ಸೋಮವಾರ, ಏಪ್ರಿಲ್ 28, 2025
HomeCinemaKatrina Kaif Vicky Kaushal Marriage : ಸೀಕ್ರೆಟ್‌ ಆಗಿ ಮದುವೆಯಾದ್ರು ಕತ್ರಿನಾ ಕೈಫ್‌ -...

Katrina Kaif Vicky Kaushal Marriage : ಸೀಕ್ರೆಟ್‌ ಆಗಿ ಮದುವೆಯಾದ್ರು ಕತ್ರಿನಾ ಕೈಫ್‌ – ವಿಕ್ಕಿ ಕೌಶಲ್‌

- Advertisement -

ಮುಂಬೈ : ಬಾಲಿವುಡ್‌ ( Bollywood ) ಖ್ಯಾತ ಕತ್ರಿನಾ ಕೈಫ್‌ (Katrina Kaif ) ಹಾಗೂ ವಿಕ್ಕಿ ಕೌಶಲ್‌ (Vicky Kaushal) ಮದುವೆ ಅದ್ದೂರಿಯಾಗಿ ನೆರವೇರಿದೆ. ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ (Katrina Kaif Vicky Kaushal Marriage) ಹಸೆಮಣೆ ಏರಿದ್ದಾರೆ. ಇದೀಗ ಮದುವೆಯ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸ್‍ನಲ್ಲಿ ಇಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ಈ ಮದುವೆಗೆ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು. 38 ವರ್ಷ ವಯಸ್ಸಿನ ಕತ್ರಿನಾ ಕೈಫ್‌ ತಮಗಿಂತಲೂ ಐದು ವರ್ಷ ಕಿರಿಯರಾಗಿರುವ ವಿಕ್ಕಿ ಕೌಶಲ್‍ ಜೊತೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ವಿದೇಶಿ ಪ್ರಜೆಯಾಗಿರುವ ಕತ್ರಿನಾ ಅವರು ಈಗ ದೇಸಿ ಹುಡುಗನ ಕೈ ಹಿಡಿದು ಭಾರತದ ನಟಿಯಾಗುವ ಜೊತೆಗೆ ಭಾರತೀಯ ಸೊಸೆಯಾಗಿದ್ದಾರೆ.

Bollywood celebrities Katrina Kaif Vicky Kaushal Marriage viral photos 2

ಕತ್ರಿನಾ ಕೈಫ್‌ ತಮ್ಮ ಮದುವೆಯ ಪೋಟೊಗಳನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಷಣಕ್ಕೆ ನಮ್ಮನ್ನು ಕರೆತಂದವರಿಗೆ ಪ್ರೀತಿಯ ಮತ್ತು ಕೃತಜ್ಞತೆ. ನಾವು ಒಟ್ಟಿಗೆ ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವನ್ನು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಪೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಆದ ಕೆಲವೇ ಗಂಟೆಗಳಲ್ಲಿಎಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ವಿಡಿಯೋಗಳನ್ನು ಖ್ಯಾತ ಓಟಿಟಿ ಸಂಸ್ಥೆಯೊಂದಕ್ಕೆ ಬರೋಬ್ಬರಿ 100 ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಲಾಗಿದೆ.

ಇನ್ನು ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ಮದುವೆಗೆ ಬಾಲಿವುಡ್‌ ಸೆಲೆಬ್ರಿಟಿಗಳಾದ ಹೃತಿಕ್​ ರೋಷನ್​, ಪ್ರಿಯಾಂಕಾ ಚೋಪ್ರಾ, ಸೋನಮ್​ ಕಪೂರ್, ನಿಕ್​ ಜೋನಸ್​, ಬಿಪಾಶಾ ಬಸು, ಟ್ವಿಂಕಲ್​ ಖನ್ನಾ, ಪರಿಣೀತಿ ಚೋಪ್ರಾ, ಇಶಾನ್​ ಕಟ್ಟರ್​, ಕರೀನಾ ಕಪೂರ್​ ಖಾನ್​, ಜಾನ್ವಿ ಕಪೂರ್​, ಆಲಿಯಾ ಭಟ್​, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : Madhagaja actress Ashika Ranganath: ಕೆಂಪಾಯ್ತು ಮದಗಜ ಸುಂದರಿ ಬೆನ್ನು: ಪೋಟೋ ಹಂಚಿಕೊಂಡ ಅಶಿಕಾ ಹೇಳಿದ್ದೇನು ಗೊತ್ತಾ?!

ಇದನ್ನೂ ಓದಿ : Rakul Preet Singh : ಸೋಷಿಯಲ್ ಮೀಡಿಯಾದ ತುಂಬಾ ಬಿಕನಿ ಪೋಟೋಗಳು: ಇದು ಜಲಕನ್ಯೆ ರಕುಲ್ ಅವತಾರ

ಇದನ್ನೂ ಓದಿ : Yash Radhika Pandit : ಯಶ್ ರಾಧಿಕಾಗೆ ಆನ್ಯಿವರ್ಸರಿ ಸಂಭ್ರಮ : ಪತಿ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಏನಂದ್ರು ಗೊತ್ತಾ

ಇದನ್ನೂ ಓದಿ : Rashmika Mandanna : ಕನ್ನಡಿಗರನ್ನು ಮತ್ತೆ ಕಡೆಗಣಿಸಿದ ಕಿರಿಕ್ ಬೆಡಗಿ : ಸ್ಯಾಂಡಲ್ ವುಡ್ ಮರೆತೇ ಬಿಟ್ರಾ ರಶ್ಮಿಕಾ

( Bollywood celebrities Katrina Kaif Vicky Kaushal Marriage viral photos )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular