Buddhadeb Guha : ಖ್ಯಾತ ಬಂಗಾಳಿ ಬರಹಗಾರ ಗುಹಾ ಇನ್ನಿಲ್ಲ

ನವದೆಹಲಿ : ಕೋವಿಡ್‌ ವೈರಸ್‌ ಸೋಂಕು ಹಾಗೂ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಖ್ಯಾತ ಬಂಗಾಳಿ ಲೇಖಕ ಬುದ್ದದೇವ್‌ ಗುಹಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 85 ವರ್ವ ವಯಸ್ಸಾಗಿತ್ತು. ಗುಹಾ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರ.ೆ

ಖ್ಯಾತ ಬಂಗಾಳಿ ಲೇಖಕ ಬುದ್ಧದೇವ್ ಗುಹಾ ಅವರು ಭಾರತದ ಖ್ಯಾತ ಬರಹಗಾರರಲ್ಲಿ ಒಬ್ಬರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಗುಹಾ ಅವರ ಕೊಡುಗೆ ಅಪಾರವಾದುದು ಗುಹಾರವರು ತಮ್ಮ ಕಾದಂಬರಿಯ ಮೂಲಕವೇ ಜನ ಮೆಚ್ಚುಗೆಗಳಿಸಿದ್ದಾರೆ. ಕೊರೊನಾ ವೈರಸ್‌ ಸೋಂಕಿನ ಬೆನ್ನಲ್ಲೇ ಹಲವು ಆರೋಗ್ಯ ಸಮಸ್ಯೆಯಿಂದ ಗುಹಾ ಬಳಲುತ್ತಿದ್ದರು.

ಇದನ್ನೂ ಓದಿ: Modi Mann Ki Baat : ಇಂದು ಮೋದಿ ಮನ್‌ ಕೀ ಬಾತ್ 80ನೇ ಆವೃತ್ತಿ

85 ವರ್ಷದ ಗುಹಾ ಅವರಿಗೆ ಕಳೆದ ಎಪ್ರಿಲ್‌ ತಿಂಗಳಿನಲ್ಲಿ ಕೋವಿಡ್ -19 ಪಾಸಿಟಿವ್‌ ಬಂದಿತ್ತು. ಒಂದು ತಿಂಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚೆಗೆ ಶ್ವಾಸಕೋಶ ಮತ್ತು ಮೂತ್ರದ ಸಮಸ್ಯೆಯಿಂದ ಗುಹಾಅ ವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಬೇಕಾಯಿತು. ಹೃದಯಾಘಾತದಿಂದ ಅವರು ಭಾನುವಾರ ರಾತ್ರಿ 11.30 ರ ಸುಮಾರಿಗೆ ನಿಧನರಾದರು ಎಂದು ಪಿಟಿಐ ವರದಿ ಮಾಡಿದೆ

ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಗುಹಾ, ಜನಪ್ರಿಯ ಮಕ್ಕಳ ಕಥೆಗಳ ಮೂಲಕವೇ ಅತ್ಯಂತ ಜನಪ್ರಿಯ ಬರಹಗಾರರಾಗಿ ಗುರುತಿಸಿಕೊಂಡಿದ್ದರು. ಬಂಗಾಳಿ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಗಳನ್ನು ನೀಡಿರುವ ಗುಹಾ ಅವರ ನಿಧನಕ್ಕೆ ಸಾಹಿತ್ಯ ಲೋಕದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ :Akhilesh mishra:ಬೀದಿಬದಿಯಲ್ಲಿ ಗೋಣಿಚೀಲದ ಮೇಲೆ ಕುಳಿತು ತರಕಾರಿ ಮಾರಿದ ಐಎಎಸ್ ಅಧಿಕಾರಿ: ಪೋಟೋ ವೈರಲ್

Comments are closed.