Jio Recharge Plans: ಜಿಯೋದಿಂದ ರೂ. 1,499 ಮತ್ತು ರೂ. 4199 ಮೌಲ್ಯದ ಎರಡು ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್ಸ್ಕ್ರಿಪ್ಶನ್ ಪ್ಲಾನ್ ಘೋಷಣೆ

ರಿಲಯನ್ಸ್ ಜಿಯೋ(Reliance Jio) ರೂ. 1,499 ಮತ್ತು ರೂ. 4199 ಮೌಲ್ಯದ ಎರಡು ಹೊಸ ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar Premium) ಪ್ರೀಮಿಯಂ ಸಬ್ಸ್ಕ್ರಿಪ್ಶನ್ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ.ಈ ಬಂಡಲ್ ಆಫರ್‌ನೊಂದಿಗೆ, ಜಿಯೋ ಬಳಕೆದಾರರು ಏಕಕಾಲದಲ್ಲಿ ನಾಲ್ಕು ಡಿವೈಸ್ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಟಿವಿಗಳಲ್ಲಿ 4ಕೆ ಕಂಟೆಂಟ್ ನೋಡಬಹುದು. 1,499 ಮತ್ತು ರೂ. 4,199 ಜಿಯೋ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ಹೆಚ್ಚಿನ ವೇಗದ ಡೇಟಾ ಪ್ರವೇಶ, ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್ ಮತ್ತು ಡೈಲಿ ಎಸ್ ಎಂ ಎಸ್ ಪ್ರಯೋಜನಗಳನ್ನು ಸಹ ಒಳಗೊಂಡಿವೆ.(Jio recharge Plans)

ಜಿಯೋ ರೂ 1,499 ಮತ್ತು ರೂ. 4,199 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಪ್ರಯೋಜನಗಳು
ಹೊಸದಾಗಿ ಬಿಡುಗಡೆಯಾದ ರೂ. 1,499 ಮತ್ತು ರೂ. 4,199 ಜಿಯೋ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ಡಿಸ್ನಿ+ ಹಾಟ್ ಸ್ಟಾರ್ ಪ್ರೀಮಿಯಂ (Disney+ Hotstar Premium) ಸಬ್‌ಸ್ಕ್ರಿಪ್ಶನ್‌ನ ಒಂದು ವರ್ಷದ ಜೊತೆಗೆ ಬರುತ್ತವೆ. ಆದಾಗ್ಯೂ, ಬಂಡಲ್ ಮಾಡಿದ ಸಬ್ಸ್ಕ್ರಿಪ್ಶನ್ ಹೊರತುಪಡಿಸಿ, ಎರಡೂ ಯೋಜನೆಗಳು ವಿಭಿನ್ನ ಪ್ರಯೋಜನಗಳನ್ನು ಹೊಂದಿವೆ. ಆದರೆ ರೂ. 1,499 ಜಿಯೋ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 2ಜಿಬಿ ಹೈ-ಸ್ಪೀಡ್ ದೈನಂದಿನ ಡೇಟಾ ಪ್ರಯೋಜನಗಳನ್ನು ನೀಡುತ್ತದೆ ಮತ್ತು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ರೂ. 4,199 ಜಿಯೋ ಯೋಜನೆಯು 3ಜಿಬಿ ಹೈ-ಸ್ಪೀಡ್ ದೈನಂದಿನ ಡೇಟಾದ ಕೋಟಾದೊಂದಿಗೆ ಬರುತ್ತದೆ ಮತ್ತು 365 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ.

ಬಂಡಲ್ ಮಾಡಿದ ಡೇಟಾ ಪ್ರಯೋಜನಗಳ ಜೊತೆಗೆ, ರೂ. 1,499 ಮತ್ತು ರೂ. 4,199 ಜಿಯೋ ರೀಚಾರ್ಜ್ ಯೋಜನೆಗಳು ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ ಮತ್ತು ಡೈಲಿ 100 ಎಸ್ ಎಂ ಎಸ್ ಬರುತ್ತವೆ. ಯೋಜನೆಗಳು ಜಿಯೋ ಅಪ್ಲಿಕೇಶನ್‌ಗಳಿಗೆ ಸಬ್ಸ್ಕ್ರಿಪ್ಶನ್ ಸಹ ನೀಡುತ್ತವೆ. ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್ಸ್ಕ್ರಿಪ್ಶನ್ ಸೇರ್ಪಡೆಯು ಲೈವ್ ಸ್ಪೋರ್ಟ್ಸ್ ಮತ್ತು ಹಾಟ್‌ಸ್ಟಾರ್ ವಿಶೇಷತೆಗಳಿಗೆ ಪ್ರವೇಶವನ್ನು ತರುತ್ತದೆ. ಟಿವಿ ಧಾರಾವಾಹಿಗಳು, ಚಲನಚಿತ್ರಗಳು, ಡಿಸ್ನಿ+ ಚಲನಚಿತ್ರಗಳು ಇಂಗ್ಲಿಷ್ ಮತ್ತು ಡಬ್ಬಿಂಗ್ ಚಿತ್ರಗಳನ್ನು ವೀಕ್ಷಿಸಬಹುದು. ಇದೆಲ್ಲವನ್ನೂ ನಾಲ್ಕು ಪರದೆಗಳಲ್ಲಿ ಮತ್ತು 4K ಗುಣಮಟ್ಟದಲ್ಲಿ ವೀಕ್ಷಿಸಬಹುದು.


ನೀವು ನಿಮ್ಮ ಜಿಯೋ ಸಂಖ್ಯೆಯನ್ನು ಮೈ ಜಿಯೋ ಅಪ್ಲಿಕೇಶನ್ ಅಥವಾ ಜಿಯೋ ಸೈಟ್ ಮೂಲಕ ನೇರವಾಗಿ ರೀಚಾರ್ಜ್ ಮಾಡಬಹುದು. ರೀಚಾರ್ಜ್ ಯೋಜನೆಗಳು ವಿವಿಧ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಮತ್ತು ಸೈಟ್‌ಗಳ ಮೂಲಕವೂ ಲಭ್ಯವಿವೆ.

ಇದನ್ನೂ ಓದಿ: Face Mask: ಫೇಸ್ ಮಾಸ್ಕ್ ನಲ್ಲಿ ಈ ಸಾಮಗ್ರಿಗಳನ್ನು ಬಳಸಲೇಬೇಡಿ

(Jio recharge plans with Disney+Hotstar premium launched)

Comments are closed.