ ಟಾಂಜಾನಿಯಾದಿಂದ ಬಂದ ತಲಾ ಓರ್ವ ರಿಗೆ ಸೋಂಕು ತಗುಲಿದೆ.

ಈ ಹಿಂದೆ ಸಿಎಂ ಜೊತೆ ಸಭೆ ನಡೆಸಿದ್ದ ಕೊರೋನಾ ತಾಂತ್ರಿಕ ಸಮಿತಿ, ನಗರದಲ್ಲಿ ಹಾಗೂ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 5 ರ ಗಡಿ ದಾಟಿದರೇ ಲಾಕ್ ಡೌನ್ ಅನಿವಾರ್ಯ ವಾಗಲಿದೆ ಎಂದಿದ್ದರು. ಈಗಾಗಲೇ ಪಾಸಿಟಿವಿಟಿ ರೇಟ್ 6.33 ಕ್ಕೆ ಏರಿಕೆಯಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನಗರದಲ್ಲಿ ಇದುವರೆಗೂ 743 ಜನರು ಮಾತ್ರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 6 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ : ಭಾರತದಲ್ಲಿಂದು 1.59 ಲಕ್ಷ ಕೊರೊನಾ ಕೇಸ್‌

ಇದನ್ನೂ ಓದಿ : ಎಲ್ಲ ಅಗ್ನಿ ಅವಘಡಗಳಿಗೆ ದೇವರೇ ಹೊಣೆಯಲ್ಲ: ಸುಪ್ರೀಂಕೋರ್ಟ್

( Corona Blast : Karnataka today record 12,000 covid-19 cases )

Comments are closed.