ಭಾನುವಾರ, ಏಪ್ರಿಲ್ 27, 2025
HomeCinemaParipaswan: ಮತ್ತು ಬರಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ:ಮುಂಬೈಪ್ರೊಡಕ್ಷನ್ ಹೌಸ್ ವಿರುದ್ಧ ಮಿಸ್ ಇಂಡಿಯಾ ಯೂನಿವರ್ಸ್ ಆರೋಪ

Paripaswan: ಮತ್ತು ಬರಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ:ಮುಂಬೈಪ್ರೊಡಕ್ಷನ್ ಹೌಸ್ ವಿರುದ್ಧ ಮಿಸ್ ಇಂಡಿಯಾ ಯೂನಿವರ್ಸ್ ಆರೋಪ

- Advertisement -

ರಾಜ್ ಕುಂದ್ರಾ ಮೇಲಿನ ಆರೋಪಗಳು ಬಲವಾಗುತ್ತಿರುವ ಬೆನ್ನಲ್ಲೇ ಮುಂಬೈ ಪೊಲೀಸರಿಗೆ ಮತ್ತೊಂದು ಪ್ರಕರಣ ಎದುರಾಗಿದ್ದು, ಮಾಜಿ ಮಿಸ್ ಇಂಡಿಯಾ ಪರಿ ಪಾಸ್ವಾಲ್ ತಮಗೆ ಮತ್ತು ಬರಿಸಿ ಅಶ್ಲೀಲ ಚಿತ್ರ ತಯಾರಿಸಿಕೊಳ್ಳಲಾಗಿದೆ ಎಂದು ಮುಂಬೈ ಪ್ರೊಡಕ್ಷನ್ ಹೌಸ್ ವಿರುದ್ಧ ಆರೋಪ ಮಾಡಿದ್ದಾರೆ.

2019 ರಲ್ಲಿ ಮಿಸ್ ಇಂಡಿಯಾ ಯೂನಿವರ್ಸ್ ಟೈಟಲ್ ಗೆದ್ದ ಪರಿ ಬಿಸ್ವಾಲ್ ಮುಂಬೈನ ಪ್ರೊಡಕ್ಷನ್ ಹೌಸ್ ವೊಂದಕ್ಕೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೇಳಿಕೊಂಡು ಹೋಗಿದ್ದರು. ಈ ವೇಳೆ ತನಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ಹಾಕಿ ಬಳಿಕ ಅಶ್ಲೀಲ ಚಿತ್ರ ಶೂಟಿಂಗ್ ಮಾಡಿಕೊಳ್ಳಲಾಗಿದೆ ಎಂದು ಪರಿ ಆರೋಪಿಸಿದ್ದಾರೆ.

ಮಿಸ್ ಇಂಡಿಯಾ ಯೂನಿವರ್ಸ್ ಪರಿ ಮುಂಬೈ ಪ್ರೊಡಕ್ಷನ್ ಹೌಸ್ ವಿರುದ್ಧ ಆರೋಪ ಮಾಡಿದ್ದು, ಆದರೆ ಪ್ರೊಡಕ್ಷನ್ ಹೌಸ್ ಹೆಸರನ್ನು ಬಹಿರಂಗಪಡಿಸಿಲ್ಲ. ಅಲ್ಲದೇ ಅಮಾಯಕ ಹುಡುಗಿಯರನ್ನು ಬಲೆಗೆ ಹಾಕಿಕೊಂಡು ಅಶ್ಲೀಲ ಚಿತ್ರ ಶೂಟಿಂಗ್ ಮಾಡುವ ತಂಡ ಮುಂಬೈನಲ್ಲಿದೆ ಎಂದು ಪರಿ ಆರೋಪಿಸಿದ್ದಾರೆ.

ಈಗಾಗಲೇ ಪತಿ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಪರಿ ಈಗ ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನ್ಯಾಯಬೇಕೆಂದು ಒತ್ತಾಯಿಸಿದ್ದಾರೆ.

ಆದರೆ ಪರಿ ಪಾಸ್ವಾನ ಪತಿ ಸೂರಜ್ ಕುಟುಂಬಸ್ಥರು  ಪರಿ ವಿರುದ್ಧ ಆರೋಪ ಮಾಡಿದ್ದು, ಪರಿ ಮೊದಲಿನಿಂದಲೂ ಪೋರ್ನ್ ವಿಡಿಯೋದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :  ಪತಿಯ ಆಸ್ತಿಯೂ ಬೇಡ : ಮಕ್ಕಳಿಗೆ ಪತಿಯ ಓಡನಾಟವೂ ಬೇಡ: ಶಿಲ್ಪಾ ಶೆಟ್ಟಿ ಧೃಡ ನಿರ್ಧಾರ

ಇದನ್ನೂ ಓದಿ : Shamitha shetty: ಆತ ನನ್ನೊಂದಿಗೆ ಮಿತಿ ಮೀರಿ ವರ್ತಿಸಿದ್ದ…! ಶಮಿತಾ ಶೆಟ್ಟಿ ಬೊಟ್ಟು ಮಾಡಿದ್ಯಾರತ್ತ ಗೊತ್ತಾ..?!

(Pari Paswan claims Mumbai production house shot porn video after intoxicating her)

RELATED ARTICLES

Most Popular