SBI Pension Seva : ಪಿಂಚಣಿದಾರರಿಗೆ ಗುಡ್‌ನ್ಯೂಸ್‌ : ಎಸ್‌ಬಿಐ ಆರಂಭಿಸಿಗೆ ವಿಶೇಷ ವೆಬ್‌ಸೈಟ್‌

ನವದೆಹಲಿ : ಎಸ್‌ಬಿಐ (State Bank Of India) ಪಿಂಚಣಿದಾರರಿಗಾಗಿ ಗುಡ್‌ ನ್ಯೂಸ್‌ ಕೊಟ್ಟಿದೆ. ಎಸ್‌ಬಿಐ ಪಿಂಚಣಿ ಸೇವೆಗೆ ಪ್ರತ್ಯೇಕವಾದ ವೆಬ್‌ಸೈಟ್‌ ಆರಂಭಿಸಿದೆ. ಈ ಸೇವೆಯ ಮೂಲಕ ಎಸ್‌ಬಿಐ ಪಿಂಚಣಿ ಸೇವೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ಲೈಫ್ ಸರ್ಟಿಫಿಕೇಟ್ ಸಲ್ಲಿಸುವ ಸೌಲಭ್ಯವನ್ನು ಒದಗಿಸಲಿದೆ.

ಪ್ರತಿ ಪಿಂಚಣಿದಾರರು ಪಿಂಚಣಿ ಪಡೆಯುವುದನ್ನು ಮುಂದುವರಿಸಲು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಎಸ್‌ಬಿಐ ಪಿಂಚಣಿ ಖಾತೆದಾರರು ತಮ್ಮ ಜೀವಿತ ಪ್ರಮಾಣಪತ್ರ ಅಥವಾ ಜೀವನ್ ಪ್ರಮಾಣ ಪತ್ರವನ್ನು ಅದರ ಬ್ಯಾಂಕ್ ಶಾಖೆಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ಡಿಸೆಂಬರ್ ಅಂತ್ಯದೊಳಗೆ ಸಲ್ಲಿಸಬಹುದು. ಪಿಂಚಣಿದಾರರ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಕನಿಷ್ಠ ನಾಲ್ಕು ವಿಧಾನಗಳಿವೆ- ಕೈಯಾರೆ ಸಲ್ಲಿಕೆ, ಎಸ್‌ಬಿಐ ಶಾಖೆಯಲ್ಲಿ ಡಿಜಿಟಲ್ ಸಲ್ಲಿಕೆ, UMANG ಅಪ್ಲಿಕೇಶನ್ ಮೂಲಕ ಆನ್‌ಲೈನ್, ಅಥವಾ ನಾಗರಿಕ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡುವ ಮೂಲಕ ಅಥವಾ ಜೀವನ ಸೇವಾ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.

ಇತ್ತೀಚೆಗೆ, ಬ್ಯಾಂಕ್ ಎಸ್‌ಬಿಐ ಪಿಂಚಣಿ ಸೇವೆ ಎಂಬ ಪಿಂಚಣಿದಾರರಿಗಾಗಿ ಮೀಸಲಾದ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. ಇದು ಎಸ್‌ಬಿಐನ ಪಿಂಚಣಿದಾರರು ಲಾಗಿನ್ ಆಗುವ ಮತ್ತು ತಕ್ಷಣವೇ ತಮ್ಮ ಪಿಂಚಣಿ ಸಂಬಂಧಿತ ವಿವರಗಳನ್ನು ಪರಿಶೀಲಿಸಬಹುದಾಗಿದೆ. ಪ್ರಮುಖವಾಗಿ ಬ್ಯಾಲೆನ್ಸ್‌, ಪೆನ್ಶನ್ ಸ್ಲಿಪ್/ನಮೂನೆ 16 ರ ಡೌನ್ಲೋಡ್, ಪಿಂಚಣಿ ವಿವರ, ಹೂಡಿಕೆಗೆ ಸಂಬಂಧಿಸಿದ ವಿವರ, ಜೀವನ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.

( SBI Pension seva Get All your pension Details in Just One Click )

Comments are closed.