ಸೋಮವಾರ, ಏಪ್ರಿಲ್ 28, 2025
HomeCinemaಸಿನಿಮಾ ರಿಲೀಸ್ ಗೆ ವಿರೋಧ: ಟ್ರೆಂಡ್ ಆಯ್ತು #BoycottShahRukhKhan

ಸಿನಿಮಾ ರಿಲೀಸ್ ಗೆ ವಿರೋಧ: ಟ್ರೆಂಡ್ ಆಯ್ತು #BoycottShahRukhKhan

- Advertisement -

ಹಲವು ವರ್ಷಗಳಿಂದ ಬಿಗ್ ಸ್ಕ್ರೀನ್ ನಲ್ಲಿ ಮೋಡಿ ಮಾಡದೇ ಸೈಲೆಂಟ್ ಆಗಿರೋ ಕಿಂಗ್ ಖಾನ್ ಶಾರೂಕ್ ತಮ್ಮ ಬಹುನೀರಿಕ್ಷಿತ ಸಿನಿಮಾ ಪಠಾಣ ರಿಲೀಸ್ ಗೆ ಸಿದ್ಧವಾಗುತ್ತಿದ್ದಾರೆ. ಆದರೆ ಸಿನಿಮಾ ರಿಲೀಸ್ ಹೊತ್ತಿನಲ್ಲೇ ಶಾರೂಕ್ ಗೆ ಸೋಷಿಯಲ್ ಮೀಡಿಯಾ ವಾರ್ ಎದುರಿಸುವಂತಾಗಿದ್ದು, #BoycottShahRukhKhan ಟ್ವೀಟರ್ ಟ್ರೆಂಡ್ ಆರಂಭವಾಗಿದೆ.

ಶಾರೂಕ್ ಖಾನ್ , ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಅಭಿನಯದ ಪಠಾಣ ಸಿನಿಮಾ ಈ ವರ್ಷಾಂತ್ಯದಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಅದರೆ ಶಾರೂಕ್ ಖಾನ್ ವಿರುದ್ಧ ದಂಗೆ ಎದ್ದಂತಿರುವ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಶಾರೂಕ್ ಖಾನ್ ಹಳೆ ಹೇಳಿಕೆಗಳ ಜೊತೆ ಬಾಯ್ಕಾಟ್ ಶಾರೂಕ್ ಖಾನ್ ಟ್ರೆಂಡಿಂಗ್ ಆರಂಭಿಸಿದ್ದಾರೆ.

ಈ ಚಿತ್ರವನ್ನು ಭಾರತದಲ್ಲೇ ಯಾಕೆ ಬಿಡುಗಡೆ ಮಾಡಬೇಕು ಎಂಬ ಪ್ರಶ್ನೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಶಾರೂಕ್ ಖಾನ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ಈ ಟ್ರೆಂಡ್ ಗಾಗಿ ಶಾರೂಕ್ ಖಾನ್ ಈ ಹಿಂದೆ ಕ್ರಿಕೆಟಿಗ ಹಾಗೂ ಹಾಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜೊತೆ ತೆಗೆಸಿಕೊಂಡ ಪೋಟೋಗಳು, ಭಾರತದಲ್ಲಿನ ಅಸಹಿಷ್ಣುತೆ ಬಗ್ಗೆ ಶಾರೂಕ್ ನೀಡಿದ್ದ ಹೇಳಿಕೆಗಳನ್ನು ಮತ್ತೆ ಮುನ್ನಲೆಗೆ ತಂದು ಚರ್ಚೆ ಮಾಡಲಾಗುತ್ತಿದೆ.

ಶಾರೂಕ್ ಖಾನ್ ಭಾರತದಲ್ಲೇ ಇದ್ದರೂ ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಪದೇ ಪದೇ ನೋಯಿಸಿದ್ದಾರೆ ಎಂದು ಶಾರೂಕ್ ವಿರುದ್ಧ ಟ್ರೆಂಡಿಗಳು ಆರೋಪಿಸಿದ್ದಾರೆ.

ಈ ಮಧ್ಯೆ ಶಾರೂಕ್ ಖಾನ್ ಪರ ಕೂಡ ಅಭಿಯಾನ ಆರಂಭವಾಗಿದ್ದು,  #SRKPrideOfIndia #WeLoveShahRukhKhan

 ಟ್ರೆಂಡಿಂಗ್ ಆರಂಭಿಸಲಾಗಿದೆ. ಶಾರೂಕ್ ಖಾನ್ ದೇಶದ ಬಗ್ಗೆ ಮಾತನಾಡಿದ ಒಳ್ಳೆಯ ಸಂಗತಿಗಳು, ಅವರು ನೀಡಿದ ಚ್ಯಾರಿಟಿ ಸೇರಿದಂತೆ ಹಲವು ಸಂಗತಿಗಳನ್ನು ಬೆಳಕಿಗೆ ತರುವ ಪ್ರಯತ್ನವೂ ನಡೆದಿದೆ.

2018 ರ ಬಳಿ ತೆರೆಯಿಂದ ದೂರ ಉಳಿದಿರುವ ಶಾರೂಕ್ ಗೆ ಪಠಾಣ ಸಿನಿಮಾ ಬಹುನೀರಿಕ್ಷಿತ ಬಿಗ್ ಬಜೆಟ್ ಸಿನಿಮಾವಾಗಿದ್ದು, 250 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಕೂಡ ಗೆಸ್ಟ್ ರೋಲ್ ಮಾಡಿದ್ದಾರೆ.

#BoycottShahRukhKhan trend started in india

RELATED ARTICLES

Most Popular