ಸರಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಹಾಜರಾತಿ : ವಿಕಲಚೇತನರು, ಗರ್ಭಿಣಿಯರಿಗೆ Work From Home

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಲೇ ಇದೆ. ಹೀಗಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿಗೊಳಿಸಿದೆ. ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಜೊತೆಗೆ ವರ್ಕ್ ಫ್ರಂ ಹೋಂ (Work From Home) ಗೂ ಅದೇಶ ಹೊರಡಿಸಿದೆ. ಎಲ್ಲಾ ಸಾರ್ವಜನಿಕ ಸೇವೆಗಳಿಗೂ ನಿರ್ಬಂಧ ಹೇರಿರುವ ಸರ್ಕಾರಿ ಇದೀಗ ಸರಕಾರಿ ಕಚೇರಿಗಳಿಗೂ ವರ್ಕ್ ಫ್ರಂ ಹೋಂ ಹಾಗೂ ಶೇಕಡಾ 50 ರಷ್ಟು ಹಾಜರಾತಿಗೆ (New Order) ಸೂಚಿಸಿದೆ.

ರಾಜ್ಯ ಸರ್ಕಾರ ಕೊರೋನಾ ಹಾಗೂ ಓಮೈಕ್ರಾನ್ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಚಿವಾಲಯದಲ್ಲಿ ಅಗತ್ಯ ಸೇವೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಇಲಾಖೆ ಹಾಗೂ ಉದ್ಯೋಗಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಇಲಾಖೆಗಳಲ್ಲಿ ವರ್ಕ್ ಫ್ರಂ ಹೋಂ ಹೋಂ ಹಾಗೂ ಶೇಕಡಾ ಐವತ್ತರ ಷ್ಟು ಹಾಜರಾತಿಗೆ ಸರ್ಕಾರ ಸೂಚಿಸಿದೆ.

ತುರ್ತು ಸೇವೆ ಬಿಟ್ಟು ಉಳಿದ ಇಲಾಖೆಯ ಬಿ, ಸಿ ಮತ್ತು ಡಿ ದರ್ಜೆಯ ಶೇಕಡ ೫೦ ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ರಾಜ್ಯದ ಅಗತ್ಯ ಸೇವೆಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಿಭಾಗದ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಬೇಕು. ಉಳಿದ ಇಲಾಖೆಗಳಲ್ಲಿ ಎ ದರ್ಜೆಯ ಅಧಿಕಾರಿಗಳು ಉದ್ಯೋಗಕ್ಕೆ ಬರಬೇಕು ಎಂದು ಆದೇಶಿಸಲಾಗಿದೆ.

ಇನ್ನು ಉದ್ಯೋಗಿಗಳಿಗೆ ಕಚೇರಿ ಹಾಜರಾತಿಗೆ ವಿನಾಯ್ತಿ‌ ನೀಡಲಾಗಿದ್ದರೂ ಆಯಾ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಮುಖ್ಯಸ್ಥರು ಅಗತ್ಯತೆಯ ಮೇಲೆ ಸೂಚಿಸಿದಲ್ಲಿ ಅಂತಹ ಅಧಿಕಾರಿಗಳು ಕಚೇರಿಗೆ ಹಾಜರಾಗುವುದು ಅನಿವಾರ್ಯವಾಗಲಿದೆ. ಇನ್ನು ಕೊರೋನಾ ಹಾಗೂ ಓಮೈಕ್ರಾನ್ ಸೋಂಕಿನ ಹಿನ್ನೆಲೆಯಲ್ಲಿ ಅಂಧರು, ವಿಕಲಚೇತನರು, ಗರ್ಭಿಣಿಯರು, ಮಹಿಳಾ ಉದ್ಯೋಗಿಗಳಿಗೆ ಕರ್ತವ್ಯಕ್ಕೆ ಹಾಜರಾಗುವುದರಿಂದ‌ ವಿನಾಯ್ತಿ ನೀಡಲಾಗಿದೆ.

ಇನ್ನು ಖಾಸಗಿ ಕಂಪನಿಗಳಿಗೂ ಹಾಗೂ ಐಟಿಬಿಟಿ ಸೆಕ್ಟರ್ ಗೂ ವರ್ಕ್ ಫ್ರಂ ಹೋಂ ಮುಂದುವರೆಸುವಂತೆ ಸರ್ಕಾರ ಸೂಚಿಸಿದ್ದು, ಕೈಗಾರಿಕೆ,ಕಾರ್ಖಾನೆ, ಐಟಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಎರಡು ಡೋಸ್ ವಾಕ್ಸಿನ್ ಕಡ್ಡಾಯಗೊಳಿಸಿದ್ದು, ಒಂದೊಮ್ಮೆ ನಿಯಮ ತಪ್ಪಿ ವಾಕ್ಸಿನ್ ಪಡೆಯದವರನ್ನು ಕೆಲಸಕ್ಕೆ ಬಳಸಿಕೊಂಡು ಕೊರೋನಾ ಹಾಗೂ ಓಮೈಕ್ರಾನ್ ನಂತಹ ಸಂಕಷ್ಟ ಎದುರಾದಲ್ಲಿ ಕಂಪನಿ ವಿರುದ್ಧ ವಿಪತ್ತು ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ.

ಇದನ್ನೂ ಓದಿ :  ಓಮಿಕ್ರಾನ್​ ರೂಪಾಂತರಿ ಅಟ್ಟಹಾಸಕ್ಕೆ ದೇಶದಲ್ಲಿ ಮೊದಲ ಬಲಿ

ಇದನ್ನೂ ಓದಿ : ಕರ್ನಾಟಕದಲ್ಲಿಂದು 4,246 ಕೊರೊನಾ ಪ್ರಕರಣ : ಬೆಂಗಳೂರು, ದ.ಕ., ಉಡುಪಿಯಲ್ಲಿ ಕೊರೊನಾ ಸ್ಪೋಟ

(50 per cent attendance at Karnataka government offices: physical Disabilities, Pregnant Women’s in work from home)

Comments are closed.