Anushka Sharma : ನಮ್ಮ ಫೋಟೋ, ಜೀವನಕ್ಕೆ ಯಾವುದೇ ಫಿಲ್ಟರ್ ಅಗತ್ಯವಿಲ್ಲ ಎಂದ ಅನುಷ್ಕಾ ಶರ್ಮಾ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಜನ್ಮದಿನವಾದ ಇಂದು ಹೆಚ್ಚಿನ ವಿರಾಟ್‌ ಅಭಿಮಾನಿಗಳು ಇಂದು ಕೊಹ್ಲಿಗೆ ಶುಭಾಶಯವನ್ನು ಕೋರಿದ್ದಾರೆ. ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ಆಗಿರು ಅನುಷ್ಕಾ ಶರ್ಮಾ ತಮ್ಮ ಪತಿಯಾದ ವಿರಾಟ್ ಕೊಹ್ಲಿಗೆ ಜನ್ಮದಿನದಂದು ಭರವಸೆಯ ಮಾತುಗಳನ್ನಾಡಿ ವಿರಾಟ್ ಗೆ ಹುಟ್ಟು ಶುಭಾಶಯ ಕೋರಿದ್ದಾರೆ.

ನವೆಂಬರ್ 5 ರಂದು ತಮ್ಮ ಜನ್ಮದಿನವನ್ನು ಆಚರಿಸುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಜೊತೆ ಸುಮಾರು 4 ವರ್ಷಗಳ ಕಾಲ ಡೇಟಿಂಗ್‌ ಮಾಡಿ ನಂತರ ಮದುವೆಯಾದರು. ‘ವಿರುಷ್ಕಾ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಜೋಡಿ ಒಂಬತ್ತು ತಿಂಗಳ ಮಗಳು ವಮಿಕಾಗೆ ಹೆಮ್ಮೆಯ ಪೋಷಕರು.

ಇದನ್ನೂ ಓದಿ: Natasa Stankovic : ಹಾರ್ದಿಕ್ ಹಾಫ್ ಶರ್ಟ್ ಹಾಟ್ ಪೋಟೋ ವೈರಲ್ : ಗಮನಸೆಳೆದ ನತಾಶಾ

ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂದರ್ಭದಲ್ಲಿ ಅನುಷ್ಕಾ ಪ್ರೀತಿ ತುಂಬಿದ ಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ದಂಪತಿಗಳು ಕಡಲತೀರದಲ್ಲಿ ಪೋಸ್ ನೀಡುವುದನ್ನು ಕಾಣಬಹುದು. ಈ ಫೋಟೋ ಹಂಚಿಕೊಂಡು ಅನುಷ್ಕಾ “ಈ ಫೋಟೋ ಮತ್ತು ನಿಮ್ಮ ಜೀವನವನ್ನು ನೀವು ನಡೆಸುವ ರೀತಿಗೆ ಯಾವುದೇ ಫಿಲ್ಟರ್ ಅಗತ್ಯವಿಲ್ಲ.

ನಿಮ್ಮ ಪ್ರಾಮಾಣಿಕತೆ ಉಕ್ಕಿನ ಧೈರ್ಯದಿಂದ ಮಾಡಲ್ಪಟ್ಟಿದೆ. ತಮ್ಮನ ತಾವು ಕತ್ತಲೆಯ ಲೋಕದಿಂದ ಮೇಲೆತ್ತಿಕೊಳ್ಳುವ ಧೈರ್ಯ ನಿಮ್ಮಂತೆ ನಾನು ಯಾರನ್ನು ನೋಡಿಲ್ಲ. ನೀವು ಎಲ್ಲ ರೀತಿಯಲ್ಲೂ ಉತ್ತಮವಾಗಿ ಬೆಳೆಯುತ್ತೀರಿ ಏಕೆಂದರೆ ನೀವು ನಿಮ್ಮಲ್ಲಿ ಯಾವುದನ್ನೂ ಶಾಶ್ವತವೆಂದು ಹಿಡಿದಿಟ್ಟು ಕೊಳ್ಳುವುದಿಲ್ಲ ಮತ್ತು ನಿರ್ಭೀತರಾಗಿದ್ದೀರಿ.

ಇದನ್ನೂ ಓದಿ: Rashmika Mandanna : ಮತ್ತೊಂದು ಸಿಹಿ ಸುದ್ದಿ ಕೊಟ್ಟ ರಶ್ಮಿಕಾ : ತೆರೆಗೆ ಬರ್ತಿದೆ ಮಿಷನ್ ಮಜ್ನು

ಕೆಲವೊಮ್ಮೆ ನಾನು ಕಿರುಚಲು ಬಯಸುತ್ತೇನೆ ಮತ್ತು ನೀವು ಎಂತಹ ಅದ್ಭುತ ವ್ಯಕ್ತಿ ಅದೃಷ್ಟವಂತರು ಎಂದು ಜಗತ್ತಿಗೆ ಹೇಳಲು ಬಯಸುತ್ತೇನೆ. ಎಲ್ಲವನ್ನೂ ಪ್ರಕಾಶಮಾನವಾಗಿ ಮತ್ತು ಹೆಚ್ಚು ಸುಂದರಗೊಳಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಅನುಷ್ಕಾ ಶರ್ಮಾ ತಮ್ಮ ಪತಿಯನ್ನು ಹೊಗಳಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ತಿಳಿಸಿದ್ದಾರೆ.

(Anushka Sharma says no filter is required for our photo, life)

Comments are closed.