Airport Health Test : ಓಮಿಕ್ರಾನ್ ಭೀತಿಗೆ ಟೈಟ್ ರೂಲ್ಸ್ : ಏರ್ಪೋರ್ಟ್ ನಲ್ಲಿ ಪ್ರಯಾಣಿಕರಿಗೆ ಕಡ್ಡಾಯ ಹೆಲ್ತ್ ಟೆಸ್ಟ್

ನವದೆಹಲಿ : ಇಡೀ ದೇಶಾದ್ಯಂತ ಓಮಿಕ್ರಾನ್ ಭೀತಿ ( Omicron fear )ಹಿನ್ನಲೆ ಕೆಂಪೇಗೌಡ ಇಂಟರ್ ನ್ಯಾಷನಲ್‌ ಏರ್ ಪೋರ್ಟ್ ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೇರೆ ದೇಶದಿಂದ ಸೋಂಕಿತರು ರಾಜ್ಯವನ್ನು ಪ್ರವೇಶಿಸದಂತೆ ನಿಗಾ ವಹಿಸಲಾಗುತ್ತಿದ್ದು ಬೆಂಗಳೂರು ಇಂಟರನ್ಯಾಶನಲ್ ಏರ್ಪೋರ್ಟ್ ನಲ್ಲಿ (Airport Health Test) ಹಲವು ಹಂತದಲ್ಲಿ ತಪಾಸಣೆ ( Test for Passengers )ನಡೆಸಲಾಗುತ್ತಿದೆ.

ಪ್ರಮುಖವಾಗಿ ದಕ್ಷಿಣ ಆಫ್ರಿಕಾದಿಂದ ಬರುವ ಪ್ರತಿಯೊಬ್ಬರ ಮೇಲೆ ನಿಗಾ ವಹಿಸಲಾಗುತ್ತಿದ್ದು, ಹೈ ರಿಸ್ಕ್ ಘೋಷಿಸಲಾಗಿರುವ ಹನ್ನೆರಡು ದೇಶಗಳಿದ ಬರುವ ಪ್ರಯಾಣಿಕರಿಗೆ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಸೋಂಕಿತರು ರೋಗವಾಹಕಗಳಂತೆ ಬೆಂಗಳೂರು ಪ್ರವೇಶಿಸುವುದನ್ನು ತಡೆಯಲು ಆರು ಹಂತದಲ್ಲಿ ಪ್ರಯಾಣಿಕರಿಗೆ ಟೆಸ್ಟ್ ಮಾಡಲಾಗುತ್ತಿದ್ದು ಎಲ್ಲ ರೀತಿಯ ಪರೀಕ್ಷೆಗಳ ಬಳಿಕವಷ್ಟೇ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡಲಾಗುತ್ತಿದೆ.

ಹೈರಿಸ್ಕ್ ದೇಶದಿಂದ ಬಂದ ಪ್ರಯಾಣಿಕರಿಗೆ ಟೆಸ್ಟ್ ಕಡ್ಡಾಯವಾಗಿದ್ದು ಪ್ಲೈಟ್ ಇಳಿದ ಬಳಿಕ ಹತ್ತು ಮಂದಿ ಪ್ರಯಾಣಿಕರಿಗೆ ಒಂದರಂತೆ ತಂಡ ಮಾಡಲಾಗುತ್ತಿದೆ. ಬಳಿಕ ಆನ್ ಲೈನ್ ಅಥವಾ ನೇರವಾಗಿ ರಿಜಿಸ್ಟ್ರೇಷನ್ ವ್ಯವಸ್ಥೆ ಕಲ್ಪಿಸಲಾಗಿದ್ದು ಅದಾದ ಬಳಿಕ ಹಣ ಪಾವತಿ ಮಾಡಬೇಕು. ಆರ್ ಟಿಪಿಸಿಆರ್ ಟೆಸ್ಟ್ ಗೆ 500 ,ರ್ಯಾಂಡಮ್ ಟೆಸ್ಟ್ ಗೆ 3000 ಪಾವತಿಸಬೇಕು.

ಪ್ರಯಾಣಿಕರು ಹಣ ಪಾವತಿ ಮಾಡಿದ ಬಳಿಕ ಮೆಡಿಕಲ್ ಸ್ವಾಬ್ ಟೆಸ್ಟ್ ಕಿಟ್ ಕೊಡಲಾಗುತ್ತೆ.ಕಿಟ್ ಪಡೆದ ಬಳಿಕ ಪ್ರತ್ಯೇಕವಾಗಿ ಸ್ವಾಬ್ ಟೆಸ್ಟ್ ವ್ಯವಸ್ಥೆ ಮಾಡಲಾಗಿದ್ದು ಸ್ವಾಬ್ ಟೆಸ್ಟ್ ಆದ ಬಳಿಕ ಪ್ರತಿಯೊಬ್ಬರಿಗೂ ಬಾಡಿ ಸ್ಕ್ರೀನಿಂಗ್ ನಡೆಯುತ್ತದೆ. ಬಾಡಿ ಸ್ಕ್ರೀನಿಂಗ್ ಆದ ಬಳಿಕ ರಿಪೋರ್ಟ್ ಬರುವವರೆಗೂ ವೈಟಿಂಗ್ ಸ್ಥಳದಲ್ಲಿ ಪ್ರಯಾಣಿಕರು ಕಾಯುವುದು ಅನಿವಾರ್ಯ. ಇನ್ನು ರ್ಯಾಂಡಮ್ ರಿಪೋರ್ಟ್‌ ಅರ್ಧ ಗಂಟೆಗೆ ಬಂದ್ರೇ ಆರ್ ಟಿಪಿಸಿ ಆರ್ ನಾಲ್ಕು ಗಂಟೆಗಳ ಅವಧಿಗೆ ಬರಲಿದೆ. ಪ್ರತಿಯೊಬ್ ಪ್ರಯಾಣಿಕರ ಮೊಬೈಲ್ ಗೆ ರಿಪೋರ್ಟ್ ಬರುವ ವ್ಯವಸ್ಥೆ ಕಲ್ಪಿಸಲಾಗಿದ್ದು, ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಹೊರಗೆ ಹೋಗಲು ಅವಕಾಶ ನೀಡಲಾಗುತ್ತದೆ.

ಈ ವ್ಯವಸ್ಥೆಯಂತೆ ಇಂದು ಯುಕೆಯಿಂದ ಬಂದಿದ್ದ 318 ಮಂದಿ ಪ್ರಯಾಣಿಕರನ್ನು ಹಂತ ಹಂತವಾಗಿ ಪ್ರತಿಯೊಬ್ಬರನ್ನ ತಪಾಸಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಏರ್ಪೋರ್ಟ್ ನ ಪ್ರತಿ ಗೇಟ್ ನಲ್ಲೂ ಸ್ಯಾನಿಟೈಸ್, ಟೆಂಪ್ರೇಚರ್ ತಪಾಸಣೆ. ಸಾಮಾಜಿಕ ಅಂತರ ಕಾಪಾಡಲು ಕುರ್ಚಿಗಳ ವ್ಯವಸ್ಥೆ. ಮಾಡಲಾಗಿದೆ. ಇನ್ನು ಏರ್ಪೋರ್ಟ್ ನ ಈ ವ್ಯವಸ್ಥೆ ಬಗ್ಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಯಾವುದೇ ಪ್ರಯಾಣಿಕರ ಟೆಸ್ಟ್ ವರದಿ ಪಾಸಿಟಿವ್ ಬಂದಲ್ಲಿ ಆ ಬಗ್ಗೆ ಏರ್ಪೋರ್ಟ್ ಆಡಳಿತ ಮಂಡಳಿ ಜಿಲ್ಲಾಢಳಿತಕ್ಕೆ‌ಮಾಹಿತಿ‌ನೀಡುತ್ತದೆ.

ಇದನ್ನೂ ಓದಿ : Hostel Guidelines :ಹಾಸ್ಟೆಲ್​ಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ : ಶಾಲಾ-ಕಾಲೇಜು ಬಂದ್​ ವಿಚಾರದಲ್ಲಿಯೂ ಮಹತ್ವದ ಹೇಳಿಕೆ

ಇದನ್ನೂ ಒದಿ : ಪ್ರಧಾನಿ ಮೋದಿ, ಅಮಿತ್​ ಶಾ, ಪ್ರಿಯಾಂಕಾ ಚೋಪ್ರಾ… ಅಬ್ಬಬ್ಬಾ..! ತಲೆ ತಿರುಗಿಸುತ್ತೆ ಈ ಗ್ರಾಮದ ಕೋವಿಡ್​ ಪರೀಕ್ಷಾ ಪಟ್ಟಿ ವಿವರ

ಇದನ್ನೂ ಓದಿ : Home Quarantine : ಹೋಂ ಕ್ವಾರಂಟೈನ್​ಗೆ ಚಕ್ಕರ್​, ಹೋಟೆಲ್​ಗೆ ಹಾಜರ್​​..! ದ.ಆಫ್ರಿಕಾದಿಂದ ಮರಳಿದ ಮಹಿಳೆಯಿಂದ ಮಹಾ ಯಡವಟ್ಟು

( Omicron fear Tight Rules : Mandatory for Airport Health Test for Passengers)

Comments are closed.