Amir khan – Kareena kapoor khan : 3 ವರ್ಷದ ಬಳಿಕ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಒಂದಾದ ಅಮೀರ್‌ – ಕರೀನಾ

ʼ3 ಈಡಿಯಟ್ಸ್‌ʼ ಹಾಗೂ ʼತಲಾಶ್ʼ ನಂತಹ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ನಂತರ ಮೂರು ವರ್ಷಗಳ ಬಳಿಕ ಅಮೀರ್‌ ಖಾನ್‌ ಹಾಗೂ ಕರೀನಾ ಕಪೂರ್‌ ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾವ ಸಿನಿಮಾ ಅಂತ ಕೇಳುತ್ತಿದ್ದೀರಾ ? ಆ ಸಿನಿಮಾದ ಹೆಸರು ಲಾ‌ಲ್ ಸಿಂಗ್ ಚಡ್ಡಾ.

ಅಮೀರ್‌ ಖಾನ್ ಹಾಗೂ ಲಾಲ್ ಸಿಂಗ್ ಚಡ್ಡಾ ಚಿತ್ರತಂಡವು ಕಳೆದ ಎರಡು ವರ್ಷಗಳಿಂದ ಭಾರೀ ಕಷ್ಟಪಟ್ಟಿರುವುದಾಗಿ ನಟಿ ಕರೀನಾ ಕಪೂರ್‌ ತಿಳಿಸಿದ್ದಾರೆ. ಹಾಲಿವುಡ್ ಚಿತ್ರ ಫಾರೆಸ್ಟ್‌ ಗಂಪ್‌ನಿಂದ ಸ್ಪೂರ್ತಿ ಪಡೆದ ಚಿತ್ರವಾದ ಲಾ‌ಲ್ ಸಿಂಗ್ ಚಡ್ಡಾದ ಚಿತ್ರೀಕರಣವು 2019ರಲ್ಲಿ ಆರಂಭಗೊಂಡಿತು.

ಇದನ್ನೂ ಓದಿ: Neena Gupta : ವೈದ್ಯರು ಮತ್ತು ಟೈಲರ್ ನಿಂದ ಕಿರುಕುಳಕ್ಕೆ ಒಳಗಾಗಿದ್ದೆ : ನಟಿ ನೀನಾ ಗುಪ್ತಾ

ಕೊರೋನಾ ಸಾಂಕ್ರಮಿಕ ರೋಗದ ಕಾರಣದಿಂದಾಗಿ ನಿರ್ಮಾಣ ಕಾರ್ಯ ನಿಧಾನವಾಗಿ ಸಾಗಿದೆ. ತಮ್ಮದೇ ಬ್ಯಾನರ್‌ನಡಿ ಚಿತ್ರವನ್ನು ನಿರ್ಮಿಸುತ್ತಿರುವ ಅಮೀರ್‌ ಖಾನ್‌ ಕುರಿತು ಮಾತನಾಡಿದ ಕರೀನಾ ಕಪೂರ್‌, ʼ3 ಈಡಿಯಟ್ಸ್‌ʼ ಹಾಗೂ ʼತಲಾಶ್ʼ ಆದ ಮೇಲೆ ಮೂರು ವರ್ಷಗಳ ಬಳಿಕ ನಾವಿಬ್ಬರೂ ಜೊತೆಯಾಗಿ ನಟಿಸುತ್ತಿರುವುದು ನನಗೆ ಬಹಳ ಖುಷಿ ಕೊಟ್ಟಿದೆ ಎಂದಿದ್ದಾರೆ.

ಲಾ‌ಲ್ ಸಿಂಗ್ ಚಡ್ಡಾ ಬಹಳ ವಿಶೇಷವಾದ ಸಿನಿಮಾ. ನಾವು ಈ ಸಿನಿಮಾವನ್ನು ಮಾಡಲು ಬಹಳ ಕಷ್ಟಪಟ್ಟಿದ್ದೇವೆ. ಅದರಲ್ಲೂ ಅಮೀರ್‌ ಬಹಳ ಪ್ರಯತ್ನ ನಡೆಸಿದ್ದಾರೆ. ಚಿತ್ರದ ಸ್ಕ್ರಿಪ್ಟ್‌ ಅದ್ಭುತವಾಗಿದ್ದು, ಪ್ರತಿಯೊಬ್ಬರೂ ಇಷ್ಟಪಡುವಂತೆ ತೆರೆಯ ಮೇಲೆ ಬರಲಿ ಎಂದು ಆಶಿಸುತ್ತೇನೆ,” ಎಂದು ಕರೀನಾ ಹೇಳಿದ್ದಾರೆ.

ಇದನ್ನೂ ಓದಿ: Prabhas : ಭಾರತೀಯ ಸಿನಿಮಾರಂಗದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ನಟ ಪ್ರಭಾಸ್‌ : ‘ಸ್ಪಿರಿಟ್’ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ?

ಕೋವಿಡ್‌ ನಡುವೆಯೇ ದೆಹಲಿಯಲ್ಲಿ ನನ್ನ ಭಾಗದ ಚಿತ್ರೀಕರಣ ಮುಗಿಸಿದ್ದೇವೆ. ಮಾರ್ಗಸೂಚಿಗಳನ್ನು ಈಡಿ ಚಿತ್ರ ತಂಡ ಸರಿಯಾಗಿ ಪಾಲಿಸಿದೆ. ಆತ್ಮವಿಶ್ವಾಸದಿಂದಲೇ ಕೆಲವೇ ಜನಗಳ ನಡುವೆಯೇ ಶೂಟಿಂಗ್ ಪೂರೈಸಿದ್ದೇನೆ,” ಎಂದಿದ್ದಾರೆ ಕರೀನಾ. ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದ ಲಾಲ್ ಸಿಂಗ್ ಚಡ್ಡಾದ ಬಿಡುಗಡೆಯನ್ನು ಫೆಬ್ರವರಿಯಲ್ಲಿ ಪ್ರೇಮಿಗಳ ದಿನಾಚರಣೆಗೆ ಮುಂದೂಡಲಾಗಿದೆ.

(After 3 years, Aamir- Kareena, one of lal singh chadda films)

Comments are closed.