ಸದ್ಯ ಸಿನಿಮಾ ರಂಗದಲ್ಲಿ ತಲೈವಿ ಹವಾ ಜೋರಾಗಿದೆ. ಮೂರು ದಿನಗಳ ಹಿಂದೆಯಷ್ಟೇ ತೆರೆಕಂಡ ಸಿನಿಮಾದ ಲಾಭ ನಷ್ಟದ ಲೆಕ್ಕಾಚಾರ ನಡೆದಿರುವಾಗಲೇ ನಟಿ ಕಂಗನಾ ರನಾವುತ್ ಟಿವಿಶೋದಲ್ಲಿ ಹಲವು ವಿಚಾರ ಹಂಚಿಕೊಂಡಿದ್ದಾರೆ.

ಸದಾ ವಿವಾದಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ನಟಿ ಕಂಗನಾ ಟ್ವಿಟರ್ ಅಕೌಂಟ್ ನ್ನು ಟ್ವಿಟರ್ ಶಾಶ್ವತವಾಗಿ ರದ್ದುಗೊಳಿಸಿದೆ.

ಈ ಮಧ್ಯೆ ತಲೈವಿ ಸಿನಿಮಾ ಪ್ರಮೋಶನ್ ಗಾಗಿ ಟಿವಿಶೋದಲ್ಲಿ ಪಾಲ್ಗೊಂಡಿದ್ದ ಕಂಗನಾ, ತಮ್ಮ ಟ್ವಿಟರ್ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. ನನ್ನ ಟ್ವಿಟರ್ ಅಕೌಂಟ್ ಇದ್ದಾಗ ಪ್ರತಿನಿತ್ಯ 200 ಎಫ್ಐ ಆರ್ (FIR) ದಾಖಲಾಗುತ್ತಿತ್ತು ಎಂದು ಕಂಗನಾ ಹಾಸ್ಯಮಯವಾಗಿ ಹೇಳಿದ್ದಾರೆ.

ಮಾತ್ರವಲ್ಲ ಈಗ ಆ ಸಮಸ್ಯೆಯಿಂದ ಮುಕ್ತವಾಗಿದ್ದೇನೆ ಎಂದಿದ್ದಾರೆ. ಅಷ್ಟೇ ಅಲ್ಲ ಮದುವೆ ವಿಚಾರವನ್ನು ಮುಕ್ತವಾಗಿ ಮಾತನಾಡಿದ ಕಂಗನಾ ನಾನು ತುಂಬ ಮಾತನಾಡುತ್ತೇನೆ. ಹೀಗಾಗಿ ನನಗೆ ತುಂಬ ಕಡಿಮೆ ಮಾತನಾಡುವ ಹಾಗೂ ಜಿಮ್ ಗಿಂತ ಯೋಗ ಮಾಡುವ ಹುಡುಗ ಬೆಸ್ಟ್ ಎಂದಿದ್ದಾರೆ.

ಶೋ ಉದ್ದಕ್ಕೂ ತುಂಬ ಹುಶಾರಾಗಿ ಪ್ರಶ್ನೆಗಳಿಗೆ ಉತ್ತರಿಸಿದ ಕಂಗನಾ ಯಾವುದೇ ವಿವಾದಕ್ಕೆ ಈಡಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಕಾಂಟ್ರಾವರ್ಸಿ ಪ್ರಶ್ನೆಗಳಿಗೆ ಜಾಣ್ಮೆಯಿಂದ ಉತ್ತರಿಸಿದ್ದಾರೆ.
ಇದನ್ನೂ ಓದಿ : ಯೂರೋಪ್ ನಲ್ಲಿ ಹಾಟ್ ಪೋಟೋಶೂಟ್….! ಕಂಗನಾ ಬೋಲ್ಡ್ ಲುಕ್ ವೈರಲ್….!!
ಇದನ್ನೂ ಓದಿ : ಕಂಗನಾ ಇನ್ ಸ್ಟಾಗ್ರಾಂ ಖಾತೆ ಹ್ಯಾಕ್ ; ಇದೊಂದು ಅಂತರಾಷ್ಟ್ರೀಯ ಷಡ್ಯಂತ್ರ ಎಂದ ನಟಿ
(200 FIR registered per day from Twitter: Kangana Thalavii )