ಬಾಲಿವುಡ್ ನ ಹಿರಿಯ ಸಿನಿ ನಿರ್ದೇಶನ ಮಹೇಶ್ ಭಟ್ 73 ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ವಿಶೇಷ ದಿನವನ್ನು ಮಹೇಶ್ ಭಟ್ ಪುತ್ರಿಯರಾದ ಆಲಿಯಾ ಹಾಗೂ ಪೂಜಾ ವಿಶೇಷವಾಗಿ ಸೆಲಿಬ್ರೇಟ್ ಮಾಡಿದ್ದು,ಆಲಿಯಾ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಿಂಪ್ಲಿಸಿಟಿ ಹಾಗೂ ಹ್ಯಾಪಿ ಬರ್ತಡೇ ಪಾಪ್ಸ್ ಎಂಬ ಬಲೂನ್ ಗಳಿಂದ ಅಲಂಕರಿಸಲಾದ ಟೇಬಲ್ ನಲ್ಲಿ ಮಹೇಶ್ ಭಟ್ ಕೇಕ್ ಕತ್ತರಿಸಿದ್ದಾರೆ. ಈ ಸಂಭ್ರಮಕ್ಕೆ ಪುತ್ರಿಯರಾದ ಆಲಿಯಾ ಭಟ್ ಹಾಗೂ ಪೂಜಾ ಭಟ್ ಸಾಕ್ಷಿಯಾಗಿದ್ದು, ಆಲಿಯಾ ಬಾಯ್ ಪ್ರೆಂಡ್ ರಣಬೀರ್ ಕಪೂರ್ ಕೂಡ ಮಾವನ ಬರ್ತಡೇ ಎಂಜಾಯ್ ಮಾಡಿದ್ದಾರೆ.

ಮಹೇಶ್ ಭಟ್ ಪತ್ನಿ ಸೋನಿ ರಾಜದಾನ್ ಹಾಗೂ ಆಕೆಯ ಪುತ್ರಿ ಶಾಹೀನ್ ವಿಡಿಯೋ ಕಾಲ್ ಮೂಲಕ ಮಹೇಶ್ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು ಶುಭಹಾರೈಸಿದ್ದಾರೆ.
73 ವರ್ಷದ ಯುವಕ ಎಂಬರ್ಥದಲ್ಲಿ ಇನ್ ಸ್ಟಾಗ್ರಾಂನಲ್ಲಿ ತಂದೆಗೆ ಬರ್ತಡೇ ವಿಶ್ ಮಾಡಿರೋ ಆಲಿಯಾ ಹ್ಯಾಪಿ ಬರ್ತಡೇ ಪಪ್ಪಾ ಎಂದಿದ್ದಾರೆ. ಜೊತೆಗೆ ಮಹೇಶ್ ಭಟ್, ಆಲಿಯಾ ಪೂಜಾ ಹಾಗೂ ರಣಬೀರ್ ಕಪೂರ್ ಜೊತೆಗಿರೋ ಪೋಟೋ ಎಲ್ಲರ ಗಮನಸೆಳೆಯುತ್ತಿದೆ.
ಇನ್ನು ತಂದೆ ಬರ್ತಡೇ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ನಟಿ ಹಾಗೂ ನಿರ್ದೇಶಕ ಪೂಜಾ ಭಟ್ ಕೂಡ ತಂದೆಗೆ ಶುಭಹಾರೈಸಿದ್ದು, ತಂಗಿಯನ್ನು ಸೆಟ್ಟಿಂಗ್ ಗರ್ಲ್ ಎಂದು ಕರೆದು ಕಿಚಾಯಿಸಿದ್ದಾರೆ.
(bollywood director mahesh bhatts 73 rd birthday)