ಸೋಮವಾರ, ಏಪ್ರಿಲ್ 28, 2025
HomeCinemaAmitabh Bachchan :ಬಿಗ್ ಬೀ ಮೊಮ್ಮಗಳ ಅನ್ ಲೈನ್ ಕ್ಲಾಸ್ ಸಹಾಯಕರ್ಯಾರು? ಅಮಿತಾಬ್ ರಿವೀಲ್‌ಮಾಡಿದ್ರು ಇಂಟ್ರಸ್ಟಿಂಗ್...

Amitabh Bachchan :ಬಿಗ್ ಬೀ ಮೊಮ್ಮಗಳ ಅನ್ ಲೈನ್ ಕ್ಲಾಸ್ ಸಹಾಯಕರ್ಯಾರು? ಅಮಿತಾಬ್ ರಿವೀಲ್‌ಮಾಡಿದ್ರು ಇಂಟ್ರಸ್ಟಿಂಗ್ ಸಂಗತಿ

- Advertisement -

ಕೊರೋನಾ ಸಂಕಷ್ಟ ಕಲಿಯುವ ಮಕ್ಕಳನ್ನು ಮನೆಯಲ್ಲೇ ಕೂಡಿ ಹಾಕಿದೆ. ಇದಕ್ಕೆ ಸೆಲೆಬ್ರೆಟಿಗಳ ಮಕ್ಕಳು ಹೊರತಲ್ಲ. ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮೊಮ್ಮಗಳು ಹಾಗೂ ವಿಶ್ವಸುಂದರಿ ಐಶ್ವರ್ಯಾ ರೈ ಮಗಳ ಆನ್ ಲೈನ್ ಕ್ಲಾಸ್ ಬಗ್ಗೆ ಇಂಟ್ರಸ್ಟಿಂಗ್ ಸಂಗತಿ ಹೊರಹಾಕಿದ್ದಾರೆ‌.

ಅಮಿತಾಬ್ ಬಚ್ಚನ್ ನಡೆಸಿಕೊಡುವ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡಪತಿ ಸೀಸನ್ ೧೩ ಆರಂಭವಾಗಿದ್ದು ಈ ಶೋದಲ್ಲಿ ಹಲವು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಗ್ ಬೀ ಶೇರ್ ಮಾಡಿದ್ದಾರೆ.

ಇತ್ತೀಚಿನ ಎಪಿಸೋಡ್ ವೊಂದರಲ್ಲಿ ಗ್ವಾಲಿಯರ್ ನ ಶಾಲಾ ಮುಖ್ಯೋಪಾಧ್ಯಾಯರು ಪಾಲ್ಗೊಂಡಿದ್ದರು. ಅವರೊಂದಿಗೆ ಕೊರೋನಾ ಬದಲಾಯಿಸಿದ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡಿದ ಬಿಗ್ ಬಿ ಅನ್ ಲೈನ್ ಕಲಿಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ನಮ್ಮ ಮನೆಯಲ್ಲೂ ಅನ್ ಲೈನ್ ತರಗತಿಗೆ ಹಾಜರಾಗುವ ಪುಟಾಣಿ ವಿದ್ಯಾರ್ಥಿಯೊಬ್ಬರು ಇದ್ದಾರೆ ಎಂದು ಮೊಮ್ಮಗಳ ವಿಚಾರ ಪ್ರಸ್ತಾಪಿಸಿದ್ದಾರೆ.

ಮಾತ್ರವಲ್ಲ ಮೊಮ್ಮಗಳು ಆರಾಧ್ಯಾ ರೈಬಚ್ಚನ್ ಆನ್ ಲೈನ್ ಕ್ಲಾಸ್ ಗೆ ತಂದೆ ಅಭಿಷೇಕ್ ಬಚ್ಚನ್ ಹಾಗೂ ತಾಯಿ ಐಶ್ವರ್ಯಾ ರೈ ಬಚ್ಚನ್ ಸಹಾಯ ಮಾಡುತ್ತಾರೆ ಎಂಬುದನ್ನು ಹೇಳಿದ್ದಾರೆ.

ನಾನು ಮೊಮ್ಮಗಳ ಒಂದೆರಡು ತರಗತಿಗಳನ್ನು ಕುಳಿತು ಕೇಳಿದ್ದೇನೆ. ಅರ್ಥಪೂರ್ಣವಾಗಿ ಮನದಟ್ಟಾಗುವಂತೆ ಬೋಧಿಸುತ್ತಾರೆ ಎಂದು ಅಮಿತಾಬ್ ಹೇಳಿದ್ದಾರೆ. ಮಾತ್ರವಲ್ಲ ಮೊಮ್ಮಗಳಿಗೆ ಅವಳ ಪಾಲಕರು ಕಂಪ್ಯೂಟರ್ ಬಳಸುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದಾರೆ ಎಂದಿದ್ದಾರೆ.

ಬಿಗ್ ಬೀ ಕೌನ್ ಬನೇಗಾ ಕರೋಡಪತಿಯ ಸೀಸನ್ ೧೩ ನ್ನು‌ವಿಭಿನ್ನವಾಗಿ ನಿರ್ವಹಿಸುತ್ತಿದ್ದು ಈ ಸೀಸನ್ ನಲ್ಲಿ ಪ್ರತಿ ಶುಕ್ರವಾರ ಒಬ್ಬೊಬ್ಬ ಸೆಲೆಬ್ರೆಟಿಗಳು ಭಾಗವಹಿಸಲಿದ್ದಾರೆ.ಇತ್ತೀಚಿಗೆ ಸೌರವ್ ಗಂಗೂಲಿ ಹಾಗೂ ಸೆಹ್ವಾಗ್ ಭಾಗವಹಿಸಿದ್ದು , ಸದ್ಯದಲ್ಲೇ ದೀಪಿಕಾ ಪಡುಕೋಣೆ ಕೂಡ ಭಾಗವಹಿಸಲಿದ್ದಾರಂತೆ.

 Amitabh Bachchan talked about Aaradhya bachchan onlineclass.

RELATED ARTICLES

Most Popular