ಸೋಮವಾರ, ಏಪ್ರಿಲ್ 28, 2025
HomeCinemaGangubai Kathiawadi Alia Bhatt : ಬಾಲಿವುಡ್ ಆಯ್ತು ಈಗ ಹಾಲಿವುಡ್ ಸರದಿ : ಆಲಿಯಾ...

Gangubai Kathiawadi Alia Bhatt : ಬಾಲಿವುಡ್ ಆಯ್ತು ಈಗ ಹಾಲಿವುಡ್ ಸರದಿ : ಆಲಿಯಾ ಭಟ್ ಕೊಟ್ರು ಸಿಹಿಸುದ್ದಿ

- Advertisement -

ಬಾಲಿವುಡ್ ಮೋಸ್ಟ್ ಸಕ್ಸಸ್ ಫುಲ್ ನಟಿ ಅನ್ನೋ ಪಟ್ಟ ಆಲಿಯಾ ಭಟ್ (Gangubai Kathiawadi Alia Bhatt) ಮುಡಿಗೇರಲಾರಂಭಿಸಿದೆ. ಸೌತ್ ಇಂಡಿಯಾ ಸ್ಟಾರ್ ಎನ್ನಿಸಿಕೊಂಡಿರೋ ಆಲಿಯಾ ಭಟ್, ಸದ್ಯ ಎರಡೆರಡು ಬಿಗ್ ಬಜೆಟ್ ಸಿನಿಮಾ ರಿಲೀಸ್ ಗೆ ಕಾದಿದ್ದಾರೆ. ಈಗ ಬಾಲಿವುಡ್ ನಲ್ಲಂತೂ ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi) ಹವಾ ಜೋರಾಗಿದೆ. ಇದರ ಜೊತೆಗೆ ಡಾಲಿವುಡ್ ನಲ್ಲಿ ಆರ್ ಆರ್ ಆರ್ ಕೂಡಾ ಆಲಿಯಾಗೆ ಹೆಗ್ಗಳಿಕೆ ತಂದು ಕೊಡಲು ಸಿದ್ಧವಾಗಿದೆ. ಹೀಗೆ ಬಾಲಿವುಡ್, ಟಾಲಿವುಡ್ ನಲ್ಲಿ ಹೆಸರು ಗಳಿಸಿದ ಆಲಿಯಾಗೆ ಈಗ ಹಲವು ಭಾಷೆಗಳಿಂದ ಆಫರ್ ಬರುತ್ತಲೇ ಇದೆಯಂತೆ.

ಆದರೆ ಆಲಿಯಾ ಭಟ್ ಮಾತ್ರ ಬೇರೆಯದೇ ಲೆಕ್ಕಾಚಾರದಲ್ಲಿದ್ದಾರಂತೆ. ಸದ್ಯ ಬಾಲಿವುಡ್ ಯಶಸ್ಸಿನ ಜೊತೆ ಆಲಿಯಾ ಹಾಲಿವುಡ್ ಗೆ ಹಾರಲಿದ್ದಾರಂತೆ. ಸದ್ಯ ಬಾಲಿವುಡ್ ಸಿನಿಮಾ ದಲ್ಲಿ ಬ್ಯುಸಿಯಾಗಿರೋ ಆಲಿಯಾ ಭಟ್ ಇದಾದ ಬಳಿಕ ಹಾಲಿವುಡ್ ಸಿನಿಮಾಗಳತ್ತ ಮುಖಮಾಡಲು ಸಿದ್ಧತೆ ನಡೆಸಿದ್ದು, ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ.

ಆಲಿಯಾ ಟಾರ್ಗೆಟ್ ನೆಕ್ಸ್ಟ್ ಹಾಲಿವುಡ್ ಎಂಬ ಮಾತಿಗೆ ಬಲ ತುಂಬುವಂತೆ ಸಂದರ್ಶನವೊಂದರಲ್ಲಿ ಆಲಿಯಾ ಅದೇ ನಂಬಿಕೆಯಲ್ಲಿ ಇದ್ದೇನೆ. ಮುಂದೇ ನಾನು ಇದನ್ನೇ ಎದುರು ನೋಡುತ್ತಿದ್ದೇನೆ. ‌ಅದು ಯಾವಾಗ ಆಗುತ್ತೋ ಅವಾಗಲೇ ಆಗೋದು. ಈಗಲೇ ಹಾಲಿವುಡ್ ಸಿನಿಮಾ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಎಲ್ಲಿಯೂ ಕೂಡ ಆಲಿಯಾ ಹಾಲಿವುಡ್ ಎಂಟ್ರಿಯನ್ನು ತಳ್ಳಿಹಾಕಿಲ್ಲ. ಹೀಗಾಗಿ ಬಹುತೇಕ ಆಲಿಯಾ ಹಾಲಿವುಡ್ ಎಂಟ್ರಿ ಫಿಕ್ಸ್ ಎನ್ನಲಾಗ್ತಿದೆ.

ವಿಶ್ವದ ನಾನಾ ಭಾಗಗಳ ಪ್ರತಿಭೆಗಳನ್ನು ಹಾಲಿವುಡ್ ಗೆ ಪರಿಚಯಿಸೋ ಟ್ಯಾಲೆಂಟ್ ಏಜೆನ್ಸಿ ವಿಲಿಯಂ ಮೊರೀಸ್ ಎನ್ಡಿವೋರ್ ಸಂಸ್ಥೆ ಜೊತೆ ಆಲಿಯಾ ಭಟ್, 2021 ರ ಜುಲೈನಲ್ಲಿ ಒಪ್ಪಂದ ಮಾಡಿಕೊಂಡಿದ್ದಾರಂತೆ.ಹೀಗಾಗಿ ಒಂದು ವರ್ಷದ ಹಿಂದೆಯೇ ಆಲಿಯಾ ಹಾಲಿವುಡ್ ಎಂಟ್ರಿ ಬಗ್ಗೆ ಚಿಂತೆ ನಡೆಸಿದ್ದರು ಅನ್ನೋದು ಬಹಿರಂಗವಾಗಿದೆ. ಸದ್ಯ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದರೇ, ರಣ್ ಬೀರ್ ಕಪೂರ್ ಜೊತೆ ನಟಿಸುತ್ತಿರುವ ಬ್ರಹ್ಮಾಸ್ತ್ರ, ರಣವೀರ್ ಸಿಂಗ್ ಜೊತೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಹಾಗೂ ಶಾರೂಖ್ ಜೊತೆಗಿನ ಡಾರ್ಲಿಂಗ್ ಸಿನಿಮಾ ನಿರ್ಮಾಣ ಹಂತದಲ್ಲಿದೆ. ಇದಲ್ಲದೇ ಜ್ಯೂನಿಯರ್ ಎನ್ ಟಿ ಆರ್ ಜೊತೆಗಿನ ಸಿನಿಮಾದಲ್ಲೂ ಆಲಿಯಾ ನಟಿಸಲಿದ್ದಾರಂತೆ.

ಇದನ್ನೂ ಓದಿ : James Film : ಜೇಮ್ಸ್ ಗೆ ಅದ್ದೂರಿ ಸ್ವಾಗತ : ದೇಶದ ಹಲವೆಡೆ ಗ್ರ್ಯಾಂಡ್ ಫ್ರೀ ರಿಲೀಸ್ ಇವೆಂಟ್ ಆಯೋಜಿಸಿದ ಚಿತ್ರತಂಡ

ಇದನ್ನೂ ಓದಿ : Radhika Kumaraswamy video : ಸಂಚಲನ ಮೂಡಿಸಿದೆ ರಾಧಿಕಾ ಕುಮಾರಸ್ವಾಮಿ ಲೈವ್ ವಿಡಿಯೋ

(Bollywood Movie Gangubai Kathiawadi Alia Bhatt Screening, Hollywood movies )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular