Mangalore : ಶಿಕ್ಷಕ ತರಬೇತಿ ಕೇಂದ್ರದಲ್ಲಿ ತಲ್ವಾರ್‌ ದಾಳಿ : ಮೂವರು ಆಸ್ಪತ್ರೆಗೆ ದಾಖಲು

ಮಂಗಳೂರು : ಅಪರಿಚಿತ ದುಷ್ಕರ್ಮಿಯೋರ್ವ ಮಂಗಳೂರು ನಗರದಲ್ಲಿರುವ ಶಿಕ್ಷಕರ ತರಬೇತಿ ಸಂಸ್ಥೆ (ಡಯಟ್‌) ಯೊಳಗೆ ನುಗ್ಗಿದ್ದಾನೆ. ಈ ವೇಳೆಯಲ್ಲಿ ಡಯಟ್‌ನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ತಲ್ವಾರ್‌ ನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಿಂದಾಗಿ ಮೂವರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಡಯಟ್‌ ಒಳಗೆ ಬಂದಿದ್ದ ವ್ಯಕ್ತಿಯೋರ್ವ ಲೆಕ್ಟರರ್‌ ಹೆಸರು ಕೇಳಿದ್ದಾನೆ. ಆದರೆ ಲೆಕ್ಟರರ್‌ ಯಾರೂ ಅನ್ನೋದು ಅಲ್ಲಿದ್ದ ಸಿಬ್ಬಂದಿಗೆ ಗೊತ್ತೇ ಆಗಲಿಲ್ಲ. ಆ ಬಳಿಕ ಅವರಿಗೆ ಒಂದು ಗಿಫ್ಟ್‌ ನೀಡಬೇಕು ಎಂದು ಹೇಳಿ ತನ್ನ ಬಳಿಯಲ್ಲಿದ್ದ ಮಚ್ಚನ್ನು ಸಿಬ್ಬಂದಿಗಳ ಮೇಲೆ ಬೀಸಿದ್ದಾನೆ. ಘಟನೆಯಲ್ಲಿ ಸಿಬ್ಬಂದಿಗಳಾದ ನಿರ್ಮಲಾ, ರೀನಾ ರಾಯ್‌ ಹಾಗೂ ಗುಣವತಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರು ಕೂಡ ಡಯಟ್‌ನಲ್ಲಿ ಎಫ್‌ಡಿಎ, ಸ್ಟೆನ್ನೋಗ್ರಾಫರ್‌ ಮತ್ತು ಡಿ ಗ್ರೂಪ್‌ ನೌಕರರಾಗಿದ್ದಾರೆ.

ಘಟನೆಯ ಬೆನ್ನಲ್ಲೇ ಸಮೀಪದಲ್ಲಿದ್ದ ಜೈಲು ಸಿಬ್ಬಂದಿಗಳು ಅಪರಿಚಿತ ವ್ಯಕ್ತಿಯನ್ನು ಸೆರೆ ಹಿಡಿದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ಯಾರೂ, ಯಾವ ಉದ್ದೇಶಕ್ಕಾಗಿ ಹೀಗೆ ಮಾಡಿದ್ದೇನೆ ಅನ್ನೋ ಬಗ್ಗೆ ಬಾಯ್ಬಿಟ್ಟಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಎನ್.‌ ಶಶಿಕುಮಾರ್‌ ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಗಾಯಗೊಂಡಿರುವ ಮಹಿಳಾ ಸಿಬ್ಬಂದಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೂವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : 5000 Teachers Appointment : ರಾಜ್ಯದಲ್ಲಿ ಐದು ಸಾವಿರ ಶಿಕ್ಷಕರ ನೇಮಕ : ಸಚಿವ ಬಿ.ಸಿ.ನಾಗೇಶ್‌

ಇದನ್ನೂ ಓದಿ : ಯುವತಿ ಹೆಸರಲ್ಲಿ ಯುವಕರಿಗೆ ಪಾಕ್ ISI ಗಾಳ : ಫೇಸ್‌ಬುಕ್‌ನಲ್ಲಿ ಮಿಲಿಟರಿ ಮಾಹಿತಿ ಲೀಕ್ ಮಾಡಿದ್ದಾತ ಅರೆಸ್ಟ್‌

( Talwar attack on teacher training center: Three ladies employees hospitalized )

Comments are closed.