ಕಾಮಿಡಿ ನೈಟ್ಸ್ ವಿತ್ ಕಪಿಲ್ ( Netflix Kapil Sharma ). ಬಾಲಿವುಡ್ ನ ಪ್ರತಿಷ್ಠಿತ ಹಾಗೂ ಟಿಆರ್ಪಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಶೋ. ಈ ಶೋದ ಪ್ರಮುಖ ಆಕರ್ಷಣೆ ನಟ ಹಾಗೂ ನಿರೂಪಕ ಕಪಿಲ್. ಅರಳುಹುರಿದಂತೆ ಮಾತನಾಡುವ ಗೊತ್ತೇ ಆಗದಂತೆ ಕಾಲೆಳೆಯುವ ಸೆಲೆಬ್ರೆಟಿ ಶೋ ಮ್ಯಾನ್ ಕಪಿಲ್ ಶರ್ಮಾ ಈಗ ತಮ್ಮ ಜೀವನದ ಕತೆ ಹೇಳಲು ಬರುತ್ತಿದ್ದಾರೆ. I Am Not Done Yet ಎಂಬ ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ತಮ್ಮಬದುಕಿನ ಸಾಧನೆ, ತಾವು ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳಲು ಪಟ್ಟ ಕಷ್ಟ ಸೇರಿದಂತೆ ಬದುಕಿನ ಹಲವು ವಿಚಾರಗಳ ಬಗ್ಗೆ ಮಾತನಾಡಲಿದ್ದಾರಂತೆ.
ಈ ಶೋ ಜನವರಿ 28 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ. ಈ ಕುರಿತು ಇನ್ ಸ್ಟಾಗ್ರಾಂನಲ್ಲಿ ಕಪಿಲ್ ಶರ್ಮಾ ವಿವರವಾದ ವಿಡಿಯೋವೊಂದನ್ನು ಶೇರ್ ಮಾಡಿ ಮಾಹಿತಿನೀಡಿದ್ದಾರೆ. ನಾನು 25 ವರ್ಷಗಳಿಂದ ಹಾಸ್ಯ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ವಾಸ್ತವವಾಗಿ ನಾನು ಹಾಸ್ಯವನ್ನು ನಾನು ಎಂದಿಗೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಏಕೆಂದರೆ ಪಂಜಾಬಿಗಳಾದ ನಾವು ಯಾವಾಗಲೂ ತಮಾಷೆ ಮಾಡುತ್ತಲೇ ಇರುತ್ತೇವೆ. ನಮಗಿದು ಸ್ವಾಭಾವಿಕ ಗುಣ. ಆದರೆ ಹಾಸ್ಯ ಮಾಡಿದ್ದಕ್ಕೂ ಹಣ ಸಿಗುತ್ತೆ ಎಂದು ಗೊತ್ತಿರಲಿಲ್ಲ. ಆದರೆ ಬದುಕು ಅದನ್ನು ಕಲಿಸಿಕೊಟ್ಟಿತು ಎಂದಿದ್ದಾರೆ.
ಒಬ್ಬ ಕಲಾವಿದನಿಗೆ ತಾನು ಇಷ್ಟೇ ಅಲ್ಲದೇ ಬದುಕಿನಲ್ಲಿ ಇನ್ನೂ ಏನಾದರೂ ಮಾಡಬೇಕೆಂಬ ಆಶಯವೊಂದು ಒಳಧ್ವನಿಯಂತೆ ಕೇಳಿಬರುತ್ತಲೇ ಇರುತ್ತದೆ. ನಾನು ಅಂತಹುದೇ ಧ್ವನಿ ಗೆ ಸ್ವರವಾಗುತ್ತಿದ್ದೇನೆ. ಅದರೊಂದಿಗೆ ನೆಟ್ ಫ್ಲಿಕ್ಸ್ ನವರು ನನ್ನ ಕಥೆಯನ್ನು ಕೇಳಲು ಆಸಕ್ತಿ ಹೊಂದಿದ್ದಾರೆ ಎಂದು ಕಪಿಲ್ ಹೇಳಿದ್ದಾರೆ. ಹಾಸ್ಯದಿಂದಲೇ ಗುರುತಿಸಿಕೊಂಡ ಕಪಿಲ್ ಶರ್ಮಾ, ಹಿಂದೊಮ್ಮೆ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಟ್ವೀಟ್ ಮಾಡಿ ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.
ಕಪಿಲ್ ಶರ್ಮಾ ಮುಂಬೈನಲ್ಲಿ ಕಚೇರಿಯೊಂದನ್ನು ನಿರ್ಮಿಸಲು ಮುಂದಾಗಿದ್ದರು. ಮುಂಬೈ ಮಹಾನಗರ ಪಾಲಿಕೆಯವರು ಲಂಚ ಕೇಳಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಕಪಿಲ್ ಶರ್ಮಾ ಮಧ್ಯರಾತ್ರಿ ಕಳೆದ ಐದು ವರ್ಷಗಳಿಂದ ನಾನು 15 ಕೋಟಿ ತೆರಿಗೆ ಕಟ್ಟಿದ್ದೇನೆ. ಆದರೂ ನನ್ನಿಂದ ಮುಂಬೈ ಪಾಲಿಕೆ ಅಧಿಕಾರಿಗಳು 5 ಲಕ್ಷ ಲಂಚಕೇಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ನಿಂದ ಕಪಿಲ್ ಶರ್ಮಾ ಸಾಕಷ್ಟು ಸಂಕಷ್ಟ ಎದುರಿಸಿದ್ದರು. ಮಹಾರಾಷ್ಟ್ರ ಸರ್ಕಾರ ಕಪಿಲ್ ಶರ್ಮಾ ವಿರುದ್ಧ ಸಮರ ಸಾರಿದ್ದಲ್ಲದೇ ಅವರ ಕಚೇರಿ ನಿರ್ಮಾಣಕ್ಕೂ ಅಡ್ಡಿ ಉಂಟು ಮಾಡಿತ್ತು. ಅಲ್ಲದೇ ಕಪಿಲ್ ನಿವಾಸದ ಮೇಲೆ ಆದಾಯ ತೆರಿಗೆ ದಾಳಿ ಕೂಡ ನಡೆದಿತ್ತು. ಈಗ ಈ ಎಲ್ಲ ಅನುಭವಗಳನ್ನು ಕಪಿಲ್ ಶರ್ಮಾ ತಮ್ಮ ಅನುಭವದ ಕಥನವನ್ನು ನೆಟ್ ಫ್ಲಿಕ್ಸ್ ಜೊತೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ : ಸಾಗರ ತೀರದಲ್ಲಿ ಸ್ವೀಟಿ : ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ ರಾಧಿಕಾ ಕುಮಾರಸ್ವಾಮಿ
ಇದನ್ನೂ ಓದಿ : ಸೂಪರ್ ಮಚ್ಚಿ ಅಂದ್ರು ರಚ್ಚು: ರಚಿತಾರಾಮ್ ಅಭಿಮಾನಿಗಳಿಗೆ ಸಂಕ್ರಾಂತಿ ಗೆ ಸಿಹಿಸುದ್ದಿ
(Comedy Nights With Life On Netflix Kapil Sharma)