ಭಾರತೀಯ ಚಿತ್ರರಂಗದಲ್ಲಿಯೇ ಆಲಿಯಾ ಭಟ್ ಅಭಿನಯದ ‘ಸಡಕ್ 2’ ಹೊಸ ದಾಖಲೆ ಸೃಷ್ಟಿಸಿದೆ. ಬಹು ನಿರೀಕ್ಷಿತ ಸಡಕ್-2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಗೆ ನಾಲ್ಕೇ ನಾಲ್ಕು ದಿನದಲ್ಲಿ ಲಕ್ಷ ಲಕ್ಷ ಜನರಿಂದ ಡಿಸ್ಲೈಕ್ಗಳ ಸುರಿಮಳೆ ಹರಿದುಬಂದಿದೆ. ಅತಿ ಹೆಚ್ಚು ಡಿಸ್ಲೈಕ್ ವಿಶ್ವದ ಮೂರನೇ ಹಾಗೂ ಭಾರತದ ಮೊದಲ ಚಿತ್ರವಾಗಿದೆ.
ಸಡಕ್ -2 ಸಿನಿಮಾದ ಟ್ರೈಲರ್ ಬಿಡುಗಡೆಯಾದ ನಾಲ್ಕೇ ನಾಲ್ಕು ದಿನಕ್ಕೆ ಬರೋಬ್ಬರಿ 5.1 ಕೋಟಿ (51 ಮಿಲಿಯನ್ ) ವೀಕ್ಷಣೆಯನ್ನು ಕಂಡಿದ್ರೆ, ಬರೋಬ್ಬರಿ ಒಂದು ಕೋಟಿ ( 10 ಮಿಲಿಯನ್ ) ಮಂದಿ ಡಿಸ್ ಲೈಕ್ ಒತ್ತಿದ್ದಾರೆ. ಈ ಮೂಲಕ ಅತೀ ಹೆಚ್ಚು ಡಿಸ್ ಲೈಕ್ ಪಡೆದ ವಿಶ್ವದ ಮೂರನೇ ಸಿನಿಮಾ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ.

ಯೂಟ್ಯೂಬ್ ಸಂಸ್ಥೆಯೇ ಅಪ್ ಲೋಡ್ ಮಾಡಿರುವ ಎ ರಿವೈಂಡ್ ಆಫ್ ದಿ ಇಯರ್ 2018 ಹಾಡಿಗೆ ಒಟ್ಟು 18.2 ಮಿಲಿಯನ್ ಡಿಸ್ಲೈಕ್ ಪಡೆಯುವ ಮೂಲಕ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದೆ.

ಇನ್ನು ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೇಬರ್ ಅವರ ಬೇಬಿ ಹಾಡಿಗೆ 11 ಮಿಲಿಯನ್ ಡಿಸ್ಲೈಕ್ ಪಡೆದುಕೊಂಡಿದ್ದಾರೆ.
ಇದೀಗ ಸಡಕ್-2 ಚಿತ್ರದ ಟ್ರೈಲರ್ ಭಾರತೀಯ ಚಿತ್ರರಂಗದಲ್ಲಿಯೇ ಅವಕೃಪೆಗೆ ಪಾತ್ರವಾದ ಸಿನಿಮಾಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಬಂದು ನಿಂತಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಸ್ವಜನಪಕ್ಷಪಾತ ವಿಚಾರವಾಗಿ ಆಲಿಯಾ ಭಟ್ ಸೇರಿ ಸಡಕ್ ಚಿತ್ರಕ್ಕೆ ಟ್ರೋಲ್ ಮಾಡಲಾಗುತ್ತಿತ್ತು. ಇದೀಗ ಚಿತ್ರದ ಟ್ರೈಲರ್ ಡಿಸ್ ಲೈಕ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾವನ್ನು ನಿಷೇಧಿಸುವಂತೆಯೇ ನೆಟ್ಟಿಗರು ಧ್ವನಿಗೂಡಿಸಿದ್ದಾರೆ. ಸಡಕ್ 2 ಚಿತ್ರ ಇದೇ ಅಗಸ್ಟ್ 28ಕ್ಕೆ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗಲಿದೆ.