ಭಾನುವಾರ, ಏಪ್ರಿಲ್ 27, 2025
HomeCinemaKanganaranaut: ತಲೈವಿ ರಿಲೀಸ್ ಗೂ ಮುನ್ನ ಜಯಲಲಿತಾ ಸಮಾಧಿಗೆ ಭೇಟಿ ನೀಡಿದ ಕಂಗನಾ ರನಾವುತ್.

Kanganaranaut: ತಲೈವಿ ರಿಲೀಸ್ ಗೂ ಮುನ್ನ ಜಯಲಲಿತಾ ಸಮಾಧಿಗೆ ಭೇಟಿ ನೀಡಿದ ಕಂಗನಾ ರನಾವುತ್.

- Advertisement -

ಸಿನಿಮಾಗಳಲ್ಲಿ ನಟಿಸೋ ನಟ-ನಟಿಯರು ಸಿನಿಮಾ ಗೆಲುವಿಗೂ ಅಷ್ಟೇ ಗಿಮಿಕ್ ಮಾಡುತ್ತಾರೆ. ತಮಿಳುನಾಡಿನ ತಲೈವಿ ಜಯಲಲಿತಾ ಬಯೋಗ್ರಫಿಯಲ್ಲಿ ನಟಿಸಿರೋ ಬಾಲಿವುಡ್ ನಟಿ ಕಂಗನಾ ರನಾವುತ್ ಸಿನಿಮಾಗೂ ರಿಲೀಸ್ ಗೂ ಮುನ್ನ ಅಮ್ಮಾ ಸಮಾಧಿ ದರ್ಶನ ಪಡೆದಿದ್ದಾರೆ.

ಸಪ್ಟೆಂಬರ್ ನಾಲ್ಕರಂದು ಚೈನೈಗೆ ಆಗಮಿಸಿದ ಕಂಗನಾ ರನಾವುತ್ ಮರೀನಾ ಬೀಚ್ ಬಳಿ ಇರುವ ತಮಿಳುನಾಡಿನ ಮಾಜಿಸಿಎಂ ಜಯಲಲಿತಾ ಸಮಾಧಿಗೆ ಭೇಟಿ ನೀಡಿದ್ದಾರೆ. ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿ ನಮಸ್ಕರಿಸಿ ಗೌರವ ಸಲ್ಲಿಸಿದ್ದಾರೆ.

ಕೇಸರಿ ಬಣ್ಣದ ಸೀರೆಯಲ್ಲಿ ಕಂಗನಾ ಮಿಂಚಿದ್ದಾರೆ. ನಟಿ ಕಂಗನಾಗೆ ಚಿತ್ರತಂಡದ ಹಲವು ಸದಸ್ಯರು ಸಾಥ್ ನೀಡಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ವಿಳಂಬಗೊಂಡಿದ್ದ ತಲೈವಿ ಸಿನಿಮಾ ಸಪ್ಟೆಂಬರ್  10 ರಂದು ತೆರೆಗೆ ಬರಲಿದೆ.

ತಲೈವಿ ಟೀಸರ್ ಹಾಗೂ ಹಾಡುಗಳು ಚಿತ್ರದ ಮೇಲಿನ ನೀರಿಕ್ಷೆ ದುಪ್ಪಟ್ಟುಗೊಳಿಸಿದ್ದು, ಇತ್ತೀಚಿಗಷ್ಟೇ ಸಿನಿಮಾ ಸಿಬಿಎಫ್ ಸಿ ಸೆನ್ಸಾರ್ ಮುಗಿಸಿದ್ದು, ಚಿತ್ರಕ್ಕೆ ಯು ಪ್ರಮಾಣ ಪತ್ರ ಸಿಕ್ಕಿದೆ. ಹಿಂದಿ,ತೆಲುಗು,ತಮಿಳು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ತಮಿಳುನಾಡಿನ ಜನರು ತಮ್ಮ ಆರಾಧ್ಯ ದೇವತೆಯ ಸಿನಿಮಾ ನೋಡಲು ಕಾತುರರಾಗಿದ್ದಾರೆ.

ಕಂಗನಾ ತಲೈವಿ ಸಮಾಧಿಗೆ ಪೂಜೆ ಸಲ್ಲಿಸುತ್ತಿರುವ ಪೋಟೋಗಳು ಸಖತ್ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪೋಟೋ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

ಕೆ.ವಿ.ವಿಜಯ್ ಪ್ರಸಾದ್ ಕಥೆ ಬರೆದಿದ್ದು, ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ನಟಿಸಿದ್ದಾರೆ. ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಖ್ಯಾತನಾಮರು ಚಿತ್ರದಲ್ಲಿ ನಟಿಸಿದ್ದಾರೆ.

Actress kangana ranaut visits jayalalithaa-s memorial at marina beach.

RELATED ARTICLES

Most Popular