ಸೋಮವಾರ, ಏಪ್ರಿಲ್ 28, 2025
HomeCinemaPriyanka chopra: ಬಿಕನಿಯಲ್ಲಿ ಪಿಗ್ಗಿ: ಪಡ್ಡೆಗಳ ನಿದ್ದೆ ಕದ್ದ ಬಾಲಿವುಡ್-ಹಾಲಿವುಡ್ ಬೆಡಗಿ ಪ್ರಿಯಾಂಕಾ

Priyanka chopra: ಬಿಕನಿಯಲ್ಲಿ ಪಿಗ್ಗಿ: ಪಡ್ಡೆಗಳ ನಿದ್ದೆ ಕದ್ದ ಬಾಲಿವುಡ್-ಹಾಲಿವುಡ್ ಬೆಡಗಿ ಪ್ರಿಯಾಂಕಾ

- Advertisement -

ಹಾಲಿವುಡ್ ಚಿತ್ರ ಹಾಗೂ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿರೋ ನಟಿ ಪ್ರಿಯಾಂಕಾ ಚೋಫ್ರಾ  ಮೊನ್ನೆಯಷ್ಟೇ ಶೂಟಿಂಗ್ ಸೆಟ್ ನಲ್ಲಿ ಗಾಯಗೊಂಡು ಸುದ್ದಿಯಾಗಿದ್ದರು. ಈಗ ಬಿಕನಿಯಲ್ಲಿ ಹಾಟ್ ಪೋಟೋಶೇರ್ ಮಾಡೋ ಮೂಲಕ ಪಡ್ಡೆಹೈಕಳ ನಿದ್ದೆ ಕದ್ದಿದ್ದಾರೆ.

ಹಾಲಿವುಡ್ ಸಿನಿಮಾ ಹಾಗೂ ಸೀರಿಸ್ ಶೂಟಿಂಗ್ ಗಾಗಿ ಲಂಡನ್ ನಲ್ಲಿ ಬೀಡುಬಿಟ್ಟಿದ್ದ ಪ್ರಿಯಾಂಕಾ ತಿಂಗಳ ಬಳಿಕ ಅಮೇರಿಕಾದಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ. ಅನೇಕ ತಿಂಗಳ ಬಳಿಕ ಪತಿಯನ್ನು ಭೇಟಿ ಮಾಡಿದ ಪ್ರಿಯಾಂಕಾ ಹಾಲಿಡೇ ಸೆಲಿಬ್ರೇಶನ್ ಪೋಟೋ ಶೇರ್ ಮಾಡಿದ್ದಾರೆ.

ಬಿಕನಿಯಲ್ಲಿ ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ಮೈಚೆಲ್ಲಿರೋ ಪ್ರಿಯಾಂಕಾ ಹಾಗೂ ಕೈಯಲ್ಲಿ ಪೋರ್ಕ್ ಹಿಡಿದಿರೋ ಪ್ರಿಯಾಂಕಾ ಪತಿ ನಿಕ್ ಜೋನ್ಸ್ ಪೋಟೋ ಸಖತ್ ವೈರಲ್ ಆಗಿದ್ದು, ಇದಕ್ಕೆ ಪ್ರಿಯಾಂಕಾ, ಹಾಟ್ ಸ್ನ್ಯಾಕ್ಸ್ ಎಂಬರ್ಥದಲ್ಲಿ ಟೈಟಲ್ ನೀಡಿದ್ದಾರೆ.

ರೆಡ್ ಹಾಟ್ ಬಿಕನಿಯಲ್ಲಿ ಪ್ರಿಯಾಂಕಾ ಶೇರ್ ಮಾಡಿರೋ ಪೋಟೋಗೆ ಲಕ್ಷಾಂತರ ಅಭಿಮಾನಿಗಳು ಲೈಕ್ಸ್  ಒತ್ತಿದ್ದಾರೆ. ಇತ್ತೀಚಿಗಷ್ಟೇ ಪತಿಯ ಹುಟ್ಟುಹಬ್ಬ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಜೋನ್ಸ್, ಇತ್ತಿಚಿಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ತನ್ನ ಪತಿ ದುಬಾರಿ ವೈನ್ ಗಿಫ್ಟ್ ಮಾಡಿದ ಪೋಟೋ ಶೇರ್ ಮಾಡಿದ್ದರು.

ಸಿನಿಮಾ ವಿಚಾರಕ್ಕೆ ಬಂದ್ರೆ ಬಾಲಿವುಡ್ ನಲ್ಲಿ ವೈಟ್ ಟೈಗರ್ ಪ್ರಿಯಾಂಕಾ ಕೊನೆ ಸಿನಿಮಾವಾಗಿದ್ದು, ಬಳಿಕ ಯಾವುದೇ ಸಿನಿಮಾವನ್ನು ಪ್ರಿಯಾಂಕಾ ಒಪ್ಪಿಕೊಂಡಿಲ್ಲ. ಹಾಲಿವುಡ್ ನಲ್ಲಿ ಸಿಟಾಡೆಲ್ ವೆಬ್ ಸೀರಿಸ್, ಟೆಕ್ಸ್ಟ್ ಫಾರ್ ಯೂ, ಮೆಟ್ರಿಕ್ ಮತ್ತು ಸ್ಯಾಮ್ ಹ್ಯೂಘನ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Priyanka Chopra Jonas is Nick Jonas’ ‘Snack’ In This Hot and Cute Picture

RELATED ARTICLES

Most Popular